Advertisement
ನವದೆಹಲಿ: ಆತ್ಮ ನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಎಂಬುದು ಕೇವಲ ಒಂದು ಘೋಷಣೆಯಲ್ಲ. ಬದಲಿಗೆ ಇದು ಭಾರತವನ್ನು ಒಂದು ಪ್ರಬಲ ದೇಶವನ್ನಾಗಿಸುವ, ತನ್ನ ಸ್ವಸಾಮರ್ಥ್ಯದ ಮೇಲೆ ನಿಲ್ಲುವಂತೆ ಮಾಡುವ ಹಾಗೂ ಜಾಗತಿಕ ಮಟ್ಟದಲ್ಲಿ ಎದುರಾಗುವ ಸ್ಪರ್ಧೆಯನ್ನು ಎದುರಿಸಲು ಶಕ್ತಿ ತುಂಬುವ ನೀತಿಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
Related Articles
Advertisement
ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ: ಕಲ್ಲಿದ್ದಲು ಗಣಿಗಳ ಲೆಕ್ಕದಲ್ಲಿ ನೋಡುವು ದಾದರೆ ಭಾರತ ಅತಿ ಹೆಚ್ಚು ಕಲ್ಲಿದ್ದಲು ಹೊಂದಿರುವ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರ ಎಂದೆನಿಸಿದೆ. ಆದರೂ ನಾವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ವಿದ್ಯುತ್ ಉತ್ಪಾದನೆಗೆ ಕಚ್ಚಾ ವಸ್ತುಗಳ ಕೊರತೆ ಎದುರಿಸುತ್ತಿದ್ದೇವೆ. ಕಾರಣ ಅಗತ್ಯ ಪ್ರಮಾಣದ ಕಲ್ಲಿದ್ದಲನ್ನು ಗಣಿಯಿಂದ ಹೊರತೆಗೆಯಲು ನಾವು ವಿಫಲರಾಗಿದ್ದೇವೆ. ಹೀಗಾಗಿ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿನ ಸರ್ಕಾರಿ ಏಕಸ್ವಾಮ್ಯ ಅಧಿ ಕಾರ ತೆಗೆದುಹಾಕಲು ನಿರ್ಧರಿಸಲಾ ಗಿದೆ. ಆದಾಯ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆ ನಡೆಸಿದರೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲು ಲಭ್ಯವಾಗಲಿದೆ. ಇದೇ ವೇಳೆ ಲ್ಲಿದ್ದಲನ್ನು ಅನಿಲವನ್ನಾಗಿ ಪರಿವರ್ತಿ ಸಲು ಸಹಾಯಧನ ನೀಡಲು ನಿರ್ಧರಿಸಿದೆ. ಕಲ್ಲಿದ್ದಲನ್ನು ಸ್ಥಳಾಂತರಿಸಲು 50,000 ಕೋಟಿ ರೂ. ಮೀಸಲಿರಿಸಿದೆ. 2023-24ರ ವೇಳೆಗೆ 100 ಕೋಟಿ ಟನ್ ಕಲ್ಲಿದ್ದಲು ಉತ್ಪಾದನೆ ಗುರಿ ಹೊಂದಲಾಗಿದೆ.
ರಕ್ಷಣೆಯಲ್ಲೂ ಮೇಕ್ ಇನ್ ಇಂಡಿಯಾಕ್ಕೆ ದೊಡ್ಡ ಪಾಲು: ಭಾರತ ಇದುವರೆಗೆ ತನ್ನ ಬಹುತೇಕ ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ವಿಭಾಗ ದಲ್ಲಿ ನಮ್ಮ ದೇಶ ಸ್ವಾವಲಂಬನೆ ಸಾ—ಸಿಲ್ಲ. ಇದರಿಂದ ಲಕ್ಷಾಂತರ ಕೋಟಿ ರೂ.ಗಳು ವಿದೇಶಕ್ಕೆ ಹರಿದು ಹೋಗುತ್ತಿವೆ. ಆದ್ದರಿಂದ ಇಲ್ಲೂ ಸ್ವಾವಲಂಬನೆ (ಆತ್ಮ ನಿರ್ಭರ) ಸಾಧಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ರಕ್ಷಣಾ ಸಾಮಗ್ರಿ ಉತ್ಪಾದನೆ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ವನ್ನು ಪ್ರೋತ್ಸಾ ಹಿಸಲು, ವಿದೇಶಿ ನೇರ ಹೂಡಿಕೆ ಪ್ರಮಾಣ ವನ್ನು ಈ ಕ್ಷೇತ್ರದಲ್ಲಿ ಶೇ.74ಕ್ಕೆ ಏರಿಸಲಿದೆ. ಇದುವರೆಗೆ ಅದು ಶೇ.49ರಷ್ಟು ಮಾತ್ರ ವಿತ್ತು. ಇನ್ನು ಕೆಲವು ಶಸ್ತ್ರಾಸ್ತ್ರಗಳ ಆಮದನ್ನು ನಿಷೇಧಿಸಲಾ ಗುತ್ತದೆ. ಹೀಗೆ ನಿಷೇಧಿತ ವಸ್ತುಗಳನ್ನು ಭಾರತದ ಲ್ಲಿಯೇ ಕೊಂಡುಕೊಳ್ಳ ಬೇಕಾಗು ತ್ತದೆ. ಕೆಲವು ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾತ್ರ ಮಾಡಿಕೊಳ್ಳುತ್ತದೆ. ಅವನ್ನೆಲ್ಲ ದೇಶೀಯವಾಗಿಯೇ ಜೋಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಆಮದು ವೆಚ್ಚ ಬಹಳ ಕಡಿಮೆಯಾಗುತ್ತದೆ.
ಇನ್ನು ವಿಮಾನಯಾನ ಅಗ್ಗ: ಈ ನಷ್ಟದ ಸಮಯದಲ್ಲಿ ವಿಮಾನಯಾನವನ್ನು ಅಗ್ಗ ಮಾಡಲು ಕೇಂದ್ರಸರ್ಕಾರ ಹೊರಟಿದೆ. ಅದಕ್ಕಾಗಿ ಇದು ವರೆಗೆ ಇದು ವರೆಗೆ ಸೇನಾ ನಿಯಂತ್ರಣದಲ್ಲಿರುವ ವಾಯು ಪ್ರದೇಶವನ್ನೂ, ಮಾಮೂಲಿ ಪ್ರಯಾಣಿಕ ವಿಮಾನಗಳಿಗೆ ಬಿಟ್ಟುಕೊಡಲು ಚಿಂತನೆ ನಡೆಸಿದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗುತ್ತದೆ. ಆಗ ಸಹಜವಾಗಿ 1,000 ಕೋಟಿ ರೂ.ಗೂ ಅಧಿಕ ಹಣ ಉಳಿಯು ತ್ತದೆ. ಹೀಗೆ ಉಳಿಯುವ ಹಣವನ್ನು ಪ್ರಯಾಣಿ ಕರಿಗೆ ವರ್ಗಾಯಿಸ ಬೇಕೆ ನ್ನು ವುದು ಕೇಂದ್ರದ ಉದ್ದೇಶ. ಸದ್ಯ ದೇಶದ ಪ್ರಯಾಣಿಕ ವಿಮಾನಗಳಿಗೆ ಲಭ್ಯವಿರುವ ವಾಯುಪ್ರದೇಶ ಕೇವಲ ಶೇ.60ರಷ್ಟು. ಉಳಿದ ಭಾಗವನ್ನು ರಕ್ಷಣಾ ದೃಷ್ಟಿಯಿಂದ ಸೇನೆ ಹಿಡಿತದಲ್ಲಿಟ್ಟುಕೊಂಡಿತ್ತು. ಅದು ಮುಕ್ತವಾದರೆ ಸುತ್ತಿ ಬಳಸಿ ಪ್ರಯಾಣಿಸುವ ತಾಪತ್ರಯ ತಪ್ಪುತ್ತದೆ. ಇಷ್ಟಲ್ಲದೇ ಆರು ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹರಾಜು ಹರಾಜು ಕರೆಯಲಾಗುತ್ತದೆ. ಎಎಐ (ಭಾರತ ವಿಮಾನ ನಿಲ್ದಾಣ ಪ್ರಾಧಿಓಕಾರ) ಈ ಪ್ರಕ್ರಿಯೆ ನಡೆಸುತ್ತಿದೆ. ಇದರ ಮೂಲಕ 13,000 ಕೋಟಿ ರೂ. ಸಂಗ್ರಹ ನಿರೀಕ್ಷೆಯಿದೆ.
ಭಾರತದಲ್ಲೇ ವಿಮಾನ ನಿರ್ವಹಣೆ: ಕುಸಿದಿರುವ ಆರ್ಥಿಕತೆ ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಆಶಯದಂತೆ “ಸ್ವಾವಲಂಬಿ ಭಾರತ’ದ ಒಂದು ಭಾಗವಾಗಿ ಭಾರತದಲ್ಲೇ ವಿಮಾನಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ವಿಮಾನ ನಿರ್ವಹಣೆ ಜಾಗತಿಕ ವಲಯಕ್ಕಾಗಿ ಪ್ಯಾಕೇಜ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿರ್ವಹಣೆ, ದುರಸ್ತಿ, ಯಂತ್ರಗಳ ಬದಲಾವಣೆ ಹಾಗೂ ಪರೀಕ್ಷೆಗಾಗಿ (ಎಂಆರ್‌ಒ) ವಿದೇಶವನ್ನು ಅವಲಂಬಿಸಲಾಗಿತ್ತು. ಇದೀಗ ನಮ್ಮಲ್ಲಿನ ಮಾನವ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಬಳಸಿಕೊಂಡು ಭಾರತದಲ್ಲೇ ನಿರ್ವಹಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದರಿಂದ ಎಲ್ಲಾ ವಿಮಾನಗಳ ನಿರ್ವಹಣೆ ವೆಚ್ಚವು ಕಡಿಮೆಯಾಗಿದೆ. ವಿಮಾನ ಸಂಸ್ಥೆಗೆ ಆದಾಯ ವೃದ್ಧಿಯಾಗಲಿದೆ.
ಅಣುಶಕ್ತಿ: ಸೀಮಿತ ಹೂಡಿಕೆ: ಇದುವರೆಗೆ ಭಾರತದ ಅಣುಶಕ್ತಿ ವಲಯದಲ್ಲಿ ಸರ್ಕಾರದ್ದೇ ಏಕಸ್ವಾಮ್ಯವಾಗಿತ್ತು. ಈಗ ಮೋದಿ ಸರ್ಕಾರ ಅಲ್ಲಿ ಖಾಸಗಿಯವರಿಗೂ ಹೂಡಿಕೆ ಮಾಡಲು ಅವಕಾಶ ನೀಡುವುದಾಗಿ ಪ್ರಕಟಿಸಿದೆ. ಹಾಗಂತ ಪೂರ್ಣಪ್ರಮಾಣ ದಲ್ಲಿ ಖಾಸಗಿಯವರಿಗೆ ಇಲ್ಲಿ ಪ್ರವೇಶವಿಲ್ಲ. ಕೇವಲ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧ ಕಂಡು ಹಿಡಿಯುವುದು, ಕೃಷಿಕರ ಆಹಾರೋತ್ಪನ್ನಗಳಿಗೆ ವಿಕಿರಣ ಮುಕ್ತ ಸಂಗ್ರಹಾಗಾರಗಳನ್ನು ತಯಾರಿಸುವು ದಕ್ಕೆ ಮಾತ್ರ ಸೀಮಿತವಾಗಿದೆ. ಇಷ್ಟಲ್ಲದೇ ಅಣುಶಕ್ತಿ ವಲಯದಲ್ಲಿ ಸ್ಟಾರ್ಟಪ್ ಮನೋ ಭಾವ ರೂಪಿಸುವುದೂ ಉದ್ದೇಶವಾಗಿದೆ. ಇದರಿಂದ ಸಂಶೋಧನಾ ಸೌಲಭ್ಯ ಹಾಗೂ ತಂತ್ರೋದ್ಯಮಿಗಳ ಮಧ್ಯೆ ಒಂದು ಬಾಂಧವ್ಯ ಏರ್ಪಡಲಿದೆ. ಹೊಸ ಹೊಸ ಸಂಶೋಧನೆಗಳಿಗೆ ನೆರವಾಗಲಿದೆ. ಸದ್ಯ ಕೊರೊನಾದಿಂದ ದೇಶ ಬಾಧಿತವಾಗಿರುವ ಈ ಸಂದರ್ಭವನ್ನು, ಇಂತಹ ಹೊಸ ಹೊಸ ಭಾಗೀದಾರಿಕೆಗಳಿಗೆ ಪೂರಕವಾಗಿ ಬಳಸುವುದು ಮೋದಿ ಸರ್ಕಾರದ ಗುರಿ.
ಎಸ್ಕಾಮ್‌ಗಳು ಖಾಸಗೀಕರಣ: ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೆ ನಿರ್ಧರಿಸಲಾಗಿದೆ. ಡಿಸ್ಕಾಂಗಳ ಅಸಮರ್ಥ ನಿರ್ವಹಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ತೊಂದರೆಯಾದರೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾದರೆ ಹಾಗೂ ಲೋಡ್ ಶೆಡ್ಡಿಂಗ್ ಮಾಡಿದರೆ ಕಂಪನಿಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ ಮೂಲಕ ತಲುಪಿಸಲಾಗುತ್ತಿದೆ. ಇದಕ್ಕಾಗಿ ಸ್ಮಾರ್ಟ್ ಪ್ರೀಪೇಯ್ಡ ಮೀಟರ್‌ಗಳನ್ನು ಅಳವಡಿಸಿ ಕೊಳ್ಳಲು ನಿರ್ಧರಿಸಲಾಗಿದೆ. ವಿದ್ಯುತ್ ಕಾರ್ಯಕ್ಷಮತೆ ವೃದ್ಧಿ ಹಾಗೂ ಹೂಡಿಕೆಗೆ ಆದ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.
“ಬಾಹ್ಯಾಕಾಶ’ ಖಾಸಗಿಗೆ ಮುಕ್ತ: ಇನ್ನು ಮುಂದೆ ಬಾಹ್ಯಾಕಾಶ ಕ್ಷೇತ್ರದಲ್ಲೂ ನಾವು ಖಾಸಗಿ ಕಂಪನಿಗಳು ಹಾಗೂ ನವೋದ್ಯಮಗಳು ಮೈಲುಗಲ್ಲು ಸಾಧಿಸುವುದನ್ನು ಕಾಣಬಹುದು. ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ನ್ ಪ್ರಕಟಿಸಿದ್ದಾರೆ. ಅದರಂತೆ, ಉಪ ಗ್ರಹ ಗಳ ಅಭಿವೃದ್ಧಿ, ಉಡಾವಣೆ, ಬಾಹ್ಯ ಕಾಶ ಸಂಶೋಧನೆ, ಗಗನಯಾತ್ರೆ ಹಾಗೂ ಇತರೆ ಬಾಹ್ಯಾಕಾಶ ಸಂಬಂಧಿ ಸೇವೆಗಳನ್ನು ನೀಡಲು ಖಾಸಗಿ ಕಂಪನಿಗಳು, ಸ್ಟಾರ್ಟ ಪ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ಸಾಕಷ್ಟು ಖಾಸಗಿ ಕಂಪನಿಗಳು ಹೊಸ ಬಾಹ್ಯಾಕಾಶ ತಂತ್ರಜ್ಞಾನಗಳೊಂದಿಗೆ ಮುಂದೆ ಬರುತ್ತಿದ್ದು, ಅವುಗಳಿಗೂ ಅವಕಾಶ ನೀಡುವ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇಸ್ರೋ ಸೌಲಭ್ಯ ಬಳಸಲು ಅನುಮತಿ: ಬಾಹ್ಯಾಕಾಶ ಕ್ಷೇತ್ರವನ್ನು ಪ್ರವೇಶಿಸುವಂಥ ಖಾಸಗಿ ಕಂಪನಿಗಳಿಗೆ, ತಮ್ಮ ಉಪಗ್ರಹಗಳು ಅಥವಾ ಇನ್ನಿತರೆ ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಹಾಗೂ ಸರ್ಕಾರದ ಆಸ್ತಿಪಾಸ್ತಿಗಳನ್ನು ಬಳಸಿಕೊಳ್ಳಲು ಮುಕ್ತ ಅವಕಾಶವನ್ನೂ ನೀಡಲಾಗಿದೆ. ಆ ಮೂಲಕ ಕಂಪನಿಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ನೆರವಾಗಲಿದೆ ಎಂದೂ ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ತಂತ್ರಜ್ಞಾನ ಸಂಬಂಧಿ ಉದ್ಯಮಿಗಳಿಗೆ ರಿಮೋಟ…-ಸೆನ್ಸಿಂಗ್ ಡೇಟಾಗೆ ಸಂಬಂಧಿಸಿದಂತೆ ಉದಾರವಾದ ಭೌಗೋಳಿಕ ದತ್ತಾಂಶ ನೀತಿಯನ್ನು ಜಾರಿ ಮಾಡಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ. ಇದೇ ವೇಳೆ, ಇಸ್ರೋ ಆಸ್ತಿಪಾಸ್ತಿ ಬಳಕೆಗೆ ಖಾಸಗಿಗೆ ಅನುಮತಿ ನೀಡಿರುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿರುವ ಬಾಹ್ಯಾಕಾಶ ಸಂಸ್ಥೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಇಸ್ರೋ ಪಾಲಿಸುತ್ತದೆ ಹಾಗೂ ದೇಶದಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಖಾಸಗಿಯವರಿಗೂ ಅವಕಾಶ ಕಲ್ಪಿಸುತ್ತದೆ’ ಎಂದು ಟ್ವೀಟ್ ಮಾಡಿದೆ.