Advertisement

ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ನಂ.1 ಸ್ಥಾನಕ್ಕೇರಲು ಸಿದ್ಧತೆ

02:48 PM Aug 04, 2019 | Suhan S |

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಐದಾರು ವರ್ಷಗಳಿಂದ ಉತ್ತಮ ಸಾಧನೆ ಮಾಡಿರುವ ಜಿಲ್ಲೆ ಈ ಬಾರಿಯೂ ಗುಣಾತ್ಮಕತೆಗೆ ಒತ್ತು ನೀಡುವ ಮೂಲಕ ಮೊದಲ ಸ್ಥಾನದತ್ತ ಗುರಿಯಿಟ್ಟು, ಮುನ್ನಡೆಯಲು ವಾರ್ಷಿಕ ಕ್ರಿಯಾ ಯೋಜನೆಯ ಮೂಲಕ ಸಿದ್ಧತೆ ನಡೆಸಿದೆ.

Advertisement

ಕಳೆದ ಸಾಲಿನಲ್ಲಿ ಶೇ.86.94 ಫಲಿತಾಂಶದೊಂದಿಗೆ 8ನೇ ಸ್ಥಾನ ಹಾಗೂ ಗುಣಾತ್ಮಕತೆಯಲ್ಲಿ 7ನೇ ಸ್ಥಾನ ಪಡೆದುಕೊಂಡು ಬೀಗಿದ್ದ ಜಿಲ್ಲೆಯ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಜಿಪಂ ಸಿಇಒ ಜಿ.ಜಗದೀಶ್‌ ನೇತೃತ್ವದಲ್ಲಿ ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್‌.ನಾಗೇಂದ್ರ ಪ್ರಸಾದ್‌ ನೇತೃತ್ವದ ತಂಡ ಕಾರ್ಯೋನ್ಮುಖವಾಗಿದೆ.

2019-20ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗಸೂಚಿಯನ್ನು ಸಿದ್ಧಪಡಿ ಸುವ ಕಾರ್ಯದ ಅಂತಿಮ ಹಂತದಲ್ಲಿರುವ ಶಿಕ್ಷಣ ಇಲಾಖೆ, ಈಗಾಗಲೇ ಕ್ರಿಯಾಯೋಜನೆಯ ಅಂಶಗಳ ಅನುಷ್ಠಾನಕ್ಕೆ ಮುಖ್ಯಶಿಕ್ಷಕರಿಗೆ ಸೂಕ್ತ ನಿರ್ದೇಶನ ನೀಡಿದೆ.

ಜೂನಿಯರ್‌ ಕಾಲೇಜು ಶಿಕ್ಷಕರ ಸಭೆ: ಜೂನಿಯರ್‌ ಕಾಲೇಜುಗಳು, ಅನುದಾನಿತ ಶಾಲೆಗಳ ಫಲಿತಾಂಶದ ಕುಸಿತದಿಂದಲೇ ಸ್ವಲ್ಪಮಟ್ಟಿನ ಹಿನ್ನೆಡೆಗೆ ಕಾರಣ ಎಂಬು ದನ್ನು ಅರಿತಿರುವ ಜಿಪಂ ಸಿಇಒ ಜಗದೀಶ್‌, ಈಗಾ ಗಲೇ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದಾರೆ. ಜತೆಗೆ ಜೂನಿಯರ್‌ ಕಾಲೇಜುಗಳ ಉಪಪ್ರಾಂಶುಪಾಲರು, ಎಲ್ಲಾ ಶಿಕ್ಷಕರ ಸಭೆ, ಅನು ದಾನಿತ ಶಾಲೆಗಳ ಎಲ್ಲಾ ಶಿಕ್ಷಕರ ಸಭೆಯನ್ನು ನಡೆಸುವ ಮೂಲಕ ಫಲಿತಾಂಶ ಉನ್ನತಿಗೆ ಕೈಗೊಳ್ಳಬೇಕಾದ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.

ಕ್ರಿಯಾ ಯೋಜನೆಯ ಪ್ರಮುಖ ಅಂಶಗಳು: ಸೇತು ಬಂಧ ಕಾರ್ಯಕ್ರಮ, ಇಲಾಖೆ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನ, ಕಳೆದ ಮಾರ್ಚ್‌ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದ ಸರಾಸರಿಗಿಂತ ಕಡಿಮೆ ಫಲಿತಾಂಶ ಪಡೆದಿರುವ ಇರುವ ಶಾಲೆಗಳಿಗೆ ನೋಡಲ್ ಅಧಿಕಾರಿಗಳ ನೇಮಕ, ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಕಡತ ನಿರ್ವಹಣೆ, ರಸಪ್ರಶ್ನೆ, ಸೆಮಿನಾರ್‌, ಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಕಂಠಪಾಠ, ಪ್ರಬಂಧ ಸ್ಪರ್ಧೆಗಳನ್ನು ಪಠ್ಯಕ್ಕೆ ಪೂರಕವಾಗಿ ನಡೆಸಲು ಸೂಚಿಸಲಾಗಿದೆ.

Advertisement

ಶಾಲೆಗಳಲ್ಲಿ ಗುಂಪು ಅಧ್ಯಯನಕ್ಕೆ ಒತ್ತು, ಫಲಿತಾಂಶ ಕಡಿಮೆ ಇರುವ ಶಾಲೆಗಳಿಗೆ ಮಾರ್ಗದರ್ಶಿ ಶಿಕ್ಷಕರ ನೇಮಕ, ಇಡೀ ವರ್ಷ ಶಾಲಾ ಅವಧಿಗೆ ಮುನ್ನಾ, ನಂತರ ಮತ್ತು ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ಪರಿಣಾಮಕಾರಿಯಾಗಿ ನಡೆಸುವುದು, ಕ್ಲಿಷ್ಟಕರ ಅಂಶಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟು ಮಾಡಲು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವುದು ಕ್ರಿಯಾಯೋಜನೆ ಯಲ್ಲಿ ಸೇರಿದೆ.

ಕಬ್ಬಿಣದ ಕಡಲೆ ಗಣಿತಕ್ಕೆ ಒತ್ತು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಿನ ಕಬ್ಬಿಣದ ಕಡಲೆಯಾಗಿರುವ ಗಣಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಿ, ಗಣಿತ, ವಿಜ್ಞಾನ ಶಿಕ್ಷಕರಿಗೆ ಪರಿಷ್ಕೃತ ಪಠ್ಯದಲ್ಲಿನ ವಿಷಯ ಕುರಿತು ಬೋಧನೆಗೆ ಸೂಕ್ತ ತರಬೇತಿ, ಗಣಿತ ಕಲಿಕೆಗೆ ಕಲಿಕಾ ಕಾರ್ಡ್‌ ಸಿದ್ಧಪಡಿಸಿ ಶಾಲೆಗಳಿಗೆ ನೀಡಲು ಇಲಾಖೆ ನಿರ್ಧರಿಸಿದೆ.

ಪೋಷಕರ ಸಭೆ ಕರೆದು ಚರ್ಚೆ: ಕಾಲಕಾಲಕ್ಕೆ ಎಸ್‌ಡಿಎಂಸಿ ಸಭೆ, ಪೋಷಕರು, ತಾಯಂದಿರ ಸಭೆ ಕರೆದು ಮನೆಯಲ್ಲಿ ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಅರಿವು ಮೂಡಿಸುವುದು, ಬರವಣಿಗೆ ಕೌಶಲ್ಯ ವೃದ್ಧಿ, ಪಠ್ಯಪುಸ್ತಕ ಓದುವ ಅಭ್ಯಾಸ ಬೆಳೆಸುವುದು ಕ್ರಿಯಾಯೋಜನೆಯಲ್ಲಿನ ಪ್ರಮುಖ ಅಂಶವಾಗಿದೆ.

ಗೈರು ಹಾಜರಿ ತಡೆಗೆ ಎಸ್‌ಡಿಎಂಸಿ ಸಹಕಾರ: ನಿರಂತರವಾಗಿ ಶಾಲೆಗೆ ಗೈರಾಗುವ ಮಕ್ಕಳ ಮನೆಗಳಿಗೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರೊಂದಿಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ವಿದ್ಯಾರ್ಥಿ ಗಳನ್ನು ಶಾಲೆಗೆ ಬರುವಂತೆ ಮಾಡಬೇಕು, ಸರಣಿ ಪರೀಕ್ಷೆ, ಅಧ್ಯಾಯವಾರು ಪ್ರಶ್ನೆಪತ್ರಿಕೆಯನ್ನು ಇಲಾಖೆಯಿಂದಲೇ ತಯಾರಿಸಿ ನೀಡಿ ಮಕ್ಕಳಿಂದ ಉತ್ತರ ಬರೆಸಿ ಕಲಿಕೆ ದೃಢೀಕರಣ ಮಾಡುವುದು.

ಶಾಲಾ ಪರಿಸರ ಆಕರ್ಷಣೀಯಗೊಳಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಹತ್ವವನ್ನು ವಿದ್ಯಾರ್ಥಿ,ಪೋಷಕರಿಗೆ ತಿಳಿಸುವುದರ ಜತೆಗೆ ಉತ್ತಮ ಅಂಕಗಳಿಸಿದಲ್ಲಿ ಸರ್ಕಾರದಿಂದ ಸಿಗುವ ಪ್ರೋತ್ಸಾಹದಾಯಕ ಯೋಜನೆ, ನಗದು ಪುರಸ್ಕಾರಗಳ ಕುರಿತು ಮನವರಿಕೆ ಮಾಡಿಕೊಡಲು ಸೂಚಿಸಲಾಗಿದೆ.

‘ಚಿತ್ರ ಬರೆಸು, ಅಂಕಗಳಿಸು’ ಕಿರುಹೊತ್ತಿಗೆ:

ಉತ್ತಮ ಅಂಕ ಗಳಿಸುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯ ತಿಳಿಸಿ ಮಕ್ಕಳು, ಪೋಷಕರಿಗೆ ಪ್ರೇರಣೆ ನೀಡುವುದು, ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು, ಸಾಧನೆ ಮಾಡಿದ ಹಳೇ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಪ್ರೇರಣೆ ಉಪನ್ಯಾಸ, ಇಲಾಖೆ ನೀಡುವ ‘ಚಿತ್ರ ಬರೆಸು ಅಂಕಗಳಿಸು’ ಕಿರುಹೊತ್ತಿಗೆಯ ಬಳಕೆ ಕುರಿತು ಕ್ರಮವಹಿಸಲು ಕ್ರಿಯಾಯೋಜನೆಯಲ್ಲಿ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಹೊಸ ಪರೀಕ್ಷಾ ಪದ್ಧತಿ ಅರಿವು, ಇಲಾಖೆ ನೀಡುವ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೆಕೋಠಿ ಬಳಕೆ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯುವುದರ ಅಭ್ಯಾಸ, ಕಲಿಕೋಪಕರಣಗಳ ಬಳಕೆ, ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಿ, ಅವರನ್ನು ಉತ್ತಮ ಅಂಕಗಳಿಸಲು ಸಿದ್ಧಪಡಿಸಲು ಸೂಚಿಸಲಾಗಿದೆ. ಇಲಾಖೆ ಈಗಾಗಲೇ ನೀಡಿರುವ ಕ್ರಿಯಾ ಯೋಜನೆಯಲ್ಲಿ ಇನ್ನೂ ಹಲವು ಅಂಶಗಳನ್ನು ನೀಡಿದ್ದು, ಅವುಗಳ ಪರಿಣಾಮಕಾರಿ ಅನುಷ್ಠಾನಗೊಂಡರೆ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಮೊದಲ ನಾಲ್ಕು ಸ್ಥಾನಗಳಲ್ಲಿ ಖಂಡಿತ ಸಾಧನೆ ಮಾಡಲಿದೆ ಎಂಬುದು ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಅವರ ಆಶಯವಾಗಿದೆ. ಕ್ರಿಯಾ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ನಾಗೇಂದ್ರಪ್ರಸಾದ್‌ ಅವರೊಂದಿಗೆ ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್‌, ಡಿವೈಪಿಸಿಗಳಾದ ಶ್ರೀನಿವಾಸಮೂರ್ತಿ, ಜಯರಾಜ್‌, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವಿ.ವೆಂಕಟೇಶಪ್ಪ, ಡಯಟ್‌ನ ಹಿರಿಯ ಉಪನ್ಯಾಸಕರು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next