ಸುಳ್ಯ: ತೆಂಕುತಿಟ್ಟು ಯಕ್ಷಗಾನದ ಅಗ್ರ ಭಾಗವತ ಬಲಿಪ ನಾರಾಯಣ ಭಾಗವತ ಅವರಿಗೆ ಈ ಸಾಲಿನ ಪದ್ಯಾಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪದ್ಯಾಣ ಕುಟುಂಬದ ಹಿರಿಯ ರಾದ ದಿ| ಪದ್ಯಾಣ ಪುಟ್ಟು ಭಾಗವತ ಅವರ ನೆನಪಿನಲ್ಲಿ ಪದ್ಯಾಣ ಪ್ರಶಸ್ತಿ ಸ್ಥಾಪಿಸ ಲಾಗಿದ್ದು, ಇದನ್ನು ಬೆಳ್ಳಾರೆಯ ಅಜಪಿಲ ದೇವಾಲಯದ ಸಭಾಭವನ ದಲ್ಲಿ ನಡೆದ ಭಾಗವತ ಪದ್ಯಾಣ ಗಣಪತಿ ಭಟ್ಟರ ಪುತ್ರ ಕಾರ್ತಿಕೇಯ ಮತ್ತು ಹರಿಹರ ಕೃಷ್ಣಪ್ಪ ಹೆಗಡೆ ಅವರ ಪುತ್ರಿ ವೀಣಾ ಅವರ ವಿವಾಹ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಪದ್ಯಾಣ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಅಧ್ಯಕ್ಷ ಯು. ಗಂಗಾಧರ ಭಟ್, ಹಿರಿಯ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯ ಮುಖ್ಯ ಅತಿಥಿಗಳಾಗಿದ್ದರು.
ಕಲಾವಿದ ವಾಸುದೇವ ರಂಗಾ ಭಟ್ ಅಭಿನಂದನ ಭಾಷಣ ಮಾಡಿ ತೆಂಕುತಿಟ್ಟಿನ ಪಾರಂಪರಿಕ ಶೈಲಿ ಯೊಂದಕ್ಕೆ ಸಲ್ಲುವ ಗೌರವ ಇದಾ ಗಿದ್ದು, ದೇಶದ ಪ್ರಾಚೀನ ರಂಗಭೂಮಿಯ ಅಗ್ರಪಂಕ್ತಿಯ ಕಲಾವಿದರಲ್ಲಿ ಬಲಿಪರು ಸ್ಥಾನ ಪಡೆದಿದ್ದಾರೆ. ಪದ್ಯಾಣ ಮತ್ತು ಬಲಿಪ – ಎರಡು ಗುರುಕುಲಗಳು ಇಂದಿನ ಸಮಾರಂಭದಲ್ಲಿ ಒಗ್ಗೂಡಿವೆ ಎಂದರು.
ಪದ್ಯಾಣ ಗೋಪಾಲಕೃಷ್ಣ ಭಟ್, ಪದ್ಯಾಣ ಗಣಪತಿ ಭಟ್ ಉಪಸ್ಥಿತ ರಿದ್ದರು. ಪದ್ಯಾಣ ನಾರಾಯಣ ಭಟ್ ಸ್ವಾಗತಿಸಿ, ನಾ. ಕಾರಂತ ಪೆರಾಜೆ ನಿರೂ ಪಿಸಿ ದರು. ಬಳಿಕ ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯ ಲಾಟ ನಡೆಯಿತು.