Advertisement

ದೇಗುಲ, ಹೋಟೆಲ್‌ ಆರಂಭಕ್ಕೆ ಸಿದ್ಧತೆ

05:50 AM Jun 07, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ ಸಡಿಲ ಹಿನ್ನೆಲೆ ಸೋಮವಾರದಿಂದ ನಗರದಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಮಾಲ್‌ಗ‌ಳು ಆರಂಭವಾಗಲಿ ದ್ದು, ಗ್ರಂಥಾಲಯ, ಶಾಲಾ ಕಾಲೇಜುಗಳಲ್ಲಿ ಲಾಕ್‌ಡೌನ್‌ ಮುಂದುವರಿಯಲಿದೆ. ಕಂಟೈನ್ಮೆಂಟ್‌  ವಲಯದಲ್ಲಿರುವ ಮಾಲ್‌, ಹೋಟೆಲ್‌ ಹಾಗೂ ದೇವಸ್ಥಾನಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿಲ್ಲ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ 50 ಕಂಟೈನ್ಮೆಂಟ್‌ ವಲಯ ಗುರುತಿಸಿದ್ದು, ಇಲ್ಲಿರುವ ಮಾಲ್‌, ದೇವಸ್ಥಾನ ತಾತ್ಕಾಲಿಕವಾಗಿ ಲಾಕ್‌  ಡೌನ್‌ ಆಗಲಿವೆ. ಹೋಟೆಲ್‌ಗ‌ಳು, ಮಾಲ್‌, ದೇವಾಲಯಗಳಿಗೆ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆ ಶನಿವಾರದಿಂದ ಸ್ವತ್ಛತಾ ಹಾಗೂ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ. ಹೋಟೆಲ್‌ಗ‌ಳಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು,  ಓಡಾಡಲು ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಿವೆ.

ಮಾಸ್ಕ್ , ಸ್ಯಾನಿಟೈಸರ್‌ ಕಡ್ಡಾಯಗೊಳಿಸಿದ್ದು, ಗ್ರಾಹಕರು ಹೋಟೆಲ್‌ನಲ್ಲಿ ಊಟ ಮಾಡಿದ ನಂತರ ಸ್ಯಾನಿಟೈಸರ್‌ ಮೂಲಕ ಸ್ವತ್ಛ ಗೊಳಿಸಲು ವ್ಯವಸ್ಥೆ ಮಾಡಲಾಗಿದೆ. ಅದರಂತೆ  ಮಾಲ್‌ಗ‌ಳಲ್ಲಿಯೂ ಸ್ವತ್ಛತಾ ಕಾರ್ಯ ನಡೆದಿದ್ದು, ಜನರಿಗೆ ಸ್ಯಾನಿಟೈಸರ್‌ ಸಿಂಪಡಣೆಗೊಳಿಸಲು ಮಾಲ್‌ ಮುಂಭಾಗ ಪ್ರತ್ಯೇಕ ಬಾಕ್ಸ್‌ ನಿರ್ಮಿಸಲಾಗಿದೆ. ದೇವಸ್ಥಾನಗಳಲ್ಲಿ ಭಕ್ತರು ಸಾಲಿನಲ್ಲಿ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ.

 ಕಂಟೈನ್ಮೆಂಟ್‌ ವಲಯಗಳು ಯಾವವು?: ಪಾದರಾಯನಪುರ, ಹೊಂಗಸಂದ್ರ, ಬೇಗೂರು, ಶಿವಾಜಿನಗರ, ಮಲ್ಲೇಶ್ವರ, ಹೆಚ್‌.ಬಿ.ಆರ್‌ ಲೇಔಟ್‌, ಹಾರೋಹಳ್ಳಿ, ಮಂಗಮ್ಮನಪಾಳ್ಯ, ರಾಮಮೂರ್ತಿ ನಗರ, ಅಗ್ರಹಾರ ದಾಸರಹಳ್ಳಿ, ಬೊಮ್ಮನಹಳ್ಳಿಯನ್ನು ಕಂಟೈನ್ಮೆಂಟ್‌ ವಲಯ  ಎಂದು ಗುರುತಿಸಲಾಗಿದೆ.

ಏನಿರುತ್ತೆ: ಬಿಎಂಟಿಸಿ, ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ , ಕೆಎಸ್‌ಆರ್‌ಟಿಸಿ, ಮಾಲ್‌, ಆಸ್ಪತ್ರೆ, ಮೆಡಿಕಲ್‌ ಶಾಪ್‌, ಸೆಲೂನ್‌, ಹೋಟೆಲ್‌, ಬೀದಿ ಬದಿ ವ್ಯಾಪಾರ, ದೇವಸ್ಥಾನ, ಮಸೀದಿ, ಚರ್ಚ್‌, ಸ್ಟೇಷನರಿ ಅಂಗಡಿ, ದಿನಸಿ ಅಂಗಡಿ, ಕಾರ್‌,  ಬೈಕ್‌ ಶೋ ರೂಂ, ಸೂಪರ್‌ ಮಾರ್ಕೆಟ್‌, ತರಕಾರಿ ಮಾರುಕಟ್ಟೆ, ರೈಲ್ವೆ, ಸರ್ವೀಸ್‌ ಸ್ಟೇಷನ್‌, ಪಾರ್ಕ್‌, ಬೇಕರಿ, ಮೊಬೈಲ್‌ ಶಾಪ್‌, ಬಟ್ಟೆ ಅಂಗಡಿ.

Advertisement

ಏನಿರಲ್ಲ: ಚಿತ್ರಮಂದಿರ, ಮೆಟ್ರೋ, ಬ್ಯೂಟಿ ಪಾರ್ಲರ್‌, ಪಬ್‌, ಗ್ರಂಥಾಲಯ, ಶಾಲಾ- ಕಾಲೇಜು, ಅಂಗನವಾಡಿ, ಮ್ಯೂಸಿಯಂ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳ, ಕ್ಲಬ್‌, ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳ.

ಸೋಮವಾರದಿಂದ ನಗರದಲ್ಲಿ ಮಾಲ್‌, ಹೋಟೆಲ್‌, ದೇವಸ್ಥಾನಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕಂಟೈನ್ಮೆಂಟ್‌ ವಲಯದಲ್ಲಿ ಮಾಲ್‌, ದೇವಸ್ಥಾನ ತೆರೆಯುವಂತಿಲ್ಲ. ಮಹಾರಾಷ್ಟ್ರ ದಿಂದ ಬರುವವರ  ಮೇಲೆ ನಿಗಾ ವಹಿಸಲಾಗಿದೆ.
-ಬಿ.ಎಚ್‌. ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

ಹೋಟೆಲ್‌ ಆರಂಭಿಸಲು ಅನುಮತಿ ನೀಡಲಾಗಿದ್ದು, ಅಗತ್ಯ ಕ್ರಮ ಕೈಗೊಳಲಾಗಿದೆ. ಮಾಸ್ಕ್ ಇಲ್ಲದಿದ್ದರೆ ಹೋಟೆಲ್‌ ಪ್ರವೇಶ ನಿಷೇಧಿಸಲಾಗಿದೆ. ಜನರು ಕುಳಿತುಕೊಳ್ಳುವ ಸ್ಥಳ, ನಿಲ್ಲುವ ಸ್ಥಳ ಗುರುತಿಸಲಾಗಿದೆ. ಸ್ಯಾನಿಟೈಸರ್‌ ಬಳಕೆ  ಕಡ್ಡಾಯಗೊಳಿಸಲಾಗಿದೆ.
-ಕೃಷ್ಣರಾಜು, ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿ ಸದಸ್ಯ

ಸೋಮವಾರ ಗ್ರಂಥಾಲಯ ಆರಂಭಿಸಲು ಸರ್ಕಾರ ತಿಳಿಸಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಈ ಬಗ್ಗೆ ಸಿಎಂ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ತೀರ್ಮಾನವಾಗುವ ಸಾಧ್ಯತೆಗಳಿವೆ. 
-ಸತೀಶ್‌ ಕುಮಾರ್‌ ಕೆ. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ

ದೇವಸ್ಥಾನದ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ದೇಗುಲ ಸ್ವತ್ಛಗೊಳಿಸಲಾಗುತ್ತಿದೆ. ಸಾಲಿನಲ್ಲಿ ಅಂತರ ಕಾಯ್ದುಕೊಳ್ಳಲು ದೇವಸ್ಥಾನದಲ್ಲಿ ಬಣ್ಣದ ಲೈನ್‌ ಎಳೆಯಲಾಗಿದೆ. ತೀರ್ಥ, ಪ್ರಸಾದ ನಿಷೇಧಿಸಲಾಗಿದ್ದು,  ಅರ್ಚನೆ ಮಾಡಲಾಗುವುದು.
-ಕೆ.ಎಸ್‌.ಎನ್‌.ದೀಕ್ಷಿತ್‌, ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next