ಸೊಲ್ಲಾಪುರ, ಆ. 3: ತೀರ್ಥಕ್ಷೇತ್ರ ಅಕ್ಕಲ್ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ಭೋಸ್ಲೆ ಅವರಿಗೆ ರಾಜ್ಯದ ಧಾರ್ಮಿಕ ಕ್ಷೇತ್ರದ ಪ್ರತಿಷ್ಠಿತ ಪುಣೆಯ ಓಂ ಜೈ ಶಂಕರ್ ಪ್ರತಿಷ್ಠಾನ್ ವತಿಯಿಂದ ರಾಜ್ಯ ಮಟ್ಟದ ಓಂ ಜೈ ಶಂಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅನ್ನಛತ್ರ ಮಂಡಳದ ಹಳೆಯ ಮಹಾಪ್ರಸಾದ ಗೃಹದಲ್ಲಿ ಶ್ರೀ ಶಂಕರ್ ಮಹಾರಾಜ್ ಭಕ್ತರ 4ನೇ ಸ್ನೇಹ ಸಮಾವೇಶದಲ್ಲಿ ನಾಸಿಕ್‌ನ ಮಾಧವನಾಥ ಮಹಾರಾಜರ ಹಸ್ತದಿಂದ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆಜಯರಾಜೆ ಭೋಸ್ಲೆ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಜನ್ಮೆ ಜಯರಾಜೆ ಭೋಸ್ಲೆ ಅವರ ಅವರ ನೇತೃತ್ವದಲ್ಲಿ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳವನ್ನು 1988 ರಲ್ಲಿ ಗುರುಪೂರ್ಣಿಮೆಯಂದು ಸ್ಥಾಪಿಸಿದರು. ಇಂದು ಸುಮಾರು 15ರಿಂದ 20 ಸಾವಿರ ಸ್ವಾಮಿ ಭಕ್ತರು ಪ್ರತಿದಿನ ಮಹಾಪ್ರಸಾದ ಸ್ವೀಕರಿಸುತ್ತಿದ್ದಾರೆ. ಅನ್ನದಾಸೋಹದೊಂದಿಗೆ ಮಂಡಳದ ವತಿಯಿಂದ ಸಮಾಜಸೇವೆ ಕಾರ್ಯ ಮಾಡಲಾಗುತ್ತಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಮಂಡಳದ ಕೊಡುಗೆ ಅಪಾರವಾಗಿದೆ. ಮಂಡಳದ ನಿಯೋಜಿತ ಮಹಾಪ್ರಸಾದ ಗೃಹ ಐದು ಅಂತಸ್ತಿನ ಕಟ್ಟಡದ ಕಾರ್ಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅನ್ನಛತ್ರದಲ್ಲಿ ಸ್ವಚ್ಛತೆಗೆ ಮಹತ್ವ ನೀಡಲಾಗಿದೆ. ಆದ್ದರಿಂದ ಜನ್ಮೆಜಯರಾಜೆ ಭೋಸ್ಲೆ ಅವರ ಕಾರ್ಯವನ್ನು ಗುರುತಿಸಿ ಪುಣೆಯ ಸಂಸ್ಥೆಯು ಈ ಪ್ರಶಸ್ತಿಯನ್ನು ಪ್ರದಾನಿಸಿದೆ.
ಈ ಸಂದರ್ಭದಲ್ಲಿ ಶ್ರೀ ವಿಶ್ವೇಶ್ವರ ಸ್ವಾಮಿ ಮಹಾರಾಜ್ ಮಂಗಲ್ ಭಕ್ತ ಸೇವಾ ಮಂಡಳದ ಅಧ್ಯಕ್ಷ ರಾರಾಭಾವು ಕೊಠಾರಿ, ಡಾ| ಜಾನ್ ಡೂಯಿಂಗ್ ಹೇಗ್ ಜರ್ಮನಿ, ಸುರೇಖಾ ಪುರಾಣಿಕ್, ಸದ್ಗುರು ಪಿಟಲ್ ಮಹಾರಾಜ್, ಹಿರಿಯ ಲೇಖಕ ಡಾ| ಯಶ್ವಂತ್ರಾವ್ ಪಾಟೀಲ್, ಡಾ| ರಾಧಿಕಾ ಪಾರಾಸನಿಸ್, ಹಿರಿಯ ಚಿಂತಕ ಆನಂದ್ ಜೋಗದಂಡ್, ಡಾ| ಶಾಮಾ ಕುಲಕರ್ಣಿ ನಾಸಿಕ್, ಎಚ್.ಪಿ. ಮಾಧವನಾಥ ಮಹಾರಾಜ್ ಪಾಥರ್ಡಿ, ಪೇಂಟರ್ ಕಾಕಾ ಕಡ್ಲಾಸ್ಕರ್, ಬಾರ್ವೇಕಾಕಾ ನಾಸಿಕ್, ಸುರೇಂದ್ರ ಭಾನೋಸೆ, ಬೃಜೇಶ್ ಅಯ್ಯರ್ ಪುಣೆ, ಮಿಲಿಂದ್ ಮಗರ್ ನಾಸಿಕ್, ವಿಜಯ್ ಕೇದಾರಿ ಮಹಾರಾಜ್, ಅನಿಲ್ ದಕ್ಸಿತ್ ಮಹಾರಾಜ್ ಪುಣೆ, ಡಾ| ರಾಜೇಂದ್ರ ಮುಲೆ ನಾಸಿಕ್, ಘೋಟ್ವಾಡೆಕರ್ ಮಹಾರಾಜ್ ಪುಣೆ, ಗೋಪಾಲ್ ದಾಲ್ವಿ, ಅಜಿತ್ ದೇಶಮುಖ್, ಅಂಜಲಿ ಮರೋಡ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗಾಗಿ ಓಂ ಜೈ ಶಂಕರ್ ಪ್ರತಿಷ್ಠಾನ್ ಅಧ್ಯಕ್ಷ ಪಪ್ಪಾ ಪುರಾಣಿಕ್, ಬಾಲಕಿಸಾನ್ ರಾಠಿ, ಗಜಾನನ ಪತ್ಕಿ, ರಮೇಶ್ ಅನ್ನಾ ಉಮರಗೆ, ಡಾ| ಅಮಿತ್ ಶೇಷ, ವಿಜಯ್ ಸರಾಫ್, ಧನಶ್ರೀ ಘೋರ್ಪಡೆ, ವಿವೇಕಾ ಟಕಲೆ, ದೀಪಕ್ ಸೋನಾರ್, ವೈಭವ್ ಪಾಂಡೆ, ಶ್ರೀಪಾದ್ ಪುರಾಣಿಕ್,ಅಜಿತ್ ಕ್ಷೀರ್‌ಸಾಗರ್ ಮೊದಲಾದವರುಸಹಕರಿಸಿದರು.