Advertisement

Isha Foundation ಶಿವರಾತ್ರಿಯಲ್ಲಿ ಉಪರಾಷ್ಟ್ರಪತಿ ಧನ್ಕರ್‌ ಉಪಸ್ಥಿತಿ

12:09 AM Mar 08, 2024 | Team Udayavani |

ಬೆಂಗಳೂರು: ಸುಮಾರು 14 ಕೋಟಿಗಿಂತಲೂ ಹೆಚ್ಚು ಜನರು ವೀಕ್ಷಿಸಿರುವ, ತಮಿಳುನಾಡಿನ ಆದಿಯೋಗಿಯ ಸಮ್ಮುಖದಲ್ಲಿ ನಡೆಯುವ ಈಶ ಮಹಾಶಿವರಾತ್ರಿಯು, ದೇಶದ ಬಹುನಿರೀಕ್ಷಿತ ವಾರ್ಷಿಕ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವರ್ಷವೂ ಸಹ, ರಾತ್ರಿಯಿಡೀ ನಡೆಯುವ ಆಚರಣೆಯು, ಸದ್ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ತಲ್ಲೀನಗೊಳಿಸುವ ಧ್ಯಾನಗಳು, ಸಂಭ್ರಮದ ಸಂಗೀತ ಮತ್ತು ಮನಮೋಹಕ ನೃತ್ಯ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ. ಈ ಭವ್ಯ ಕಾರ್ಯಕ್ರಮವು ಸದ್ಗುರುಗಳ ಯೂಟ್ಯೂಬ್‌ ಚಾನೆಲ್‌ಗ‌ಳು ಮತ್ತು ಪ್ರಮುಖ ಜಾಲತಾಣಗಳಲ್ಲಿ ವಿಶ್ವಾದ್ಯಂತ 22 ಭಾಷೆಗಳಲ್ಲಿ ಮಾ. 8ರ ಸಂಜೆ 6ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಪ್ರಸಾರವಾಗಲಿದೆ.

Advertisement

ಸಮಾರಂಭದಲ್ಲಿ ಉಪರಾಷ್ಟ್ರಪತಿಗಳಾದ ಜಗದೀಪ್‌ ಧನ್ಕರ್‌ ಅವರ ಗೌರವ ಉಪಸ್ಥಿತಿ ಇರಲಿದೆ. ಜತೆಗೆ ಖ್ಯಾತ ಕಲಾವಿದರಾದ ಶಂಕರ್‌ಮಹದೇವನ್‌, ಗುರುದಾಸ್‌ ಮಾನ್‌, ಪವನ್‌ದೀಪ್‌ ರಾಜನ್‌, ರತಿಜಿತ್‌ ಭಟ್ಟಾಚಾರ್ಯ ಮುಂತಾದ ಪ್ರಖ್ಯಾತ ಸಂಗೀತಗಾರರು ಉಪಸ್ಥಿತರಿರಲಿದ್ದಾರೆ. ಸೌಂಡ್ಸ್‌ ಆಫ್‌ ಈಶ ಮತ್ತು ಈಶ ಸಂಸ್ಕೃತಿಯಿಂದ ಆಕರ್ಷಕ ಪ್ರದರ್ಶನಗಳು ನಡೆಯಲಿವೆ.

ಮಧ್ಯರಾತ್ರಿ ಮತ್ತು ಬ್ರಹ್ಮ ಮುಹೂರ್ತ
ಧ್ಯಾನದ ಮೂಲಕ ಆನ್‌ಲೈನ್‌ ಮತ್ತು ಸ್ವತಃ ಅಲ್ಲಿ ನೆರೆದಿರುವ ಪ್ರೇಕ್ಷಕರಿಗೆ ಮಾರ್ಗ ದರ್ಶನ ನೀಡುವ ಸದ್ಗುರು, “ಶಿವನ ಭವ್ಯ ರಾತ್ರಿ’ಯಂದು ನಮ್ಮ ಬೆನ್ನುಹುರಿ ಯನ್ನು ನೇರವಾಗಿರಿಸಿಕೊಳ್ಳುವುದರ ಪ್ರಾಮುಖ್ಯ ವನ್ನು ಒತ್ತಿಹೇಳುತ್ತಾರೆ. “ಈ ದಿನದ ಮಹತ್ವ ವೇನೆಂದರೆ ಮಾನವ ದೇಹದಲ್ಲಿ ಶಕ್ತಿಯ ಊರ್ಧಗಮನವಿರುತ್ತದೆ. ಆದ್ದರಿಂದ ಈ ರಾತ್ರಿಯನ್ನು, ನಾವು ನಮ್ಮ ಬೆನ್ನುಹುರಿಯನ್ನು ನೇರವಾಗಿರಿಸಿ, ಎಚ್ಚರದಿಂದ, ಜಾಗೃತರಾಗಿ ಕಳೆಯಲು ಬಯಸುತ್ತೇವೆ. ಈ ದಿನದಂದು ಪ್ರಕೃತಿಯಿಂದ ಹೆಚ್ಚಿನ ಬೆಂಬಲ ದೊರೆಯುತ್ತದೆ ಎಂದು ಸದ್ಗುರುಗಳು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next