Advertisement
ಲೇಖಕಿಯರ ಜೀವನಾನುಭವದ ಮತ್ತು ಬರವಣಿಗೆಯ ಅನುಭವವನ್ನು ಆಧರಿಸಿ ಸಂಘ ಈಗಾಗಲೇ 6 ಲೇಖ ಲೋಕ ಆತ್ಮಕಥನ ಮಾಲಿಕೆ ಪ್ರಕಟಿಸಿದೆ. ಅದನ್ನು ಮುಂದುವರಿಸಿ ಲೇಖ ಲೋಕ 7 ಅನ್ನು ಪ್ರಕಟಿಸಲು ಕೇಂದ್ರ ಕಲೇಸಂ ಶಿವಮೊಗ್ಗದ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಮುಂದಾಗಿದೆ.
Related Articles
Advertisement
ಕುಪ್ಪಳ್ಳಿಯಲ್ಲಿ ನಡೆಯುವ ಸಮಾರಂಭದಲ್ಲಿ ಆತ್ಮಕಥೆ ನಿರೂಪಣೆ ಮಾಡುವವರೊಂದಿಗೆ ಡಾ.ಜ್ಯೋತಿ ಶಶಿಕುಮಾರ್, ಬನಶಂಕರಿ ಮೂರ್ತಿ, ಕಮಲಾ ಬಾಲು, ಸುಗುಣಾದೇವಿ, ಮಲ್ಲಿಕಾ ಬಸವರಾಜ್, ಸುನಂದ.ಎಸ್, ಪ್ರಮೀಳಾ ಪಾಲನೇತ್ರ, ಸಂಪದ ಕೆರಿಮನಿ, ಸುನೀತಾ ರಾವ್, ಸತ್ಯಭಾನು ನಾಗರಾಜ್, ಎಚ್.ವಿಶಾಲಾಕ್ಷಿ, ಪ್ರೊ.ಆಶಾಲತ, ಜಿ.ಎಸ್.ಸರೋಜ, ಮಾನಸ ಶಿವರಾಮಕೃಷ್ಣ, ದೀಪಾ ಕುಬ್ಸದ್, ಶ್ರೀರಂಜಿನಿ ದತ್ತಾತ್ರಿ, ಅಶ್ವಿನಿ ಕಿರಣ್ ಹಾಗೂ ಶ್ರೀಲತಾ ಜಯಣ್ಣ ಸಂವಾದ ನಡೆಸಲಿದ್ದಾರೆ.
ಲೇಖ ಲೋಕದ ಆರಂಭ: 1998ರಲ್ಲಿ ನಾಗಮಣಿ ಎಸ್ ರಾವ್ ಕಲೇಸಂನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೇಖ ಲೋಕ ಯೋಜನೆಗೆ ನಾಂದಿ ಹಾಡಿದರು. ಮಹಿಳಾ ಸಾಹಿತ್ಯ ರಚನೆಗೆ ಪೂರಕವಾಗಿ ಲೇಖಕಿಯರ ಆತ್ಮ ಕಥೆಗಳು ದಾಖಲೆಯಾಗುವುದು ಅತ್ಯವಶ್ಯಕವೆಂಬ ಆಶಯದೊಂದಿಗೆ ಈ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಹೆಸರಾಂತ ಲೇಖಕಿ ಡಾ.ನಳಿನಿ ಮೂರ್ತಿ ಅವರ ಹೆಸರಿನಲ್ಲಿ ಅವರ ಪತಿ ಎಸ್.ನರಸಿಂಹಮೂರ್ತಿ ಅವರು ಕರ್ನಾಟಕ ಲೇಖಕಿಯರ ಸಂಘಕ್ಕೆ ನೀಡಿರುವ ದೇಣಿಗೆಯಿಂದ ಡಾ.ನಳಿನಿ ಮೂರ್ತಿ ಸ್ಮಾರಕ ಪುಸ್ತಕ ಮಾಲೆ ಅಡಿಯಲ್ಲಿ ಲೇಖ ಲೋಕ ಸಂಪುಟಗಳನ್ನು ಪ್ರಕಟಿಸಲಾಯಿತು.
ನಾಡಿನ ಹೆಸರಾಂತ ಲೇಖಕರು, ಸಾಹಿತಿಗಳ ಆತ್ಮಕಥೆಗಳು ಪ್ರಕಟವಾಗುತ್ತಲೇ ಇರುತ್ತದೆ. ಆದರೆ, ಮಹಿಳಾ ಸಾಹಿತಿಗಳ ಆತ್ಮಕಥೆಗಳು ಪ್ರಕಟವಾಗುವುದು ಅಪರೂಪ. ಈ ಹಿನ್ನೆಲೆಯಲ್ಲಿ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಿಂದ ಅವರ ಆತ್ಮಕಥೆ ಬರೆಸಿ ಪ್ರಕಟಿಸಲು ಕರ್ನಾಟಕ ಲೇಖಕಿಯರ ಸಂಘ (ಕಲೇಸಂ) ಮುಂದಾಗಿದೆ.-ವನಮಾಲಾ ಸಂಪನ್ನಕುಮಾರ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ. * ಶ್ರುತಿ ಮಲೆನಾಡತಿ