Advertisement

ಬಿಗಿ ಭದ್ರತೆಯೊಂದಿಗೆ ಚುನಾವಣೆಗೆ ಸಕಲ ಸಿದ್ಧತೆ

09:48 PM May 28, 2019 | Team Udayavani |

ಮೂಡುಬಿದಿರೆ: ಪುರಸಭೆಯ 23 ವಾರ್ಡ್‌ಗಳಿಗೆ ಬುಧವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳಾಗಿವೆ. ಪ್ರಾಂತ್ಯ, ಮಾರ್ಪಾಡಿ, ಕರಿಂಜೆ, ಮಾರೂರು, ಕಲ್ಲಬೆಟ್ಟು ಹೀಗೆ ಐದು ಗ್ರಾಮಗಳಲ್ಲಿರುವ 23 ವಾರ್ಡ್‌ಗಳಲ್ಲಿ ಪುರುಷರು 12,038, ಮಹಿಳೆಯರು 13,024 ಹೀಗೆ ಒಟ್ಟು 25,068 ಮತದಾರರಿದ್ದಾರೆ.  ವಾರ್ಡ್‌ಗಳಿಗೊಂದು ಬೂತ್‌ ಇದ್ದು ಹೆಚ್ಚಿನ ಕಡೆಗಳಲ್ಲಿ ಸರದಿ ಸಾಲಿನಲ್ಲಿ ಬರುವ ಮತದಾರರಿಗಾಗಿ ಶ್ಯಾಮಿಯಾನ ವ್ಯವಸ್ಥೆಗೊಳಿಸಲಾಗಿದೆ. ಇವುಗಳಲ್ಲಿ 6 ಸೂಕ್ಷ್ಮ, 5 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅದಕ್ಕೆ ಪೂರಕ ವ್ಯವಸ್ಥೆ ಮಾಡಲಾಗಿದೆ.

Advertisement

ಒಟ್ಟು 46 ಪೊಲೀಸರು ಹಾಗೂ 15ಕ್ಕೂ ಅಧಿಕ ಹೋಮ್‌ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 120 ಮಂದಿ ಚುನಾವಣಾ ಸಿಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ಬೂತ್‌ಗಳಲ್ಲಿ ಸಿಬಂದಿಗೆ ಕುಡಿಯುವ ನೀರು ಮತ್ತಿತರ ಆವಶ್ಯಕ ಸೌಕರ್ಯಗಳನ್ನು ವ್ಯವಸ್ಥೆಗಳನ್ನು ಒದಗಿಸಲಾಗಿದ್ದು, ಮಂಗಳವಾರ ರಾತ್ರಿ ಊಟದಿಂದ ತೊಡಗಿ ಬುಧವಾರ ರಾತ್ರಿ ಊಟದವರೆಗೆ ಊಟೋಪಚಾರ ಪುರಸಭಾ ವತಿಯಿಂದ ಮಾಡಲಾಗಿದೆ.

23 ವಾರ್ಡ್‌ಗಳಲ್ಲಿ ಒಟ್ಟು 77 ಮಂದಿ ಉಮೇದ್ವಾರರಿದ್ದಾರೆ. ಬಿಜೆಪಿಯಿಂದ ಎಲ್ಲ 23, ಕಾಂಗ್ರೆಸ್‌ನಿಂದ 22, ಬಿಎಸ್‌ಪಿಯಿಂದ 14, ಜೆಡಿಎಸ್‌ನಿಂದ 8, ಎಸ್‌ಡಿಪಿಐ ಹಾಗೂ ಸಿಪಿಎಂ ನಿಂದ ತಲಾ 3 ಮಂದಿ ತಂತಮ್ಮ ಪಕ್ಷಗಳ ಚಿಹ್ನೆಯೊಂದಿಗೆ , 4 ಮಂದಿ ಪಕ್ಷೇತರರು ತಮಗೆ ನೀಡಲಾದ ಚಿಹ್ನೆಯೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ವಾರ್ಡ್‌ 1ರಿಂದ 11 ‌ವರೆಗೆ ಚುನಾವ ಣಾಧಿಕಾರಿಗಳಾಗಿ ಮಂಗಳೂರು ಡಿಡಿಪಿಐ ಕಚೇರಿಯ ಜ್ಞಾನೇಶ್‌, ಸಹಾಯಕ ಚುನಾವಣಾಧಿಕಾರಿಯಾಗಿ ಮೂಡುಬಿದಿರೆ ಬಿಇಒ ಕಚೇರಿಯ ಶಿವಾನಂದ ಕಾಯ್ಕಿಣಿ, ವಾರ್ಡ್‌ 12ರಿಂದ 23ರ ವರೆಗೆ ಚುನಾವಣಾಧಿಕಾರಿಯಾಗಿ ಮೂಡುಬಿದಿರೆ ಬಿಇಒ ಕಚೇರಿಯ ಮನೋಹರ ಕಾಮತ್‌, ಸಹಾಯಕ ಚುನಾವಣಾಧಿಕಾರಿಯಾಗಿ ಸುನಿಲ್‌ ಕುಮಾರ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next