Advertisement
ರಥಬೀದಿಯಲ್ಲಿ ಗುರ್ಜಿ ನೆಡುವ ಕೆಲಸ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ರಥಬೀದಿ ಸುತ್ತ ಒಟ್ಟು 12 ಗುರ್ಜಿಗಳನ್ನು ನೆಡಲಾಗಿದೆ. ಇದರಲ್ಲಿ 7 ಗುರ್ಜಿ ಶ್ರೀಕೃಷ್ಣ ಮಠಕ್ಕೆ ಸೇರಿದ್ದಾದರೆ, ಇನ್ನುಳಿದ 6 ಗುರ್ಜಿಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇಗುಲಕ್ಕೆ ಸೇರಿದೆ. ರಥಬೀದಿಯ ತೆಂಕಪೇಟೆ, ಕನಕಗೋಪುರದ ಎದುರು ಬೃಹತ್ ಗುರ್ಜಿಗಳನ್ನು ನಿರ್ಮಿಸ ಲಾಗಿದೆ. ವಿಟ್ಲಪಿಂಡಿ ಉತ್ಸವದಂದು ಅನಂತೇಶ್ವರ, ಚಂದ್ರಮೌಳೇಶ್ವರ ಉತ್ಸವ ಮೂರ್ತಿಗಳೊಂದಿಗೆ ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿ ಉತ್ಸವದಲ್ಲಿ ರಥಬೀದಿ ಸುತ್ತ ಪ್ರದಕ್ಷಿಣೆ ಬರುತ್ತದೆ. ಗುರ್ಜಿಗಳಲ್ಲಿ ನೆಟ್ಟ ಮೊಸರು ಕುಡಿಕೆಗಳನ್ನು ಮಠದ ಗೋವನ್ನು ನೋಡಿಕೊಳ್ಳುವ ಗೊಲ್ಲ ಸಮುದಾಯ ದವರು ನಿರ್ವಹಿಸುತ್ತಾರೆ.
ದೇವಸ್ಥಾನದ ಒಳಗಿನ ಭಿತ್ತಿ ಚಿತ್ರಗಳಿಗೆ ಪುನಃ ಬಣ್ಣ ನೀಡುವ ಮೂಲಕ ಚಿತ್ರಗಳಿಗೆ ಕಳೆ ನೀಡಲಾಗುತ್ತಿದೆ. ಕಲಾವಿದ ಸಚ್ಚಿದಾನಂದ ರಾವ್ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಬಹಳ ಕಾಲದ ಬಳಿಕ ಚಿತ್ರಗಳಿಗೆ ಬಣ್ಣ ನೀಡುವ ಮೂಲಕ ಚಿತ್ರಗಳಿಗೆ ಮರುಜೀವ ನೀಡಲಾಗಿದೆ. ಉಂಡೆ ಚಕ್ಕುಲಿ ತಯಾರಿಗೆ ಚಾಲನೆ
ಗುರುವಾರ ಮಠದ ಪಾಕಶಾಲೆಯಲ್ಲಿ ಚಕ್ಕುಲಿ ತಯಾರಿಕೆ ಆರಂಭಿಸಲಾಗಿದೆ.ವಿಟ್ಲಪಿಂಡಿಯಂದು ಹಂಚಲು ಮತ್ತು ಚಿಣ್ಣರ ಸಂತರ್ಪಣೆಯ ಶಾಲೆಗಳಿಗೆ ಹಂಚಲು ಸುಮಾರು 1ಲಕ್ಷ ಚಕ್ಕುಲಿಗಳನ್ನು ತಯಾರಿಸ ಲಾಗುತ್ತಿದೆ. ಶುಕ್ರವಾರ ಉಂಡೆ ತಯಾರಿಕೆಗೆ ಚಾಲನೆ ದೊರಕಲಿದೆ. ಒಟ್ಟು 9 ಬಗೆಯ ಉಂಡೆಗಳನ್ನು ತಯಾರಿಸಲಾಗುತ್ತಿದೆ. ಗುಂಡಿಟ್ಟು ಲಾಡು, ಅರಳುಂಡೆ, ನೆಲಗಡಲೆ ಉಂಡೆ,ಹೆಸರಿಟ್ಟು ಉಂಡೆ, ಕಡ್ಲೆ ಹಾಗೂ ಎಳ್ಳುಂಡೆ, ಒಣ ಶುಂಠಿ, ಗೋಡಂಬಿ ಉಂಡೆ, ರವೆ ಲಾಡು ತಯಾರಾಗಲಿದೆ. ಶಾಲೆಗಳಿಗೆ ಹಂಚುವ ನೆಲಗಡಲೆ ಮತ್ತು ಗುಂಡಿಟ್ಟು ಉಂಡೆಗಳನ್ನು ತಲಾ 40 ಸಾವಿರ ತಯಾರಿಸಲಾಗುತ್ತಿದ್ದು ಮತ್ತುಳಿದ ಉಂಡೆ ಗಳನ್ನು ತಲಾ 25 ಸಾವಿರದಂತೆ ತಯಾರಿಸಲಾಗುತ್ತಿದೆ. ಚಿಣ್ಣರ ಸಂತರ್ಪಣೆಗಾಗಿ ಶಾಲೆಗಳಿಗೆ ನೀಡುವ ಉಂಡೆ ಚಕ್ಕುಲಿಯ ಪೊಟ್ಟಣದಲ್ಲಿ ಎರಡು ಚಕ್ಕುಲಿ ಮತ್ತು ಒಂದು ನೆಲಗಡಲೆ ಮತ್ತು ಗುಂಡಿಟ್ಟು ಉಂಡೆಯನ್ನು ನೀಡಲಾಗುತ್ತದೆ.