Advertisement

ಸಾಲಿಗ್ರಾಮದಲ್ಲೂ ಮತದಾನಕ್ಕೆ ಸಿದ್ಧತೆ

06:30 AM Aug 31, 2018 | Team Udayavani |

ಕೋಟ: ಸಾಲಿಗ್ರಾಮ ಪ.ಪಂ.ನ ಸ್ಥಳೀಯಾಡಳಿತ ಸಂಸ್ಥೆಗೆ ಆ.31ರಂದು ಚುನಾವಣೆ ನಡೆಯಲಿದೆ.  ಇಲ್ಲಿನ  16 ವಾರ್ಡ್‌ಗಳಲ್ಲಿ ಬಿಜೆಪಿಯ 16, ಕಾಂಗ್ರೆಸ್‌ 16,  ಜೆಡಿಎಸ್‌ 6, ಪಕ್ಷೇತರ 7, ಸಿ.ಪಿ.ಎಂ.ನಿಂದ ಓರ್ವ ಸಹಿತ  ಒಟ್ಟು 46 ಮಂದಿ ಕಣದಲ್ಲಿದ್ದಾರೆ. 12,869 ಮಂದಿ ಮತದಾರರು ಇವರ ಸೋಲು-ಗೆಲುವು ತೀರ್ಮಾನಿಸಲಿ ದ್ದಾರೆ. ಮತದಾನ ಕೇಂದ್ರಕ್ಕೆ ಗುರುವಾರ ಅಪರಾಹ್ನ 3 ಗಂಟೆಗೆ ಪೊಲೀಸರು, ಬೂತ್‌ನ ಅಧಿಕಾರಗಳ ತಂಡ ಆಗಮಿಸಿ ಪೂರ್ವ ಸಿದ್ಧತೆಯಲ್ಲಿ ತೊಡಗಿತು.

Advertisement

ಎರಡು ಸೂಕ್ಷ್ಮ, ಎರಡು ಅತೀ ಸೂಕ್ಷ್ಮ ಮತಗಟ್ಟೆ
ಇಲ್ಲಿನ ತೋಡ್ಕಟ್ಟು ಹಾಗೂ ಪಡುಕರೆ ವಾರ್ಡ್‌ ನ ಮತಗಟ್ಟೆಯಲ್ಲಿ  ಈ ಹಿಂದೆ ಸಣ್ಣ-ಪುಟ್ಟ ಗಲಾಟೆಗಳು ನಡೆದಿದ್ದು ಇದನ್ನು ಅತಿ ಸೂಕ್ಷ್ಮಮತಗಟ್ಟೆ, ಪೇಟೆ ಗೆಂಡೆಕೆರೆ ವಾರ್ಡ್‌ ಮತಗಟ್ಟೆಗಳನ್ನು ಮುಂಜಾಗ್ರತೆಗಾಗಿ  ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

ಪೊಲೀಸ್‌ ಬಂದೋಬಸ್ತ್ 
ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಲಿದ್ದು, ಡಿವೈ.ಎಸ್‌.ಎಪಿ. ಕುಮಾರಸ್ವಾಮಿ ಮೇಲುಸ್ತುವಾರಿ ನೋಡಿ ಕೊಳ್ಳಲಿದ್ದಾರೆ. 15 ಮಂದಿ ಮುಖ್ಯ ಪೇದೆಗಳು, ಒಂದು ಡಿ.ಆರ್‌. ವ್ಯಾನ್‌, 17 ಪೇದೆ, ಓರ್ವ ಮುಖ್ಯ ಪೇದೆ ಕೋಟ ಠಾಣಾಧಿಕಾರಿ ನರಸಿಂಹ  ಶೆಟ್ಟಿಯವರ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

80 ಮಂದಿ ಚುನಾವಣಾ 
ಸಿಬಂದಿ ಕರ್ತವ್ಯದಲ್ಲಿ 

ವಿಧಾನಸಭಾ ಚುನಾವಣೆಯ ರೀತಿ ಯಲ್ಲಿ ಈ ಬಾರಿ  ಯಾವುದೇ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿಲ್ಲ.  ಪ್ರತಿ ಬೂತ್‌ಗೆ 5ಮಂದಿ ಸಿಬಂದಿಗಳಂತೆ ಒಟ್ಟು  16 ಬೂತ್‌ಗಳಲ್ಲಿ  80ಮಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಶೇಷ ಚುನಾವಣಾಧಿಕಾರಿಗಳ ಸಭೆ 
ಪ.ಪಂ.ನ ವಿಶೇಷ ಚುನಾವಣಾಧಿಕಾರಿ ಜ್ಯೋತಿ ಅವರು ಬುಧವಾರ ಸಾಲಿಗ್ರಾಮದಲ್ಲಿ ಉಡುಪಿ ತಹಶೀಲ್ದಾರ್‌ 
ಪ್ರದೀಪ್‌ ಕುಡೇìಕರ್‌,ಬ್ರಹ್ಮಾವರ ತಹಶೀಲ್ದಾರ್‌ ಅನಿಲ್‌, ಪ.ಪಂ. ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌ 
ಮತ್ತು ರಿಟರ್ನಿಂಗ್‌ ಅಧಿಕಾರಿಗಳು,ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು, ನೋಡೆಲ್‌ ಅಧಿಕಾರಿಗಳು, ಪ್ಲೈಯಿಂಗ್‌  ಸ್ಕ್ವಾಡ್‌ನ‌ವರೊಂದಿಗೆ ಸಭೆ ನಡೆಸಿ 16 ವಾರ್ಡ್‌ಗಳ ಮತಗಟ್ಟೆಯಲ್ಲಿರುವ ಸೌಲಭ್ಯಗಳು, ಸಮಸ್ಯೆಗಳನ್ನು  ಯಾವ ರೀತಿ ಪರಿಹರಿಸಲಾಗಿದೆ ಎನ್ನುವ ಕುರಿತು ಮಾಹಿತಿ ಪಡೆದರು.ಸಾಲಿಗ್ರಾಮ ಚಿಪ್ಲಪಾಡಿ ಶಾಲೆಯ ಮಾರಿಗುಡಿ ಮತಗಟ್ಟೆಯಲ್ಲಿ  ಮತದಾನಕ್ಕೆ ಅಧಿಕಾರಿಗಳು ತಯಾರಿ ನಡೆಸುತ್ತಿರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next