Advertisement
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆಯ ವಿಜಯಪುರ ಕ್ಷೇತ್ರ ಮತ ಎಣಿಕೆಯ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, ಮೊದಲು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಚಲಾಯಿಸಿದ ಹಾಗೂ ಸೇವಾ ನಿರತ ಸಿಬ್ಬಂದಿ ಚಲಾಯಿಸಿ ಮತಪತ್ರಗಳ ಎಣಿಕೆ ನಡೆಯಲಿದೆ. ಈ ಮತಗಳ ಎಣಿಕೆಗೆ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ.
Related Articles
Advertisement
32 ಜನ ಟ್ಯಾಬುಲೇಷನ್ ಸಿಬ್ಬಂದಿ, 40 ಜನ ಸೀಲಿಂಗ್ ಸಿಬ್ಬಂದಿ, ಇವಿಎಂಗಳನ್ನು ಟೇಬಲ್ಗಳಿಗೆ ಸಾಗಿಸಲು 128 ಸಿಬ್ಬಂದಿ ಹಾಗೂ 24 ಜನ ಹಾಜರಾತಿ ಪಡೆಯುವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಪೋಸ್ಟಲ್ ಬ್ಯಾಲೆಟ್ ಎಣಿಕೆಗಾಗಿ ಪ್ರತ್ಯೇಕವಾಗಿ 20 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಮತಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸೇರಿದಂತೆ ಚುನಾವಣಾ ಏಜೆಂಟರಾದಿಯಾಗಿ ಯಾರೊಬ್ಬರು ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆಗೆ ನೇಮಕಗೊಂಡಿರುವ ಪಾಸ್ ಹೊಂದಿದ ಏಜೆಂಟರಿಗೆ ಸೈನಿಕ ಶಾಲೆಯ ಎರಡನೇ ಗೇಟ್ನಿಂದ ಪ್ರವೇಶ ಕಲ್ಪಿಸಲಾಗುತ್ತದೆ. ಮೊದಲನೇ ಗೇಟ್ ಮೂಲಕ ಅಭ್ಯರ್ಥಿಗಳು, ಚುನಾವಣಾ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿ, ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಅಧಿಕೃತ ಪತ್ರ ಹೊಂದಿರುವ ಪತ್ರಕರ್ತರನ್ನು ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿದೆ.
ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಮೇ 22ರಂದು ಮಧ್ಯರಾತ್ರಿಯಿಂದ 23ರ ಮಧ್ಯರಾತ್ರಿ ವರೆಗೆ ವಿಜಯಪುರ ಜಿಲ್ಲೆಯಲ್ಲಿ ಪಾನ ನಿರೋಧ ದಿನ ಎಂದು ಘೋಷಿಸಲಾಗಿದೆ ಎಂದರು.
ಸ್ವೀಪ್ ಸಮಿತಿ ಅಧ್ಯಕ್ಷ ಜಿಪಂ ಸಿಇಒ ವಿಕಾಸ ಸುರಳಕರ, ಎಸ್ಪಿ ಪ್ರಕಾಶ ನಿಕ್ಕಂ ಪತ್ರಿಕಾಗೋಷ್ಠಿಯಲ್ಲಿದ್ದರು.