Advertisement

ಮದ್ಯದಂಗಡಿಗಳ ಆರಂಭಕ್ಕೆ ಸಿದ್ದತೆ: ಹಳೆ ಸ್ಟಾಕ್ ಪರಿಶೀಲನೆ ನಂತರ ಪರವಾನಿಗೆ ನೀಡುವಂತೆ ಆಗ್ರಹ

01:57 PM May 03, 2020 | keerthan |

ಗಂಗಾವತಿ: ಕೊವಿಡ್-19 ಕರ್ಪ್ಯೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯದಂಗಡಿಗಳನ್ನು ಆರಂಭಿಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.

Advertisement

ಗಂಗಾವತಿ ತಾಲೂಕಿನಲ್ಲಿ ಒಟ್ಡು 18 ಸಿಎಲ್-02 ಸರಕಾರಿ ಮದ್ಯದಂಗಡಿ-೦4 ಇದ್ದು ಜನದಟ್ಟಣೆ ತಪ್ಪಿಸಲು ಬಾರ್ ಮಾಲೀಕರು ಸಾಲಾಗಿ ಮದ್ಯ ಖರೀದಿಸಲು ಕಟ್ಟಿಗೆಗಳಿಂದ ಕ್ಯೂ ನಿಲ್ಲುವಂತೆ ಕಟ್ಟಿಗೆಯಿಂದ ವೇ ನಿರ್ಮಿಸಲಾಗಿದೆ. ಮೇಲೆ ಬಿದಿರಿನ ತಟ್ಟಿ ಹಾಕಲಾಗಿದೆ. ಮದ್ಯದಂಗಡಿ ಹತ್ತಿರ ಮದ್ಯ ಸೇವನೆಗೆ ಅವಕಾಶ ನೀಡದೇ ಪರ್ಸಲ್ ತೆಗೆದುಕೊಂಡು ಹೋಗಲು ಸರಕಾರ ಪರವಾನಿಗೆ ನೀಡಿದೆ. ಈ ನಿಯಮ ಪಾಲನೆ ಮಾಡದ ಮದ್ಯದಂಗಡಿಗಳ ಲೈಸೆನ್ಸ್ ರದ್ದು ಪಡಿಸಲಾಗುತ್ತದೆ ಎಂದು ಅಬಕಾರಿ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಹಳೆಸ್ಟಾಕ್ ಪರಿಶೀಲಿಸಿ ಪರವಾನಿಗೆ ನೀಡಲು ಆಗ್ರಹ

ಕೋವಿಡ್-19 ಕರ್ಪ್ಯೂ ಹೇರುವ ಮುಂಚೆ ಇದ್ದ ಮದ್ಯದ ಸ್ಟಾಕ್ ಪರಿಶೀಲನೆ ನಂತರವೇ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಅಧಿಕಾರಿಗಳು ಮದ್ಯದದಂಗಡಿಯವರು ಸೇರಿ ಲಾಕ್ ಡೌನ್ ಸಂದರ್ಭದಲ್ಲಿ ಮದ್ಯದ ಅಕ್ರಮ ಮಾರಾಟ ಮಾಡಿದ್ದಾರೆ. ಗ್ರಾಮೀಣ ಮತ್ತು ನಗರದ ಸ್ಲಂಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಮದ್ಯದ ಅಕ್ರಮ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದು ಪುನಃ ಇವುಗಳ ಮೂಲಕ ಮದ್ಯ ಮಾರಾಟಕ್ಕೆ ಲಿಕ್ಕರ್ ಲಾಭಿ ನಡೆಯುತ್ತಿದ್ದು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯದ ಅಕ್ರಮ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಚಾಲಕ ತಿಪ್ಪಣ್ಣ ಆರತಿ ಹುಲುಗೇಶ ದೇವರಮನಿ‌ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next