Advertisement

ಅನುಭವ ಮಂಟಪ ಉತ್ಸವಕ್ಕೆ ಸಿದ್ಧತೆ

12:33 PM Oct 08, 2018 | Team Udayavani |

ಬಸವಕಲ್ಯಾಣ: ನವೆಂಬರ್‌ನಲ್ಲಿ ನಡೆಯಲಿರುವ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಎರಡು ದಿನ ಮಾಡಬೇಕೋ ಅಥವಾ ಮೂರು ದಿನ ಮಾಡಬೇಕೋ ಎಂಬುದನ್ನು ಪ್ರಮುಖರು- ಆತ್ಮೀಯರು ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ವಿಶ್ವ ಬಸವ ಧರ್ಮ ಟ್ರಸ್ಟ್‌ ವತಿಯಿಂದ ನ.25-26ರಂದು ನಡೆಯಲಿರುವ 39ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ಅಂಗವಾಗಿ ರವಿವಾರ ನಗರದ ಅನುಭವ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಸಾಹಿತಿಗಳು ಮತ್ತು ಪ್ರಮುಖರು ಕಮ್ಮಟ ಮೂರು ದಿನ ನಡೆಸಬೇಕು ಎಂಬ ವಿಷಯ ಪ್ರಸ್ತಾಪ ಇಟ್ಟಾಗ ಪ್ರತಿವರ್ಷ ಎರಡು ದಿನ ಉತ್ಸವ ಮಾಡಿಕೊಂಡು ಬರಲಾಗುತ್ತಿದೆ ಹಾಗಾಗಿ ಮೂರು ದಿನ ಕಾರ್ಯಕ್ರಮ ಮಾಡಬೇಕು ಅಂದರೆ ಬಸವಾಭಿಮಾನಿಗಳಿಗೆ ಮತ್ತು ಗಣ್ಯರಿಗೆ ಎಲ್ಲ ರೀತಿಯ ಸೌಕರ್ಯ ನೀಡಬೇಕಾಗುತ್ತದೆ. ಹಾಗಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಉತ್ಸವ ಎಷ್ಟು ದಿನ ಮಾಡಬೇಕು ಮತ್ತು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎನ್ನುವ ಬಗ್ಗೆ ಎಲ್ಲರ ಜೊತೆಗೆ ಚರ್ಚಿಸಿ ನಿರ್ಧರಿಸಿ ಮೂರು ದಿನಗಳಲ್ಲಿ ಇನ್ನೊಮ್ಮೆ ಸಭೆ ಕರೆದು ತಿಳಿಸಲಾಗುವುದು ಎಂದರು.
 
ಬಸವ ಭಕ್ತರು ಮನೆಮನೆಗೆ ತೆರಳಿ ಕಮ್ಮಟ ಬಗ್ಗೆ ಜಾಗೃತಿ ಮೂಡಿಸು ಕೆಲಸ ಮಾಡಬೇಕು. ಇದು ವಿಶ್ವಗುರು ಬಸವಣ್ಣನವರ ಹಬ್ಬವಾಗಿದ್ದು, ವಚನಗಳ ತತ್ವಾದರ್ಶಗಳು ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದರು. 

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಳೆದ ವರ್ಷ ಅನುಭವ ಮಂಟಪಕ್ಕೆ ಬಂದಾಗ ರಾಜ್ಯದಲ್ಲಿ ನಮ್ಮ ಸರಕಾರ ಬಂದರೆ ಅನುಭವ ಮಂಟಪದ ಎಲ್ಲ ಕೆಲಸಗಳಿಗೆ ಒಂದೇ ಕಂತಿನಲ್ಲಿ ನಾನು ಸಹಾಯ ಮಾಡುತ್ತೇನೆಂಬ ಭರವಸೆ ನೀಡಿದ್ದರು.

ಆದರೆ ಈಗ ಮರೆತಂತೆ ಕಾಣುತ್ತಿದೆ. ಆದ್ದರಿಂದ ಕೆಲವು ದಿನಗಳೊಳಗೆ ಸಮಯ ನಿಗದಿ ಮಾಡಿಕೊಂಡು ಪ್ರಮುಖರು-ಗಣ್ಯರ ನಿಯೋಗ ತೆಗೆದುಕೊಂಡು ಹೋಗಿ ಭೇಟಿ ಮಾಡಬೇಕೆಂದು ತಿಳಿಸಿದರು. ಅಲ್ಲದೇ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗುವುದು ಎಂದರು.

Advertisement

ಹುಲಸೂರಿನ ಡಾ|ಶಿವಾನಂದ ಸ್ವಾಮಿಗಳು ಮಾತನಾಡಿ, ಹಲವಾರು ವರ್ಷಗಳಿಂದ ಶರಣ ಕಮ್ಮಟವನ್ನು ಅಚ್ಚುಕಟ್ಟಾಗಿ ನಡೆಸುಕೊಂಡು ಬರಲಾಗುತ್ತಿದೆ. ಆದ್ದರಿಂದ ವೈಮನಸುಗಳನ್ನು ಬಿಟ್ಟು, ಎಲ್ಲರೂ ತನು-ಮನ-ಧನದಿಂದ ಸಹಾಯ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಡಾ|ಗಂಗಾಬಿಕೆ ಅಕ್ಕ ಮಾತನಾಡಿ, ಕಾರ್ಯಕ್ರಮ ಸಾರ್ವಜನಿಕವಾಗಿ ಎರಡು ದಿನ ನಡೆಯಲಿ. ಒಂದು ದಿನ ಮುನ್ನ ಎಲ್ಲ ಮಠಾಧಿಧೀಶರನ್ನು ಕರೆದು ಚಿಂತನ-ಮಂಥನ ಮಾಡಬೇಕು. ಅಲ್ಲಿ ನಿರ್ಣಯವಾದ ಸಂದೇಶಗಳನ್ನು ಕಮ್ಮಟದಲ್ಲಿ ಹೇಳಬೇಕು ಇದರಿಂದ ನಮ್ಮ ಕಾರ್ಯಕ್ರಮ ಉದ್ದೇಶ ಈಡೇರಿದಂತಾಗುತ್ತದೆ ಎಂದರು.

ಶ್ರೀ ಗುರುಬಸವ ಪಟ್ಟದ್ದೇವರು, ಬೇಲೂರು ಉರುಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮಿಗಳು, ಶಿವರಾಜ ನರಶೆಟ್ಟಿ, ಅನೀಲ ರಗಟೆ, ಕಲ್ಯಾಣರಾವ್‌ ಶಿವಣಕರ್‌, ರಾಜಕುಮಾರ ರಟಕಲೆ, ಗುರುನಾಥ ಗಡ್ಡೆ, ಪಂಡಿತ ನಾಗರಾಳೆ, ವಿವೇಕ ನಾಗರಾಳೆ, ಅನುಭವ ಮಂಟಪ ವ್ಯವಸ್ಥಾಪಕ ಶಂಕರ ಮದುರ್‌ಗೆ ಮತ್ತಿತರರು ಇದ್ದರು. ವೀರಣ್ಣಾ ಕುಂಬಾರ ಸ್ವಾಗತಿಸು, ವಂದಿಸಿದರು.

ಪ್ರತಿಯೊಬ್ಬ ಬಸವಾಭಿಮಾನಿಗಳಿಗೆ ಉತ್ಸವ ದೊಡ್ಡ ಹಬ್ಬವಾಗಿದೆ. ಜಿಲ್ಲೆಯಲ್ಲದೇ ಬೇರೆ ಕಡೆಯಿಂದಲೂ ಭಕ್ತಾದಿಗಳು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಸವ ಅನುಯಾಯಿಗಳು ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿ
ಯಶಸ್ವಿಗೊಳಿಸಲು ಸಹಕರಿಸಬೇಕು. 
 ಬಾಬು ವಾಲಿ, ಬೀದರ್‌

ಪ್ರೀತಿ ತುಂಬಿದ ಏಕೈಕ ಸಂಸ್ಥೆ ಅನುಭವ ಮಂಟಪ. ಮುಂದಿನ ದಿನಗಳಲ್ಲಿ ಇದು ಅಂತಾರಾಷ್ಟ್ರೀಯ ತಾಣವಾಗಿ ಬೆಳೆಯಲಿದೆ. ವಚನಗಳು-ತತ್ವಾದರ್ಶಗಳು ಬೆಳೆಯಲು ತನು-ಮನ-ಧನದಿಂದ ಸಹಾಯ ಮಾಡುವುದು ತುಂಬಾ ಅವಶ್ಯಕ.
 ಬಸವರಾಜ ಧನ್ನೂರ, ಉದ್ಯಮಿ ಬೀದರ್‌

ಎರಡು ದಿನದ ಬದಲು ಮೂರು ದಿನ ಉತ್ಸವ ಮಾಡಿದರೆ ಒಳ್ಳೆಯದು. ಏಕೆಂದರೆ ಒಂದು ದಿನ ಉದ್ಘಾಟನೆಯಲ್ಲಿ
ಕಳೆದು ಹೋಗುತ್ತಿದೆ. ಹೀಗಾಗಿ ಮೂರು ದಿನ ಕಮ್ಮಟ ನಡೆಸಿದರೆ ಗೋಷ್ಠಿಗಳನ್ನು ನಡೆಸಲು ಸಾಧ್ಯವಾಗುತ್ತದೆ.
 ಡಾ| ಸೋಮನಾಥ ಯಳವಾರ, ಸಾಹಿತಿ ಹುಮನಾಬಾದ್‌

ಪ್ರತಿವರ್ಷ ಸುಮಾರು 30ರಿಂದ 40 ಲಕ್ಷ ರೂ. ಖರ್ಚು ಮಾಡಿ ಕಮ್ಮಟ ಮಾಡಲಾಗುತ್ತಿದೆ. ಆದರೆ ಉದ್ದೇಶ ಮಾತ್ರ ತಲುಪುತ್ತಿಲ್ಲ. ಹಾಗಾಗಿ 30 ಜನ ಸಾಧಕರನ್ನು ನೇಮಿಸಿ ಕಾರ್ಯಕ್ರಮ ಉದ್ದೇಶ ಮನೆ ಮನೆಗೆ ತಲುಪುವಂತಾಗಬೇಕು.
 ಚಂದ್ರಶೇಖರ ಹೆಬ್ಟಾಳ

ವಿಶ್ವಗುರು ಬಸವಣ್ಣನವ ಕರ್ಮಭೂಮಿಯಲ್ಲಿ ನಡೆಯುವ ಈ ಶರಣ ಕಮ್ಮಟ ಉತ್ಸವದಲ್ಲಿ ಮಹಿಳಾ ಗೋಷ್ಠಿ ಹೆಚ್ಚಾಗಿ
ನಡೆಯಬೇಕು.
 ಶಕುಂತಲಾ ಬೆಲ್ದಾಳೆ, ಜಿಪಂ ಸದಸ್ಯೆ ಚಿಟ್ಟಾ (ಬೀದರ್‌)

ಶರಣ ಕಮ್ಮಟದಲ್ಲಿ ಸನ್ಮಾನಕ್ಕೆ ಹೆಚ್ಚು ಸಮಯ ನೀಡಲಾಗುತ್ತಿದೆ. ಇದರಿಂದ ಕಾರ್ಯಕ್ರಮದ ಮೂಲ ಉದ್ದೇಶ ಮರೆಯಲಾಗುತ್ತಿದೆ. ಆದ್ದರಿಂದ ಸನ್ಮಾನ ಆರಂಭದಲ್ಲಿ ಅಥವಾ ಕೊನೆಯಲ್ಲಿ ಮಾಡಿದರೆ ಸೂಕ್ತ.
 ವೈಜಿನಾಥ ಕಾಮಶೆಟ್ಟಿ, ಅನುಭವ ಮಂಟಪ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next