Advertisement
ಮುಂಬಯಿಗೆ ಮಳೆಗಾಲದಲ್ಲಿ ತಿರುಗಾಟಕ್ಕೆ ಬರುವ ಯಕ್ಷಗಾನ, ತಾಳಮದ್ದಳೆ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಯಕ್ಷಗಾನದ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ಜು.27 ರಂದು ಮೀರಾರೋಡ್‌ನಲ್ಲಿ ಕುಮಾರ ವಿಜಯ ಎಂಬ ಯಕ್ಷಗಾನ ಪ್ರದರ್ಶನವು ಶ್ರೀ ಲಕ್ಷ್ಮೀ ಜನಾರ್ದನ ಬ್ರಹ್ಮಸಿರಿ ಯಕ್ಷಗಾನ ಬಳಗ ಕೊಟ್ರಪಾಡಿ ಇದರ ವ್ಯವಸ್ಥಾಪನೆಯಿಂದ ನೆರವೇರಿತು .
Related Articles
Advertisement
ಪಾತ್ರವರ್ಗದಲ್ಲಿ ದೇವೇಂದ್ರನಾಗಿ ಕು| ಛಾಯಾಲಕ್ಷ್ಮೀ ಆರ್. ಕೆ. , ಶಚಿದೇವಿಯಾಗಿ ಕು| ದಿವ್ಯಾ , ಅಗ್ನಿ ಹಾಗೂ ರೇಣುಕಾ ಪಾತ್ರದಲ್ಲಿ ಕು| ಪ್ರತಿಷ್ಠಾ ರೈ , ವರುಣ ಹಾಗೂ ಭಾನುಕನ ಪಾತ್ರದಲ್ಲಿ ಕು| ಪೃಥ್ವೀ ಹೆಗ್ಡೆ ಪಾತ್ರಕ್ಕೆ ಜೀವ ತುಂಬಿದ್ದಾರೆ . ಶೂರ ಪದ್ಮಾಸುರನಾಗಿ ಸಾಯಿಸುಮ ಮೆರೆದಿದ್ದಾರೆ . ಉತ್ತಮ ಸಂಭಾಷಣೆ ಮತ್ತು ದೈತ್ಯ ಕಿರೀಟ ಪಾತ್ರದ ಶೋಭೆಯಾಗಿತ್ತು . ನೀಲಕೇಶನಾಗಿ ಕು| ನವ್ಯಾ , ದೃಢ ಕೇಶನಾಗಿ ಕು| ವೈಷ್ಣವಿ ರಾವ್ , ನಾರದ , ಬೃಹಸ್ಪತಿ , ಶಾಸ್ತಾರ ಈ ಮೂರು ಪಾತ್ರಗಳನ್ನು ಕು| ಅಶ್ವಿನಿ ಆಚಾರ್ಯ ನಿಭಾಯಿಸಿದ್ದಾರೆ . ವಸುಂಧರಾ ಹರೀಶ್ ಶೆಟ್ಟಿ ಜಯಂತನಾಗಿ ಉತ್ತಮ ಕುಣಿತ ಹಾಗೂ ವಾಕ್ಚತುರ್ಯವನ್ನು ಪ್ರದರ್ಶಿಸಿದ್ದಾರೆ . ಭಾನುಕೋಪ ನಾಗಿ ಮಾಲತಿ ವೆಂಕಟೇಶ್ , ಈಶ್ವರನಾಗಿ ಕು| ವೈಷ್ಣವಿ ರಾವ್ , ಪಾರ್ವತಿಯಾಗಿ ಕು| ಪ್ರತಿಷ್ಠಾ ರೈ , ಸಿಂಹಸ್ಯ ನಾಗಿ ಕು| ಪೃಥ್ವಿ ಹೆಗ್ಡೆ , ಹಿರಣ್ಯಕನಾಗಿ ಕು| ಶ್ರೀ ರಕ್ಷಾ ಟಿ .ಎನ್. ಯಶಸ್ವಿ ಪ್ರದರ್ಶನ ನೀಡಿದ್ದಾರೆ . ಘೋರ ಅಜಮುಖೀಯಾಗಿ ಪೂರ್ಣಿಮಾ ಯತೀಶ್ ಶೆಟ್ಟಿ ಯವರ ಅಭಿನಯ ಪಾತ್ರದ ಘೋರತೆಯನ್ನು ಜೀವಂತವಾಗಿರಿಸಿತ್ತು . ಮಾಯಾ ಅಜಮುಖೀಯಾಗಿ ಸುಷ್ಮಾ ಮೈರ್ಪಾಡಿಯವರ ಮೋಹಕ ನೃತ್ಯ ಮೈ ನವಿರೇಳಿಸಿತು. ಕು| ಮೈತ್ರಿ ಭಟ್ ಮವ್ವಾರ್‌ರ ದೂರ್ವಾಸ – ಮಾಯಾ ಅಜಮುಖೀಯ ಶೃಂಗಾರ ಮಾತುಕತೆ ಚೆನ್ನಾಗಿ ಮೂಡಿ ಬಂದಿತ್ತು . ಕುಮಾರ ನಾಗಿ ಕು| ದಿವ್ಯಾ ಹೊಳ್ಳ ಅವರ ಕುಣಿಕೆ ಮತ್ತು ಮಾತುಗಾರಿಕೆ ಚೆನ್ನಾಗಿ ಮೂಡಿ ಬಂದಿತ್ತು .
ಅಶೋಕ್ ವಳದೂರು