ಮಾಗಡಿ: ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಜೂ.23ರಂದು ಬೆಳಗ್ಗೆ 10 ಗಂಟೆಗೆ ಅದ್ಧೂರಿ ಯಾಗಿ ಸರ್ವಧರ್ಮ ಪ್ರಿಯ ಕೆಂಪೇಗೌಡ ಜಯಂತಿಯನ್ನು ಮಾಗಡಿ ಹಬ್ಬದಂತೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಡಾ. ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಪ್ರಸನ್ನ ಕೋಟೆ ರಾಮೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿನ ಚಾಮುಂಡೇಶ್ವರಿ ಸನ್ನಧಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದಲೂ ನನ್ನ ದುಡಿಮೆಯ ಹಣದಿಂದಲೇ ನಿರಂತರವಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇನೆ. ಜಯಂತಿ ಸಮಾರಂಭಕ್ಕೆ ಭಾಗವಹಿಸುವ ಸಹಸ್ರಾರು ಮಂದಿಗೆ ತಿನ್ನುವಷ್ಟು ಬೂಂದಿ, ಅನ್ನದಾನವನ್ನು ಏರ್ಪಡಿಸುವ ಮೂಲಕ ಕೆಂಪೇಗೌಡರ ಹೆಸರನ್ನು ವಿಶ್ವವಿಖ್ಯಾತಿಗೊಳಿಸಲು ಶ್ರಮಿಸಿದ್ದೇನೆ. ನಾಡು ಕಟ್ಟಿದ ಧರ್ಮಪ್ರಭು ಕೆಂಪೇಗೌಡರ ಹೆಸರಿನಲ್ಲಿ ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜನರ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿದ್ದೇನೆ ಎಂದರು.
ಸಮಾರಂಭಕ್ಕೆ ಸಕಲ ಸಿದ್ಧತೆ: ಈ ಬಾರಿಯೂ ನನ್ನ ಸ್ವಂತ ದುಡಿಮೆಯಲ್ಲಿಯೇ ವಿಶಿಷ್ಟವಾಗಿ ಅದ್ಧೂರಿ ನಾಡಪ್ರಭು ಕೆಂಪೇ ಗೌಡ ಜಯಂತಿ ಸಮಾರಂಭಕ್ಕೆ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ಈ ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮೈಸೂರಿನ ಯಧುವೀರ ಮಹಾರಾಜನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಉಸ್ತವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ನಾರಾಯಣ, ಸಚಿವ ಗೋಪಾ ಲಯ್ಯ, ಎಸ್.ಟಿ.ಸೋಮಶೇಖರ್, ನಟ ಪ್ರೇಮ್, ಜಗ್ಗೇಶ್, ವಿನೋದ್ ಪ್ರಭಾಕರ್, ಗುರುಕಿರಣ್, ಅಭಿಷೇಕ್, ವಿವಿಧ ಮಠಗಳ ಮಠಾಧೀಶರು, ಗಣ್ಯರು, ಸಮಾಜಸೇವಕರು ಹಾಗೂ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
20 ಸಾವಿರ ಮಂದಿಗೆ ಭೋಜನ: ಜಯಂತಿ ಪ್ರಯುಕ್ತ ಅಲಂಕೃತ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾ ರ್ಪಣೆ ಮಾಡಲಾಗುವುದು. ವಿವಿಧ ಕಲಾತಂಡಗಳ ಸಾಂಸ್ಕೃತಿಕ ಮೆರವಣಿಗೆ, ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ ಸಮಾರಂಭಕ್ಕೆ ಬರುವ ಗಣ್ಯರಿಗೆ, ಸಾರ್ವ ಜನಿಕರಿಗೆ ಸುಮಾರು 20 ಸಾವಿರ ಮಂದಿಗೆ ಸಸ್ಯಹಾರಿ ಮತ್ತು ಮಾಂಸಹಾರ ಭೋಜನ ಏರ್ಪಡಿಸಲಾಗಿದೆ ಎಂದರು. ಗಂಗಾಧರ್, ಮೋಹನ್, ಆನಂದ್, ಹೇಮಂತ್, ದೊಡ್ಡಿಗೋಪಿ ಹಾಗೂ ಇತರರು ಇದ್ದರು.