Advertisement
ಕಾವೇರಿ, ಕಪಿಲೆ ಹಾಗೂ ಸ್ಪಟಿಕ ಸರೋವರ ನದಿಗಳ ಸಂಗಮಗೊಳ್ಳುವ ಪಟ್ಟಣದ ಹಳೇ ತಿರುಮಕೂಡಲಿ ನಲ್ಲಿ ಫೆ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ನೇತೃತ್ವದ ಅಧಿಕಾರಿಗಳ ತಂಡ ಯಜ್ಞ ಯಾಗಗಳ ನಡೆಯುವ ಅಗಸ್ತೇಶ್ವರ ದೇವಾಲಯ, ಧಾರ್ಮಿಕ ಸಮಾರಂಭ ನಡೆಯುವ ತ್ರಿವೇಣಿ ಸಂಗಮ ನದಿ ಪಾತ್ರ ಹಾಗೂ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು.
Related Articles
Advertisement
ಧಾರ್ಮಿಕ ಸಮಾರಂಭ ವೇದಿಕೆ ನಿರ್ಮಾಣ ಸೇರಿದಂತೆ ಬರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕೈಗೊಳ್ಳಬೇಕಾದ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಫೆ.17 ರಂದು ಅಂಕುರಾರ್ಪಣೆಯೊಂದಿಗೆ ಹೋಮ ಹವನಗಳನ್ನು ಆರಂಭಿಸಿ 11ನೇ ಮಹಾಕುಂಭಮೇಳವನ್ನು ವಿಧ್ಯುಕ್ತ ವಾಗಿ ಆರಂಭಿಸಲಾಗುವುದು. 18ರ ಸಂಜೆ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಸಾಧು-ಸಂತರು ಹಾಗೂ ಶ್ರೀಗಳ ಪುರಪ್ರವೇಶ ನಡೆಯಲಿದ್ದು, ಯಾಗ ಶಾಲೆಯ ಪ್ರವೇಶವಾಗಲಿದೆ. 19ಕ್ಕೆ ಪೂರ್ಣಾಹುತಿ ಯೊಂದಿಗೆ ಸಂತರೆಲ್ಲರೂ ಪುಣ್ಯಸ್ನಾನ ಮಾಡಲಿದ್ದಾರೆ.
ಮೂರು ದಿನಗಳ ಕಾಲವೂ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಒಂದೂವರೆ ತಿಂಗಳಿದೆ ಎಂದು ಕಾಯುವ ಬದಲು ಇಂದಿನಿಂದಲೇ ಪೂರ್ವ ಸಿದ್ಧತೆಗಳನ್ನು ಆರಂಭಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೈಲಾಸ ಆಶ್ರಮದ ವೆಂಕಟೇಶ್ ಚೈತನ್ಯ, ಜಿಪಂ ಸದಸ್ಯ ಜಯಪಾಲ್ ಭರಣಿ, ಪುರಸಭಾ ಸದಸ್ಯ ಎಸ್.ಕೆ.ಕಿರಣ, ಕಾಂಗ್ರೆಸ್ ಮುಖಂಡ ಪಿ.ಸ್ವಾಮಿನಾಥ್‌ಗೌಡ, ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಎಚ್.ಕೆ.ರಮೇಶ್, ಇಲಾಖೆ ಎಂಜಿನಿಯರ್ ಸತೀಶ್, ತಾಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಬಿ.ಎಸ್.ನಂಜೇಶ್, ತಹಶೀಲ್ದಾರ್ ಎಚ್.ಎಸ್.ಪರಮೇಶ, ಜಿಪಂ ಎಇಇ ಜೆ.ಎಂ.ಸುರೇಶ್, ಕಾವೇರಿ ನೀರಾವರಿ ನಿಗಮದ ಎಇಇ ಕೆಂಪರಾಜು, ಸಹಾಯಕ ಎಂಜನಿಯರ್ ಷಫಿಕ್, ಯೋಗೇಶ, ಸುಧೀಂದ್ರ, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಆರೋಗ್ಯ ನಿರೀಕ್ಷಕ ಆರ್.ಚೇತನ್‌ಕುಮಾರ್, ಕೆಎಸ್‌ಆರ್‌ಟಿಸಿ ಸಂಚಾರ ವ್ಯವಸ್ಥಾಪಕಿ ಎನ್.ಪುಪ್ಪಾ, ಅಂಗಡಿ ಎನ್.ಶೇಖರ, ಟಿ.ಸಿ.ಫಣೀಶ್‌ಕುಮಾರ್, ಫ್ಯಾನ್ಸಿ ಮೋಹನ, ಬಿ.ಮಹದೇವ ಇತರರಿದ್ದರು.
ಕುಂಭಮೇಳ ಪ್ರಚಾರಕ್ಕೆ ಆದ್ಯತೆ ನೀಡಿ ತಿರುಮಕೂಡಲಿನಲ್ಲಿ ನಡೆಯುವ ದಕ್ಷಿಣ ಭಾರತದ ಕುಂಭಮೇಳಕ್ಕೆ ಪ್ರಚಾರದ ಕೊರತೆ ಯಾಗುತ್ತಿದ್ದು, 11ನೇ ಮಹಾ ಕುಂಭಮೇಳಕ್ಕೆ ವ್ಯವಸ್ಥಿತವಾಗಿ ಪ್ರಚಾರ ಮಾಡಲು ಜಿಲ್ಲಾಡಳಿತ ಆದ್ಯತೆ ನೀಡಬೇಕು. ಅಲ್ಲದೇ ಪಟ್ಟಣದ ವ್ಯಾಪ್ತಿಯಲ್ಲಿ ಮತ್ತೂಂದು ಸಭೆ ನಡೆಸಬೇಕು. ಪ್ರತಿಯೊಂದು ವಿಚಾರವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳ ಮೂಲಕ ಮಾಡ ಬೇಕು ಎಂದು ಟಿಎಪಿಸಿಎಂಎಸ್‌ನ ಮಾಜಿ ನಿರ್ದೇಶಕ ಬಿ.ಮಹದೇವ ಸಲಹೆ ನೀಡಿದರೆ, ಕಸಬಾ ಪಿಎಸಿಸಿಎಸ್ ನಿರ್ದೇಶಕ ಅಂಗಡಿ ಎನ್.ಶೇಖರ ಮಾತನಾಡಿ, ಕುಂಭಮೇಳದಲ್ಲಿ ಲಕ್ಷಾಂ ತರ ಜನರು ಪುಣ್ಯಸ್ನಾನ ಮಾಡುವುದರಿಂದ ಕಾವೇರಿ ಮತ್ತು ಕಪಿಲ ನದಿಗೆ ಕೊಳಚೆ ನೀರು ಸೇರುವುದನ್ನು ತಾತ್ಕಾಲಿಕವಾಗಿ ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ಬಾಟಲಿ ಬದಲು ಕ್ಯಾನ್ ನೀರು ದಕ್ಷಿಣ ಭಾರತದ 11ನೇ ಮಹಾಕುಂಭಮೇಳದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಲು ಈ ಬಾರಿ ಬರುವ ಭಕ್ತರಿಗೆ ಹಾಗೂ ಗಣ್ಯರಿಗೆ ಪ್ಲಾಸ್ಟಿಕ್‌ನ ಬಾಟಲ್‌ಗಳಲ್ಲಿ ಕುಡಿಯುವ ನೀರನ್ನು ನೀಡುವುದರ ಬದಲು ನಿಗದಿತ ಸ್ಥಳಗಳಲ್ಲಿ ಕ್ಯಾನ್‌ಗಳನ್ನು ಇಟ್ಟು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಬೇಕು. ಪ್ಲಾಸ್ಟಿಕ್ ಬಾಟಲುಗಳಲ್ಲಿ ನೀರನ್ನು ಕುಡಿದು ಅವುಗಳನ್ನು ನದಿಗೆ ಬೀಸಾ ಡುವುದರಿಂದ ತ್ರಿವೇಣಿ ಸಂಗಮ ಮತ್ತಷ್ಟು ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಕ್ಯಾನ್ ಗಳಲ್ಲಿ ಕುಡಿಯುವ ನೀರನ್ನು ನೀಡುವುದು ಸೂಕ್ತವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ತಿಳಿಸಿದರು.
ಸಾರ್ವಜನಿಕ ವಾಹನಗಳಿಗೆ ಪ್ರತ್ಯೇಕ ನಿಲ್ದಾಣ ಕುಂಭಮೇಳ ಧಾರ್ಮಿಕ ಉತ್ಸವದ ವೇಳೆ ಸಂಚಾರ ದಟ್ಟಣೆ ಆಗುವುದನ್ನು ತಡೆಗಟ್ಟಲು ಸಾರ್ವಜನಿಕ ವಾಹನಗಳಿಗೆ ನಿಲ್ದಾಣವೊಂದನ್ನು ತೆರೆಯಲಾಗುವುದು. ಸಮಾರಂಭ ನಡೆಯುವ ಹಳೇ ತಿರುಮಕೂಡಲಿಗೆ ಗಣ್ಯರ ವಾಹನಗಳಿ ಗಷ್ಟೇ ಪ್ರವೇಶ ಕಲ್ಪಿಸುವುದು ಸರಿಯಾಗಿದೆ. ಅದಕ್ಕಾಗಿ 5 ಎಕರೆ ಜಾಗದಲ್ಲಿ ವಾಹನಗಳ ನಿಲ್ದಾಣಕ್ಕೆ ವ್ಯವಸ್ಥೆ ಮಾಡಬೇಕಿದೆ ಎಂದು ವೃತ್ತ ನಿರೀಕ್ಷಕ ಎಂ.ಆರ್.ಲವ ತಿಳಿಸಿದರು.