Advertisement

ಚುನಾವಣೆ ಯಶಸ್ಸಿಗೆ ಸಕಲ ಸಿದ್ಧತೆ

12:55 PM Apr 23, 2019 | pallavi |

ಬೈಲಹೊಂಗಲ: ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಹಾಜರಾದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೋಮವಾರ ತರಬೇತಿ ನೀಡಿ ಮತಗಟ್ಟೆಗಳಿಗೆ ಬೀಳ್ಕೊಡಲಾಯಿತು.

Advertisement

ಪಟ್ಟಣದ ಧಾರವಾಡ ಬೈಪಾಸ್‌ ರಸ್ತೆಯಲ್ಲಿರುವ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಐಟಿಐ ಕಾಲೇಜು ಆವರಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಉಪವಿಭಾಗಾಧಿಕಾರಿ ಎಂ.ಪಿ. ಮಾರುತಿ ನೇತೃತ್ವದಲ್ಲಿ ತರಬೇತಿ ನೀಡಲಾಯಿತು.

ನಂತರ ಉಪವಿಭಾಗಾಧಿಕಾರಿ ಎಂ.ಪಿ. ಮಾರುತಿ ಮಾತನಾಡಿ, ಬೈಲಹೊಂಗಲ ಮತಕ್ಷೇತ್ರದಲ್ಲಿ 224 ಮತಗಟ್ಟೆಗಳಿದ್ದು, 19 ಸೂಕ್ಷ್ಮ, 5 ಅತೀ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. 1 ಡಿವೈಎಸ್ಪಿ, 3 ಸಿಪಿಐ, 6 ಪಿಎಸ್‌ಐ, 376 ಪೊಲೀಸ್‌ ಸಿಬ್ಬಂದಿ, ಅರೇಸೇನಾ ಪಡೆ, 1ಕೆಎಸ್‌ಆರ್‌ಪಿ, 102 ಗೃಹ ರಕ್ಷಕ, 73 ಜನ ವೀಕ್ಷಕರು, 1012 ಮತದಾನ ಸಿಬ್ಬಂದಿ 244 ಸಹಾಯಕರು, 20 ವಿಡಿಯೋಗ್ರಾಫರ್‌, 24 ಕೆಎಸ್‌ಆರ್‌ಟಿಸಿ ಬಸ್‌, 4 ಮಿನಿ ಬಸ್‌, 12 ಟ್ರ್ಯಾಕ್ಸ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಊಟ, ಉಪಹಾರ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಮಾಡಲಾಗಿದೆ. ಒಟ್ಟಾರೆ ಚುನಾವಣೆ ಯಶಸ್ವಿಗೊಳಿಸಲು ತಾಲೂಕಾಡಳಿತದಿಂದ ಎಲ್ಲ ಸಿದ್ಧತೆಗಳನ್ನು ಮಾಡಿರುವುದಾಗಿ ಉದಯವಾಣಿಗೆ ತಿಳಿಸಿದರು.

ತಹಶೀಲ್ದಾರ್‌ ಡಾ| ದೊಡ್ಡಪ್ಪ ಹೂಗಾರ, ತಾಪಂ ಇಒ ಸಮೀರ್‌ ಮುಲ್ಲಾ, ತಾಪಂ ಸಹಾಯಕ ನಿರ್ದೇಶಕ ಸುಭಾಷ ಸಂಪಗಾಂವಿ, ಸಮಾಜ ಕಲ್ಯಾಣಾಧಿಕಾರಿ ಎಂ.ಜಿ.ಉಣ್ಣಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಬಿಇಒ ಪಾರ್ವತಿ ವಸ್ತ್ರದ, ಅಕ್ಷರ ಶ್ರೀದೇವಿ ನಾಗನೂರ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next