Advertisement
ಯುಎಸ್ ಓಪನ್ ಆಗಸ್ಟ್ 31ರಿಂದ ಆರಂಭವಾಗಲಿದೆ. ಸದ್ಯದ ಸ್ಥಿತಿಯಲ್ಲಿ ಯುಎಸ್‌ಟಿಎ ಈ ಹಿಂದೆ ನಿರ್ಧರಿಸಿದಂತೆ ಯುಎಸ್ ಓಪನ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತದೆ. ಇದಕ್ಕಾಗಿ ಸಿದ್ಧತೆಯನ್ನು ಮುಂದುವರಿಸಲಿದ್ದೇವೆ ಎಂದು ಯುಎಸ್‌ಟಿಎ ಪ್ರಕಟನೆಯಲ್ಲಿ ತಿಳಿಸಿದೆ.
ಕೋವಿಡ್ 19 ದಿಂದಾಗಿ ಜುಲೈ 13ರ ವರೆಗೆ ನಡೆಯಲಿರುವ ಎಲ್ಲ ಎಟಿಪಿ ಮತ್ತು ಡಬ್ಲ್ಯುಟಿಎ ಟೆನಿಸ್ ಕೂಟಗಳನ್ನು ರದ್ದುಮಾಡಲಾಗಿದೆ. ರದ್ದುಗೊಂಡ ಕೂಟಗಳಲ್ಲಿ ಎಟಿಪಿ ಕೂಟಗಳಾದ ಹೆರ್ಟೊಗೆನ್‌ಬಾಶ್, ಸ್ಟಟ್‌ಗರ್ಟ್, ಲಂಡನ್-ಕ್ವೀನ್ಸ್, ಹಾಲೆ, ಮಲೋರ್ಕಾ ಮತ್ತು ಈಸ್ಟ್
ಬೋರ್ನ್ ಹಾಗೂ ಡಬ್ಲ್ಯುಟಿಎ ಕೂಟಗಳಾದ ಹೆರ್ಟೊಗೆನ್‌ಬಾಶ್, ನಾಟಿಂಗಮ್, ಬರ್ಮಿಂಗ್‌ಹ್ಯಾಮ್, ಬರ್ಲಿನ್, ಈಸ್ಟ್‌ಬೋರ್ನ್ ಮತ್ತು ಬಾಡ್ ಹ್ಯಾಂಬರ್ಗ್‌ನಲ್ಲಿ ನಡೆಯುವ ಕೂಟಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕೂಟಗಳ ಜತೆ 2020ರ ಜುಲೈಯಲ್ಲಿ ನಡೆಯಬೇಕಿದ್ದ ವಿಂಬಲ್ಡನ್ ಟೆನಿಸ್ ಕೂಟ ಕೂಡ ರದ್ದಾಗಿದ್ದು ಮುಂದಿನ ಕೂಟ 2021ರ ಜೂ. 28ರಿಂದ ಜುಲೈ 11ರ ವರೆಗೆ ನಡೆಯಲಿದೆ.
Related Articles
ವಿಂಬಲ್ಡನ್ ರದ್ದುಗೊಂಡ ಸುದ್ದಿ ಕೇಳಿ ನನಗೆ ಆಘಾತವಾಯಿತು ಎಂದು ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಅವರು ಹೇಳಿದರೆ ಮಾಜಿ ಚಾಂಪಿಯನ್ ರೋಜರ್ ಫೆಡರರ್ ನನ್ನ ಕನಸು “ಧ್ವಂಸಗೊಂಡಿದೆ’ ಎಂದಿದ್ದಾರೆ. ಫೆಡರರ್ ದಾಖಲೆ ಎಂಟು ಬಾರಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.
Advertisement