Advertisement

ಮೂರನೇ ಅಲೆ ತಡೆಗೆ ಸಿದ್ಧತೆ: ಬೊಮ್ಮಾಯಿ

12:11 AM Aug 13, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿನ ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡು ಬಂದಿದ್ದು, ಕೂಡಲೇ ನಿಯಂತ್ರಣ ಕ್ರಮಗಳನ್ನು ಜರುಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

Advertisement

ಗಣೇಶ ಚತುರ್ಥಿ ಸಹಿತ ವಿವಿಧ ಹಬ್ಬಗಳು ಬರುತ್ತಿವೆ. ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.

ಜಿ.ಪಂ. ಸಭಾಂಗಣದಲ್ಲಿ ಗುರುವಾರ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪಾಸಿಟಿವಿಟಿ ದರ ಶೇ.2.67ರಷ್ಟಿದ್ದು ಕಳೆದ ವಾರದಿಂದ ಹೆಚ್ಚಿಗೆಯಾಗಿದೆ.ದ.ಕ. ಮತ್ತು ಉಡುಪಿ ಜಿಲ್ಲೆಯ ನಡುವೆ ದಿನ ನಿತ್ಯದ ವ್ಯವಹಾರ ನಡೆಯುವ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಮೂರನೆಯ ಅಲೆ ಎದುರಿಸಲು ಆಡಳಿತ ಸಿದ್ಧ ವಾಗಿದೆ. ಸಪ್ಟೆಂಬರ್‌ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಗಡಿ ಜಿಲ್ಲೆಗಳ ಮೂಲಕ ಸೋಂಕು ವ್ಯಾಪಿಸುತ್ತಿರುವ ಕಾರಣ ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್‌ ಮೊದಲಾದ ಗಡಿ ಜಿಲ್ಲೆಗಳಿಗೆ ಪ್ರವಾಸ ನಡೆಸಿ ಮುಂಜಾ ಗ್ರತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದರು.

ಮಾದರಿ ಪರೀಕ್ಷೆ: ಫ‌ಲಿತಾಂಶ ಶೀಘ್ರ

Advertisement

ಗಂಟಲ ದ್ರವ ಪರೀಕ್ಷೆ ಪ್ರಮಾಣವನ್ನು 3 ರಿಂದ 5 ಸಾವಿರಕ್ಕೆ R ಏರಿಸಿದ್ದೇವೆ. ಪರೀಕ್ಷಾ ಫ‌ಲಿತಾಂಶ 2-3 ದಿನಗಳಲ್ಲಿ ಬರುತ್ತಿದ್ದು ಮುಂದೆ 24 ಗಂಟೆಗಳೊಳಗೆ ಸಿಗಲಿದೆ. ಈಗ ಸೋಂಕಿತರ ಹತ್ತು ಮಂದಿ ಸಂಪರ್ಕಿ ತರನ್ನು ಗುರುತಿಸಲಾಗುತ್ತಿದ್ದು ಮುಂದೆ 20 ಮಂದಿಗೆ ವಿಸ್ತರಿಸುವುದಾಗಿ ತಿಳಿಸಿದರು.

ಪ್ರಸ್ತುತ ಶೇ. 80 ಸೋಂಕಿತರು ಹೋಂ ಐಸೊಲೇಶನ್‌ನಲ್ಲಿದ್ದಾರೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಅಲ್ಲಿಗೆ ಸೋಂಕಿತರನ್ನು ಸ್ಥಳಾಂತರಿಸ ಲಾಗುವುದು. ಕಾರ್ಕಳದಲ್ಲಿ ಒಂದು ಆಕ್ಸಿಜನ್‌ ಉತ್ಪಾದನ ಘಟಕ ಬಂದಿದ್ದು ಇನ್ನೊಂದು 10 ದಿನಗಳಲ್ಲಿ ಬರಲಿದೆ. ಉಡುಪಿ, ಕುಂದಾಪುರದಲ್ಲಿ ಒಂದು ಬಂದಿದ್ದು ಇನ್ನೊಂದು ಘಟಕ ಬರಲಿದೆ. ಹೆಬ್ರಿ, ಬೈಂದೂರಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಹೆಚ್ಚಿನ ಲಸಿಕೆ ಪೂರೈಕೆಗೆ ಕ್ರಮ

ಜಿಲ್ಲೆಯಲ್ಲಿ ಶೇ. 59 ಮಂದಿ ಮೊದಲ ಹಾಗೂ ಶೇ.21 ಮಂದಿ ಎರಡೂ ಡೋಸ್‌ ಪಡೆದಿದ್ದಾರೆ. ಹೆಚ್ಚಿನ ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಚಿವರಾದ ಡಾ| ಕೆ.ಸುಧಾಕರ್‌, ವಿ. ಸುನೀಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ…,ಲಾಲಾಜಿ ಆರ್‌. ಮೆಂಡನ್‌, ಜಿÇÉಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್‌, ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕಚಂದ್ರ, ಜಿÇÉಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ|ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next