Advertisement
ಕಳೆದ ಹತ್ತು ವರ್ಷಗಳಿಂದ ಯುಕೆಯ ಮಧ್ಯದ ನಾಟಿಂಗಮ್ ನಗರದಲ್ಲಿ ಸ್ಥಾಪನೆಗೊಂಡಿರುವ ಲಾಸ್ಯ ಸ್ಕೂಲ್ ಆಫ್ ಡಾನ್ಸಿಂಗ್ ಇತ್ತೀಚಿಗೆ ಹತ್ತನೆಯ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಅದರ ಅಬಾಲ ಪ್ರೌಢ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತಮ್ಮ ಗುರು ಡಾ| ಸುಮನಾ ನಾರಾಯಣ್ ಅವರ ನೇತೃತ್ವದಲ್ಲಿ ತಮಗಾಗಿ ಕಲಿಸಿದ ಸೋಲೋ ಮತ್ತು ಸಾಮೂಹಿಕ ನೃತ್ಯಗಳಿಂದ ಹೆಚ್ಚು ಪಾಲು ಪಾಲಕ-ಪೋಷಕರಿಂದ ತುಂಬಿದ ಸಭೆಯ ಮನಸ್ಸನ್ನು ಸೂರೆಗೊಳಿಸಿದರು. ಬಹುಕಾಲದಿಂದ ಅವರಿಗೆ ಪ್ರತ್ಯೇಕವಾಗಿ ಆಯ್ದು ತರಬೇತಿ ಕೊಟ್ಟಿದ್ದರು.
Related Articles
ಶಿವನ ಶರೀರದ ಎಡ ಅರ್ಧ ಭಾಗ ಪೂರ್ತಿ ಆವರಿಸಿಕೊಂಡಿದ್ದಾಳೆ ಪರ್ವತಕುಮಾರಿ, ಆತನ ಹೃದಯೇಶ್ವರಿಯಾದ ಶಕ್ತಿ. ಎಡ ಭಾಗ ಮುಖ್ಯ ಏಕೆಂದರೆ ಅಲ್ಲೇ ಇದೆ ಹೃದಯ. ಆದರೂ ಆತನ “ಆ ಪತ್ಯ’ದೊಳಗೂ ಇಲ್ಲ; ಆತನಿಗಿಂತ ಒಂದು ಕೈ ಮೇಲೂ ಅಲ್ಲ.
Advertisement
ಈಗಿನ ಕಾಲದಲ್ಲಿ, ಅದು ನಾವು ವಾಸಿಸುತ್ತಿರುವ ಪಾಶ್ಚಾತ್ಯ ದೇಶಗಳಲ್ಲಿ ಗಂಡು ಹೆಣ್ಣುಗಳ ಸಂಬಂಧ, ಹೆಣ್ಣುಮಕ್ಕಳ ಹಕ್ಕುಗಳು, ರಜೆ, ವೇತನ, ಸಮಾನತ್ವ ಎಲ್ಲದರ ಬಗ್ಗೆ ಪ್ರತೀ ದಿನ ರೇಡಿಯೋ, ಟಿವಿ ಮೀಡಿಯಾಗಳಲ್ಲಿ ಚರ್ಚೆಯಾಗುತ್ತದೆ. ಇತ್ತೀಚಿಗೆ ಅನೇಕ ರಾಷ್ಟ್ರಗಳಲ್ಲಿ, ಸಂಘ-ಸಂಸ್ಥೆ, ಸರಕಾರಗಳು “ಇನ್ನೊಂದು’ ವರ್ಗದವರನ್ನು ಹೇಗೆ ಸಂಬೋಧಿಸಬೇಕು, ಯಾವ ಪದಗಳನ್ನು ಉಪಯೋಗಿಸಬೇಕು ಅನ್ನುವ ವಿಷಯದಲ್ಲಿ ಆದೇಶ ಕೊಡುತ್ತಿವೆ. ನಿಯಮಗಳನ್ನು ರೂಪಿಸಿವೆ. ಆ “ಇನ್ನೊಂದು ವರ್ಗವೆಂದರೆ’ ಟಾನ್ಸ್ ಇಂಟರ್‌ಸೆಕ್ಸ್, ಕ್ವಿಯರ್, LGBTQ+, ನಾನ್ ಬೈನರಿ, ಹೀಗೆ ಗಂಡಸು ಅಲ್ಲ ಹೆಂಗಸು ಸಹ ಅಲ್ಲ ಅಂತ ತಮ್ಮದೇ ಅಸ್ಮಿತೆ ಹುಡುಕಿಕೊಂಡು ತಮ್ಮ ಹಕ್ಕುಗಳಿಗೆ ಹೋರಾಡುತ್ತಿರುವ ಗುಂಪು. ಅವರ ದನಿ ಹೆಚ್ಚೆಚ್ಚು ಕೇಳಿ ಬರುತ್ತಿದೆ. ಜಗತ್ತಿನ ಲಿಂಗ ಸಮಾನತ್ವದಲ್ಲಿ (gender equality) ಯೂರೋಪಿನ ದೇಶಗಳಾದ ಐಸ್‌ಲ್ಯಾಂಡ್ ಮತ್ತು ನಾರ್ವೆ ಪ್ರಥಮ ಎರಡು ಸ್ಥಾನಗಳನ್ನು ಪಡೆದಿವೆ.
“ಈ ನಿಮ್ಮ ನೃತ್ಯದ ಪರಿಕಲ್ಪನೆಗೆ ಏನು ಸ್ಫೂರ್ತಿ?’ ಎಂದು ಕೇಳಿ ದಾಗ ಸ್ವತಃ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಕಳೆದೆರಡು ದಶಕಗಳಿಂದ ಯುಕೆಯಲ್ಲಿ ನ್ಯಾಶನಲ್ ಹೆಲ್ತ… ಸರ್ವಿಸ್‌ನಲ್ಲಿ ಕೆಲಸ ಮಾಡುತ್ತ ಬಂದಿರುವ ಸುಮನಾ ನಾರಾಯಣ್ ಅವರು ಇತ್ತೀಚಿಗೆ ಲಿಂಗ ಸಾಮ್ಯತೆ ಮತ್ತು ಮಾನವ ಹಕ್ಕುಗಳ ಚರ್ಚೆ ಹೇಗೆ ಅ ಧಿಕಾರಿಗಳ ಹೊಸ ನಿಯಮಗಳ ಪ್ರಕಾರ ಆಸ್ಪತ್ರೆಯ ಫಲಕಗಳಲ್ಲಿ ಆದ ಮಾರ್ಪಾಡಿನ ಬಗ್ಗೆ ಹೇಳಿದರು. “ಪ್ರಸೂತಿ ಮಹಿಳೆ ಮತ್ತು ಮಕ್ಕಳ ಕೋಣೆ’ಯಾಗಿದ್ದುದು ಈಗ “ಹೆರಿಗೆಯಾಗುತ್ತಿರುವ ವ್ಯಕ್ತಿ’ (Birthing persons) ಅಂತಲೂ ಆತ, ಆಕೆ ಅನ್ನುವ ಬದಲು ವ್ಯಕ್ತಿ (person) ಅನ್ನಬೇಕಂತೆ.
ಆಂಗ್ಲ ವೇದಿಕೆಯ ಮೇಲೆ ಶಿವ ತಾಂಡವ ಶಕ್ತಿ! ತಲೆಯಲ್ಲಿ ಬಂದ ಯೋಚನೆಯನ್ನು ನೃತ್ಯದಲ್ಲಿ ಅಳವಡಿಸುವುದು ಹೇಗೆ? ಯೂಟ್ಯೂಬ್ ತುಂಬ ಈ ನೃತ್ಯದ ಅನೇಕ ಪ್ರಸ್ತುತಿಗಳು ಹರಿದಾಡುತ್ತಿವೆ. ಒಬ್ಬರು ಅಥವಾ ಇಬ್ಬರು ಜತೆಗೆ ಕುಣಿಯುತ್ತ ಸರತಿಯ ಪ್ರಕಾರ ಶಕ್ತಿ ಮತ್ತು ಶಿವರಾಗಿ -ಆ ತರದಲ್ಲಿ, ಶಕ್ತಿ ಮೊದಲು- ತೋರಿಸಬಹುದು. ಅಥವಾ ಅದಕ್ಕೇನಂತೆ ಅರ್ಧರ್ಧ ಬೇರೆ ಧಿರಿಸನ್ನು ಧರಿಸಿ ನರ್ತಿಸಬಹುದು. ಆದರೆ ಒಬ್ಬರೇ ಇಲ್ಲಿ ಬರೀ ಹನ್ನೊಂದಕ್ಷರಗಳ ಪಾದದಲ್ಲಿ (ಪ್ರತೀ ಶ್ಲೋಕದಲ್ಲಿ ನಾಲ್ಕು ಪಾದಗಳು) ಶಿವ ಅಥವಾ ಶಿವೆಯ ಗುಣಲಕ್ಷಣಗಳನ್ನು ತಮ್ಮ ಭರತನಾಟ್ಯದ ಹಾವ ಭಾವ ಮುದ್ರೆ ಅಭಿನಯದಲ್ಲಿ ತೋರಿಸಬೇಕು. ಆ ಮೂರೋ-ನಾಲ್ಕೇ ಸೆಕೆಂಡುಗಳಲ್ಲಿ ಒಂದರಿಂದ ಇನ್ನೊಂದು ರೂಪಕ್ಕೆ ಬದಲಿಸಬೇಕು, ಮತ್ತೆ ಮುಂದಿನ ಪಾದ ಹೀಗೆ ಎಂಟು ನಿಮಿಷಗಳಲ್ಲಿ ಕಣ್ಣಿಗೆ ಕಟ್ಟುವಂತೆ ನರ್ತಿಸಿದರು. ಅದು ದೊಡ್ಡ ಸವಾಲೇ ಆಗಿರಬೇಕು. ಸಭಿಕರೆಲ್ಲ ಮಂತ್ರಮುಗ್ಧರಾಗಿದ್ದರು. “ಕೃತಸ್ಮರಾಯೈ ವಿಕೃತಸ್ಮರಾಯ ನಮಃ’ ಎನ್ನುವ ಪಾದದಲ್ಲಿ ಶಿವೆಯ ಸೃಷ್ಟಿಯ ವೈಭವವನ್ನು ಅನಂತರ ಕೂಡಲೇ ವಿಕೃತಿಯ ಮನ್ಮಥನ ದಹನವನ್ನು ತೋರಿಸಿದ್ದು ಅನನ್ಯ. ಮುಂದಿನ ಏಳನೆಯ ಶ್ಲೋಕದಲ್ಲಿ ಬರುವ ಜಗಜ್ಜನನಿ ಪಾರ್ವತಿ ಮತ್ತು ಸಂಹಾರಕ ತಾಂಡವ ನೃತ್ಯದಿಂದ ಮತ್ತೆ ವಿಶ್ವವನ್ನು ಒಂದುಗೂಡಿಸುವುದನ್ನು ಚಂದವಾಗಿ ನೃತ್ಯದಲ್ಲಿ ತೋರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೇಯರ್ ಆಂಡಿ ಬ್ರೌನ್ ಅವರು ಎಲ್ಲರಿಗೂ ಪ್ರಶಸ್ತಿ ಪತ್ರ ಹಂಚಿದರು. ಭರತನಾಟ್ಯ ಕಲಿಯಲು ಈ ಪ್ರದೇಶದಲ್ಲಿ ಉತ್ಸಾಹ ಬೆಳೆಯುತ್ತಿದೆ. ಅದಕ್ಕೆ ಇಲ್ಲಿ 4ರಿಂದ ನಲವತ್ತು ವಯಸ್ಸಿನವರೂ ಕಲಿಯಲು ಬರುವುದು ಗುರುವಿನ ಆಸ್ಥೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೆ ಹಿನ್ನುಣಿಕೆಯಿತ್ತು ಹುರಿದುಂಬಿಸುವುದೇ ಕಾರಣ. ಅದು ಸುಲಭದ ಕೆಲಸವಲ್ಲ. ಅವರಿಗೆ ಮತ್ತು ಜತೆಗೆ ಕೆಲಸಕ್ಕೆ ಕೈಜೋಡಿಸುವ ಸ್ವಯಂ ಸೇವಕ ಸಹಾಯಕರಿಗೂ ಅಭಿನಂದನೆಗಳು. ಲಾಸ್ಯ ನರ್ತನ ಶಾಲೆ ಉತ್ತರೋತ್ತರ ಬೆಳವಣಿಗೆ ಕಾಣಲಿ! *ಶ್ರೀವತ್ಸ್ ದೇಸಾಯಿ, ಡೋಂಕಾಸ್ಟರ್