ಧಾರವಾಡ: ಜಿಲ್ಲಾಸ್ಪತ್ರೆ ಬಳಿ ನಿರ್ಮಾಣದ ಅಂತಿಮಹಂತದಲ್ಲಿರುವ 100 ಹಾಸಿಗೆ ಸಾಮರ್ಥ್ಯದ ಮಹಿಳಾಮತ್ತು ಮಕ್ಕಳ ಆರೋಗ್ಯ ಘಟಕದ ಕಟ್ಟಡವನ್ನೇ ಇದೀಗಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲು ಸಿದ್ಧತೆ ಸಾಗಿದೆ.
ಡಿಮ್ಹಾನ್ಸ್ ಈ ಆಸ್ಪತ್ರೆ ನಿರ್ವಹಣೆಗೆ ಮುಂದಾಗಿದ್ದು,ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಸ್ಪತ್ರೆಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆರೋಗ್ಯಕ್ಕಾಗಿಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದ್ದು, ಅಂತಿಮ ಹಂತದಕಾಮಗಾರಿ ಸಾಗಿರುವ ಕಾರಣ ಇನ್ನೂ ಉದ್ಘಾಟನೆಆಗಿಲ್ಲ. ಬಾಣಂತಿಯರು ಹಾಗೂ ಮಕ್ಕಳ ಆರೈಕೆಗಾಗಿಪ್ರತ್ಯೇಕ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಘಟಕ ರೂಪಿಸಿದೆ.
ಆದರೆ ಈ ಕಟ್ಟಡವನ್ನು ಇದೀಗ ಕೋವಿಡ್‌ಆಸ್ಪತ್ರೆಯನ್ನಾಗಿ ಪರಿವರ್ತಿಸಿಕೊಳ್ಳುವ ಚಿಂತನೆ ಸಾಗಿದ್ದು,ಯೋಜನೆ ರೂಪಿಸಲಾಗಿದೆ.ಡಿಮ್ಹಾನ್ಸ್ ಆಸಕ್ತಿ: ಈ ಆಸ್ಪತ್ರೆಯನ್ನು ಪೂರ್ಣವಾಗಿಡಿಮ್ಹಾನ್ಸ್‌ನ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲುಸಿದ್ಧತೆ ಮಾಡಿಕೊಳ್ಳಲಾಗಿದೆ. ಡಿಮ್ಹಾನ್ಸ್‌ನಲ್ಲಿ 20ವೈದ್ಯರು, 44 ನರ್ಸ್‌ಗಳು ಹಾಗೂ 80ಕ್ಕೂ ಹೆಚ್ಚು ಡಿಗ್ರೂಫ್ ನೌಕಕರಿದ್ದಾರೆ. ಇದರಲ್ಲಿ ಎರಡು ತಂಡ ಮಾಡಿಒಂದು ತಂಡ ಡಿಮ್ಹಾನ್ಸ್ ನಿರ್ವಹಿಸಿದರೆ ಇನ್ನೊಂದುತಂಡ ಈ ಕೋವಿಡ್ ಆಸ್ಪತ್ರೆಯನ್ನು ನಿರ್ವಹಿಸಲುಯೋಜಿಸಲಾಗಿದೆ.
ಮಧ್ಯಮ ಹಂತದ ಅಂದರೆ ಆಕ್ಸಿಜನ್ ಸೇರಿದಂತೆಇತರೆ ಚಿಕಿತ್ಸೆ ನೀಡಿದರೆ ಸುಧಾರಿಸಿಕೊಳ್ಳುವಸೋಂಕಿತರನ್ನು ಈ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆನೀಡುವ ಯೋಜನೆ ಇದಾಗಿದೆ. ಒಂದು ವೇಳೆಏನಾದರೂ ಹೆಚ್ಚಿನ ಸಮಸ್ಯೆಯಾದರೆ ಪಕ್ಕದಲ್ಲಿಯೇಇರುವ ಜಿಲ್ಲಾಸ್ಪತ್ರೆಯ ವೈದ್ಯರ ನೆರವು ಸಿಗಲಿದ್ದು,ಆಸ್ಪತ್ರೆ ಕಾರ್ಯಾರಂಭಕ್ಕೆ ಜಿಲ್ಲಾಡಳಿತದ ಹಸಿರು ನಿಶಾನೆಬೇಕಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಡಿಮ್ಹಾನ್ಸ್ ನಿರ್ದೇಶಕರು ಚರ್ಚೆ ಮಾಡಿದ್ದಾರೆ.ಅನುಮತಿ ಸಿಕ್ಕರೆ ಕೋವಿಡ್ ಆಸ್ಪತ್ರೆ ಕಾರ್ಯಾರಂಭಮಾಡಲಿದೆ.ಕಟ್ಟಡದ ಹಿನ್ನೆಲೆ ಏನು?ಫೆಬ್ರವರಿ ತಿಂಗಳಲ್ಲಿ ಕಟ್ಟಡ ಕಾಮಗಾರಿ ವೀಕ್ಷಣೆಆಗಮಿಸಿದ್ದ ಡಿಸಿ ನಿತೇಶ ಪಾಟೀಲ ಅವರು,ಕಾಮಗಾರಿ ವಿಳಂಬ ಆಗಿರುವುದಕ್ಕೆ ಅಧಿಕಾರಿ ಹಾಗೂಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಒಪ್ಪಂದದ ಪ್ರಕಾರ ಈಗಾಗಲೇ ಕಾಮಗಾರಿಪೂರ್ಣಗೊಂಡು ಆಸ್ಪತ್ರೆ ಆರಂಭಿಸಬೇಕಿತ್ತು. ಆದರೆಗುತ್ತಿಗೆದಾರ ಇಲ್ಲದ ನೆಪ ಹೇಳಿ ಕಾಮಗಾರಿ ವಿಳಂಬಮಾಡುತ್ತಿದ್ದು, ಮಾರ್ಚ್ 31ರೊಳಗೆ ಕಾಮಗಾರಿಪುರ್ಣಗೊಳಿಸಿ ಬಳಕೆಗೆ ನೀಡದಿದ್ದರೆ, ಮೆ| ಎಸ್.ಆರ್.ಕನ್ಸ್‌ಟ್ರಕ್ಷನ್ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲುಮತ್ತು ಆರೋಗ್ಯ ಇಲಾಖೆ ಎಂಜಿನಿಯರ್ ಎಇಇ ಎಸ್.ಎನ್. ಸುರೇಶ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲುಶಿಫಾರಸು ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದ್ದರು.
ಆದರೆ ಇದೀಗ ಮಾರ್ಚ್ ತಿಂಗಳುಮುಗಿದು ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದಿದ್ದು,ಕಟ್ಟಡ ಕಾಮಗಾರಿ ಮಾತ್ರ ಈವರೆಗೂ ಪೂರ್ಣಗೊಂಡಿಲ್ಲ.ಬಹುತೇಕ ಈಗ ಅಂತಿಮ ಹಂತಕ್ಕೆ ಬಂದಿದ್ದು, ಕಟ್ಟಡಕ್ಕೆಬಣ್ಣ, ಆಸ್ಪತ್ರೆ ಆವರಣದಲ್ಲಿ ರಸ್ತೆ, ಕಟ್ಟಡದ ಒಳಗಿನಕಾಮಗಾರಿ ಭರದಿಂದ ಸಾಗಿದ್ದು, ಆದಷ್ಟು ಬೇಗ ಈ ಕಟ್ಟಡಉದ್ಘಾಟನೆಗೊಂಡರೆ ಬಹಳಷ್ಟು ಅನುಕೂಲ ಆಗಲಿದೆ.