Advertisement

ಸನಾತನ ಮಹಿಳಾ ಜಗದ್ಗುರು ಪೀಠ ಸ್ಥಾಪನೆಗೆ ಸಿದ್ಧತೆ

11:45 PM Feb 11, 2022 | Team Udayavani |

ವಿಜಯಪುರ: ಜಾತಿ, ಪಂಗಡಗಳೆಲ್ಲ ಹತ್ತಾರು ಪೀಠಗಳನ್ನು ಸ್ಥಾಪಿಸುತ್ತಿರುವ ಬೆನ್ನಲ್ಲೇ ಸನಾತನ ಮಹಿಳಾ ಜಗದ್ಗುರು ಪೀಠ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಸಾವಯವ ದೇಶಿ ಕೃಷಿ ಸಂತ ಎಂದು ಕರೆಸಿಕೊಂಡಿರುವ ಮಹಾರಾಷ್ಟ್ರದ ಕನ್ಹೆರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಆಶಯದಂತೆ ಇಂಥದ್ದೊಂದು ಚಿಂತನೆ ನಡೆದು, ಯೋಜನೆಯಾಗಿ ರೂಪುಗೊಳ್ಳಲು ಚಟುವಟಿಕೆ ನಡೆದಿವೆ. ಈ ಬಗ್ಗೆ ವಿಜಯಪುರ ಜಿಲ್ಲೆಯ ಬುರಣಾಪುರದ ಆರೂಢಮಠದ ಯೋಗೇಶ್ವರಿ ಮಾತಾಜಿ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಈಗಾಗಲೇ ರೂಪುಗೊಂಡಿರುವ “ಸಹೃದಯಿ ಮಠಾಧೀಶರ ಒಕ್ಕೂಟ’ ಇದರ ಸಾರಥ್ಯ ವಹಿಸಿಕೊಂಡಿದ್ದು, ಈ ಒಕ್ಕೂಟದಲ್ಲಿ ನೂರಕ್ಕೂ ಹೆಚ್ಚು ಮಠಾಧಿಧೀಶರ ಜತೆಗೆ 40ಕ್ಕೂ ಹೆಚ್ಚು ಸಾದ್ವಿಗಳೂ ಇದ್ದಾರೆ. ಈ ಮಠಾ ಧೀಶರ ಒಕ್ಕೂಟ ಕೆಲವು ತಿಂಗಳ ಹಿಂದೆ ವಿಜಯಪುರ ನಗರದಲ್ಲಿ ಸಭೆ ಸೇರಿ ಮತಾಂತರದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿತ್ತು. ಮಹಿಳಾ ಸಾದ್ವಿಗಳ ಕೊರತೆ ನೀಗುವುದು ಕೂಡ ಸನಾತನ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಹಿಂದಿರುವ ಉದ್ದೇಶಗಳಲ್ಲಿ ಒಂದಾಗಿದೆ.

ಸಮಗ್ರ ಚರ್ಚೆ
ಭಾರತೀಯ ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಿರುವ ಕನ್ಹೆàರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಇತ್ತೀಚೆಗೆ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ನಡೆದ ಸಭೆಯಲ್ಲಿ ಸನಾತನ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಘೋಷಿಸಿದ್ದರು. ಅದರ ಅನುಷ್ಠಾನಕ್ಕೆ ಸಿದ್ಧತೆ ನಡೆದಿದ್ದು, ಮಹಿಳಾ ಪೀಠ ಸ್ಥಾಪನೆ ಸ್ಥಳ, ವಿಸ್ತೃತ ಯೋಜನೆ, ಏನೇನಿರಬೇಕು, ಹೇಗೆಲ್ಲ ಇರಬೇಕು ಎನ್ನುವ ಬಗ್ಗೆ ಸಮಗ್ರ ಚರ್ಚೆಗೆ ಶೀಘ್ರವೇ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ.

ಭಾರತೀಯ ಪರಂಪರೆಯಲ್ಲಿ ಸಾ ದ್ವಿಯರ ಸಾಮರ್ಥ್ಯದಂತೆ ಧರ್ಮದ ಜ್ಞಾನದಿಂದ ವಿಮುಖವಾಗುತ್ತಿರುವ ಆಧುನಿಕತೆಯ ಇಂದಿನ ವ್ಯವಸ್ಥೆಯಲ್ಲಿ ಧರ್ಮ ರಕ್ಷಣೆ ಅತ್ಯಗತ್ಯ. ಸನಾತನ ಜ್ಞಾನಸಂಪನ್ನ ಸಾ ದ್ವಿಯರನ್ನು ರೂಪಿಸಲು ಸನಾತನ ಮಹಿಳಾ ಜಗದ್ಗುರು ಪೀಠ ಸ್ಥಾಪಿಸುವ ಯೋಜನೆ ರೂಪುಗೊಳ್ಳುತ್ತಿದೆ. ಇದಕ್ಕಾಗಿ ಕನ್ಹೆàರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಚಟುವಟಿಕೆ ನಡೆಯುತ್ತಿವೆ.
– ಯೋಗೇಶ್ವರಿ ಮಾತಾಜಿ, ಆರೂಢಮಠ, ಬುರಣಾಪುರ, ವಿಜಯಪುರ ಜಿಲ್ಲೆ

-ಜಿ.ಎಸ್‌. ಕಮತರ

Advertisement

 

Advertisement

Udayavani is now on Telegram. Click here to join our channel and stay updated with the latest news.

Next