Advertisement
ಬಿಸಿಲು ಹೆಚ್ಚುತ್ತಿದೆ. ಮತ್ತೂಂದೆಡೆ ಮಳೆಯ ಮುನ್ಸೂಚನೆ ದೊರಕಿದೆ. ಈಗಾ ಗಲೇ ಉಡುಪಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಒಂದೆರಡು ಬಾರಿ ಮಳೆ ಸುರಿದಿದೆ. ಇನ್ನೆರಡು ತಿಂಗಳೊಳಗೆ ಮಳೆಗಾಲ ಆರಂಭವಾಗಲಿದೆ. ಇದಕ್ಕೆ ಪೂರ್ವಸಿದ್ಧತೆಗಳನ್ನು ಹೆದ್ದಾರಿ ಇಲಾಖೆ ಮಾಡಿಕೊಳ್ಳಬೇಕು. ಅದನ್ನು ಮಾಡಲು ಇಲಾಖೆಗೆ ಈಗ ಕಾರ್ಮಿಕರ ಕೊರತೆ ಅಡ್ಡಿಯಾಗಿದೆ.
ಮಣಿಪಾಲ-ಪರ್ಕಳ ನಡುವೆ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಈಗ ಕಾರ್ಮಿಕರಿಲ್ಲದೆ ಕೆಲಸ ನಡೆಯುತ್ತಿಲ್ಲ. ಮಳೆಗಾಲದ ಪೂರ್ವಭಾವಿಯಾಗಿ ಕೆಲವು ತುರ್ತು ಕೆಲಸಗಳನ್ನು ಪರ್ಕಳ, ಮಣಿಪಾಲ, ಉಡುಪಿ ನಡುವಿನ ರಾ.ಹೆದ್ದಾರಿಯ ಅಲ್ಲಲ್ಲಿ ನಡೆಸುತ್ತಿದ್ದೇವೆ. ಇರುವ ನಾಲ್ಕೈದು ಮಂದಿ ಕಾರ್ಮಿಕರನ್ನು ಬಳಸಿಕೊಂಡು ಹೆದ್ದಾರಿಗಳ ಬದಿಯ ಚರಂಡಿಯ ಹೂಳೆತ್ತುವ ಹಾಗೂ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ರಾ.ಹೆ. ಇಲಾಖೆ ಎಂಜಿನಿಯರ್ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.