Advertisement

ವರ್ತಮಾನದ ತಲ್ಲಣಗಳ ಮುಖಾಮುಖಿ ವೃತ್ತದ ವೃತ್ತಾಂತ 

06:00 AM May 25, 2018 | |

ಭೂಮಿಕಾ ಹಾರಾಡಿ ರಂಗ ತಂಡದವರು ಬ್ರಹ್ಮಾವರದಲ್ಲಿ ನಡೆದ “ಬಣ್ಣ’ ನಾಟಕೋತ್ಸವದಲ್ಲಿ ಪ್ರದರ್ಶಿಸಿದ “ವೃತ್ತದ ವೃತ್ತಾಂತ’ ನಾಟಕ ರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಸಂದೇಶವನ್ನು ನೀಡುವಲ್ಲಿ ಸಫ‌ಲವಾಯಿತು.

Advertisement

ಎಚ್‌.ಎಸ್‌. ವೆಂಕಟಮೂರ್ತಿ ಮತ್ತು ಜಿ.ಎನ್‌.ರಂಗನಾಥ್‌ ಇವರ ಕೃತಿ ಆಧರಿಸಿ ರಚಿಸಿದ ಈ ನಾಟಕ ವರ್ತಮಾನದ ತಲ್ಲಣಗಳೊಂದಿಗೆ ನೇರವಾಗಿ ಮುಖಾಮುಖೀಯಾಗುವ ಪ್ರಯೋಗವಾಗಿದೆ. ಅಧಿಕಾರದ ಆಸೆಯಿಂದಾಗಿ ಛಿದ್ರವಾಗುವ ರಾಜನ ಕುಟುಂಬ ಮತ್ತು ಅದರ ಒಂದು ಜೀವಂತ ತುಣುಕಿನ ಸುತ್ತ ಹೆಣೆದ ಸೊಗಸಾದ ನಾಟಕವಿದು. ನಾಟಕದ ಆದಿಯಲ್ಲಿಯೇ ರಾಜನು ಪ್ರಜೆಗಳ ಕ್ಷೇಮ ವಿಚಾರಿಸುವ ಸಭೆಯ ದೃಶ್ಯ ಮಾರ್ಮಿಕವಾಗಿ ಮೂಡಿ ಬಂದಿದೆ. ನೆಪ ಮಾತ್ರಕ್ಕೆ ಸಭೆ ನಡೆಸುವ ಇಂದಿನ ಅವಕಾಶವಾದಿ ರಾಜಕಾರಣಿಗಳನ್ನು ಅಣಕಿಸುವಂತಿರುವ ಈ ದೃಶ್ಯ ಪ್ರಜೆಗಳೆಡೆಗಿನ ಆಳುವವರ ತಿರಸ್ಕಾರವನ್ನು ಬಿಂಬಿಸುತ್ತದೆ.

 ಪಟ್ಟದಾಸೆಗಾಗಿ ಅಣ್ಣನ ಮೇಲೆಯೇ ದಂಗೆಯೆದ್ದು ರಾಜ್ಯವನ್ನು ಹಿಡಿತಕ್ಕೆ ಪಡೆವ ಯುವರಾಜ, ಪ್ರಾಣ ಉಳಿಸಿಕೊಳ್ಳಲು ಓಡುವ ರಾಣಿ ತನ್ನ ಸೀರೆ ಒಡವೆಗಳಂತಹ ವೈಭೋಗದ ವಸ್ತುಗಳನ್ನು ಹೊತ್ತೂಯ್ದು ಹಸುಗೂಸನ್ನು ಅರಮನೆಯಲ್ಲಿ ಬಿಟ್ಟು ಹೋಗುವ ದೃಶ್ಯ ಮನುಷ್ಯನು ಐಷಾರಾಮದ ಆಸೆಗಾಗಿ ಮನುಷ್ಯತ್ವವನ್ನು ಮತ್ತು ಸಂಬಂಧಗಳನ್ನು ಕಳೆದುಕೊಳ್ಳುವ ವಾಸ್ತವವನ್ನು ದಾಖಲಿಸುತ್ತವೆ. ಪ್ರೀತಿ, ಕರುಣೆ, ಮಾನವೀಯತೆ ಅರಮನೆಯಲ್ಲಿ ಅಥವಾ ಸಿರಿತನದಲ್ಲಿ ಇಲ್ಲ, ಅದು ಇರುವುದಾದರೆ ಬಡತನದಲ್ಲಿ ಎನ್ನುವುದನ್ನು ವಲ್ಲಿಯ ಪಾತ್ರದ ಮೂಲಕ ಹೇಳಲಾಗಿದೆ. ಸಾವಿನ ದವಡೆಯಲ್ಲಿದ್ದ ಮಗುವನ್ನು ಬಿಟ್ಟು ಹೋಗಲಾರದೆ ಎದೆಗಪ್ಪಿಕೊಂಡು ಓಡುವ ವಲ್ಲಿ ಮಾನವೀಯತೆಯ ರೂಪಕವಾಗಿ ನಿಲ್ಲುತ್ತಾಳೆ. ಅಲ್ಲಿಂದ ಆಕೆ ಮಗುವನ್ನು ಉಳಿಸಿಕೊಳ್ಳಲು ತಾನೇ ತಾಯಿಯಾಗಿ ಪಡುವ ಪರಿಪರಿಯಾದ ಕಷ್ಟಗಳು ಭಾವುಕವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಒಂದೆಡೆ ಕಿತ್ತು ತಿನ್ನುವ ಹಸಿವು ಮತ್ತೂಂದೆಡೆ ಮಗುವನ್ನು ಕೊಲ್ಲಲು ಬೆನ್ನಟ್ಟಿರುವ ಯವರಾಜನಿಂದ ಮಗುವನ್ನು ಪಾರು ಮಾಡುವ ವಲ್ಲಿಯ ಹೋರಾಟ ಒಂದು ದೃಶ್ಯಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ ಕಲಾವಿದರು. ವಲ್ಲಿ ತನ್ನ ಪ್ರಿಯಕರನನ್ನು ಒಲ್ಲದ ಮನಸ್ಸಿನಿಂದ ಯುದ್ಧಕ್ಕೆ ಕಳುಹಿಸಿಕೊಡುವ ಸನ್ನಿವೇಶ ಎಲ್ಲಾ ಸೈನಿಕರ ಮಡದಿಯರ ನೋವಿನ ರೂಪಕದಂತೆ ಕಾಡುತ್ತದೆ. ಯುದ್ಧ ಮುಗಿಸಿ ಬರುವೆನೆಂದು ಹೇಳಿಹೋದ ಮಲ್ಲನಿಗಾಗಿ ವಲ್ಲಿ ಎಂಟು ವರ್ಷ ಕಾಯುತ್ತಾಳೆ. ಅಂತೂ ಯುದ್ಧ ಮುಗಿದು ಮಲ್ಲ ಅವಳನ್ನು ಸೇರುತ್ತಾನೆ. ಅಲ್ಲಿಗೆ ನಾಟಕ ಹೊಸ ತಿರುವು ಪಡೆದುಕೊಳ್ಳುತ್ತದೆ. ಯುವರಾಜನ ಜೊತೆ ಒಪ್ಪಂದ ಮಾಡಿಕೊಂಡ ರಾಣಿ ತನ್ನ ಪಾಲಿನ ರಾಜ್ಯಕ್ಕೆ ರಾಜನನ್ನಾಗಿ ಮಾಡಲು ತಾನು ಅಂದು ಬಿಟ್ಟು ಹೋದ ಮಗುವಿಗಾಗಿ ಶೋಧ ನಡೆಸುತ್ತಾಳೆ. ನೋಡು ನೋಡುತ್ತಿದ್ದಂತೆಯೇ ವಲ್ಲಿಯ ಜೀವವಾಗಿದ್ದ ಕೂಸು ಬಲವಂತವಾಗಿ ಅರಮನೆ ಸೇರುತ್ತದೆ. 

ಕೊನೆಯಲ್ಲಿ ಈ ಪ್ರಕರಣಕ್ಕೆ ನ್ಯಾಯ ಒದಗಿಸಲು ಸೃಷ್ಟಿಯಾದ ನ್ಯಾಯಧೀಶನ ಪಾತ್ರ ಬಹಳ ವಿಶೇಷವಾಗಿ ರೂಪಿತವಾಗಿದೆ. ಮೇಲ್ನೋಟಕ್ಕೆ ವಿದೂಷಕನಂತೆ ಗೋಚರಿಸುವ ಈತ ಆಳದಲ್ಲಿ ಚಿಂತನೆಗೆ ಹೆಚ್ಚುತ್ತಾನೆ. ಈ ಪಾತ್ರದಲ್ಲಿ ಭಿನ್ನ ಆಯಾಮವನ್ನು ಕಾಣಬಹುದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅಧಿಕಾರ ಹಣದ ಕಡೆಗೇ ವಾಲಿರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸಲು ಮತ್ತೆ ಗಾಂಧಿಯೇ ಹುಟ್ಟಿಬರಬೇಕೇನೋ ಅಥವಾ ಅವರ ಚಿಂತನೆಗಳು ನಮ್ಮೊಳಗೆ ಮತ್ತೆ ಜೀವಂತಗೊಳ್ಳಬೇಕೇನೋ ಎಂಬ ಗಂಭೀರವಾದ ಚಿಂತನೆಗೆ ಒಡ್ಡುತ್ತದೆ ಈ ನ್ಯಾಯಾಧೀಶನ ಪಾತ್ರ. 

ರೋಹಿತ್‌ ಬೈಕಾಡಿಯವರ ಸಂಗೀತ ನೆನಪಿನಲ್ಲಿ ಉಳಿಯುವಂತದು.ª ಉತ್ತಮ ರಂಗಪರಿಕರ ಮತ್ತು ವಸ್ತ್ರ ವಿನ್ಯಾಸ ನಾಟಕಕ್ಕೆ ಪೂರಕವಾಗಿದ್ದವು.ಅರ್ಜುನ್‌ ಪೂಜಾರಿ, ಸುಕೇಶ ಶೆಟ್ಟಿ ಕೊರ್ಗಿ, ಶರಣ್ಯ, ರವಿ ಪೂಜಾರಿ, ವಿN°àಶ್‌ ತೆತ್ಕಾರ,ರವಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚೆಲ್ಲು ಚೆಲ್ಲಾಗಿ ಇರುವ ಹುಡುಗಿ ತಾಯಿಯಾಗಿ ಗಂಭೀರವಾಗುವ ವಲ್ಲಿ ಪಾತ್ರದಲ್ಲಿ ಶ್ವೇತಾ ಮಣಿಪಾಲ ಉತ್ತಮ ಪಾತ್ರ ನಿರ್ವಹಣೆ ಮಾಡಿದ್ದಾರೆ. 

Advertisement

ಸಚಿನ್‌ ಅಂಕೋಲ 

Advertisement

Udayavani is now on Telegram. Click here to join our channel and stay updated with the latest news.

Next