Advertisement
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಂಪಿ ಉತ್ಸವ ಆಚರಣೆಗೆ ಬರ ಪರಿಸ್ಥಿತಿ, ಪ್ರವಾಹ ಹೀಗೆ ಪ್ರತಿವರ್ಷ ಒಂದಲ್ಲಾ ಒಂದುವಿಘ್ನಗಳು ಎದುರಾಗುತ್ತಿದ್ದು, ಪ್ರಸಕ್ತ 2020ರಲ್ಲಿ ಕೋವಿಡ್ ಸೋಂಕು ವಿಘ್ನ ಎದುರಾಗಿದೆ.
Related Articles
Advertisement
ಕಾನೂನು ಸುವ್ಯವಸ್ಥೆ ಸಮಿತಿ: ಕಾನೂನು-ಸುವ್ಯವಸ್ಥೆ ಸಮಿತಿಯಲ್ಲಿ ಹೊಸಪೇಟೆ ಮತ್ತು ಕಮಲಾಪುರ ಡಿವೈಎಸ್‌ಪಿ ಅಧ್ಯಕ್ಷರಾಗಿದ್ದು, ಹೊಸಪೇಟೆ ತಹಶೀಲ್ದಾರ್‌ರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಬಳ್ಳಾರಿ ಗೃಹರಕ್ಷಕದಳ ಸಮಾದೇಷ್ಟರು ಸದಸ್ಯರಾಗಿದ್ದು ಇವರು ಉತ್ಸವದ ವೇಳೆ ಗಣ್ಯರು ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದು, ಹಂಪಿಗೆ ಬರುವ ಎಲ್ಲ ರಸ್ತೆಗಳಲ್ಲಿ ಸೂಕ್ತ ಸಂಚಾರ ನಿಯಂತ್ರಣ, ಆನೆಗಳ ಸ್ವಾಗತ, ಶೋಭಾಯಾತ್ರೆ ಕಾರ್ಯಕ್ರಮದ ವೇಳೆ ಸೂಕ್ತ ಬಂದೋಬಸ್ತ್ ಏರ್ಪಡಿಸುವುದು, ಉತ್ಸವಕ್ಕೆ ಆಗಮಿಸುವ ಗಣ್ಯರು, ಕಲಾವಿದರಿಗೆ ಸೂಕ್ತ ಬಂದೋಬಸ್ತ್ ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಶೋಭಾಯಾತ್ರೆ ಸಮಿತಿ : ಶೋಭಾಯಾತ್ರೆ, ಪೂಜಾ ಸಮಿತಿಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಇನ್ನುಳಿದ ವಿವಿಧ ಇಲಾಖೆಗಳ ಏಳು ಜನ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಇವರು ಆನೆಗಳ ಸ್ವಾಗತಕ್ಕೆ ಪೂಜೆ ವ್ಯವಸ್ಥೆ, ಹೂವಿನ ಹಾರಗಳ ವ್ಯವಸ್ಥೆ, ಶೋಭಾಯಾತ್ರೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳನ್ನು ಸಕ್ರಮವಾಗಿ ಹಾಗೂ ಶಿಸ್ತುಬದ್ಧಾಗಿ ನಿಲ್ಲಿಸುವುದು
ಸೇರಿ ಇನ್ನಿತರೆ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಇನ್ನು ತುಂಗಾ ಆರತಿ ಸಮಿತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಅಧ್ಯಕ್ಷರಾಗಿದ್ದು, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಇಒ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದು, ಇವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಗಣ್ಯರು ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಅಂದು ಸಂಜೆ 6 ಗಂಟೆಗೆ ವಿಶೇಷ ಪೂಜಾ ಕಾರ್ಯಕ್ರಮ ಕೈಗೊಳ್ಳಲು ಕ್ರಮಕೈಗೊಳ್ಳಬೇಕು. ಪಕ್ಕದ ತುಂಗಭದ್ರಾ ನದಿ ದಡದಲ್ಲಿ ನಡೆಯಲಿರುವ ತುಂಗಾ ಆರತಿ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಯಾವುದೇ ಲೋಪವಿಲ್ಲದೇ ನಿರ್ವಹಿಸಬೇಕಾಗಿದೆ. ಜಿಲ್ಲೆಯ ಕಲಾವಿದರ ಅಸಮಾಧಾನ, ವಿರೋಧದ ನಡುವೆಯೂ ಹಂಪಿ ಉತ್ಸವವನ್ನು ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ ಉತ್ಸವವನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸಲಿದೆಯೇ ಕಾದು ನೋಡಬೇಕಾಗಿದೆ.
–ವೆಂಕೋಬಿ ಸಂಗನಕಲ್ಲು