Advertisement

ಬಕ್ರೀದ್ ಗೆ ಸಿದ್ಧಗೊಳ್ಳುತ್ತಿದೆ ಕಣಿವೆ ರಾಜ್ಯ

10:29 AM Aug 13, 2019 | Team Udayavani |

ಶ್ರೀನಗರ: ವಿಶೇಷ ಸ್ಥಾನವನ್ನು ಹಿಂಪಡೆದ ಕೇಂದ್ರ ಸರಕಾರ ಮುಂಜಾಗ್ರತ ಕ್ರಮವಾಗಿ ಕಾಶ್ಮೀರ ಮತ್ತು ಲಡಾಕ್ ನಲ್ಲಿ ಬಿಗಿ ಬಂದೋಬಸ್ತ್ ನೀಡಿದೆ. 370 ವಿಧಿಯನ್ನು ಹಿಂಪಡೆದರೆ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಸತತ 7 ದಿನಗಳಿಂದ ಬಿಗಿ ಪೊಲೀಸ್ ಬಂದೊಬಸ್ತ್ ನೀಡುತ್ತಾ ಬರಲಾಗಿದೆ. ಪರಿಣಾಮ ಕಾಶ್ಮೀರ ಸದ್ಯದ ಪರಿಸ್ಥಿತಿಗೆ ಶಾಂತವಾಗಿದೆ. ಈ ತನಕ ಕಾಶ್ಮೀರದಲ್ಲಿ ಸೇನೆಯ ಪಿಸ್ತೂಲ್ ನಿಂದ ಒಂದೇ ಒಂದು ಗುಂಡು ಮನುಷ್ಯರ ಜೀವ ಹೊಕ್ಕಿಲ್ಲ.

Advertisement

ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ನಲ್ಲಿ ಬಿಗಿ ಬಂದೋಬಸ್ತ್ ಮುಂದುವರೆಸಲಾಗಿದೆ.

ಸೋಮವಾರ ಬಕ್ರೀದ್ ಹಬ್ಬ ಆಚರಣೆ ನಡೆಯಲಿದ್ದು, ಜನರಿಗೆ ಸಿದ್ಧತೆ ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಕೆಲವೆಡೆ ಭದ್ರತೆಯನ್ನು ಸಡಿಲಗೊಳಿಸಲಾಗಿದೆ. ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದಾರೆ. ವಾರಗಳ ಬಳಿಕ ಜನರು ತಮ್ಮ ಮನೆಗಳನ್ನು ತೊರೆದು ಅಗತ್ಯ ವಸ್ತುಗಳು ಸೇರಿದಂತೆ ಬಟ್ಟೆ ಬರೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ 10 ಜಿಲ್ಲೆಗಳಲ್ಲಿ ಪೊಲೀಸರು ಭದ್ರತೆಯನ್ನು ತುಸು ಸಡಿಲಗೊಳಿದ್ದಾರೆ. ಆದರೆ ಸಡಿಲಗೊಂಡರು ತೀವ್ರ ಕಣ್ಗಾವಲು ಮಾಡಲಾಗುತ್ತಿದೆ. ಅ. 15ರ ಸ್ವಾತಂತ್ರ್ಯ ದಿನಾಚರಣೆಯಂದು ದೇಶದಲ್ಲಿ ಅಹಿತಕರ ಘಟನೆಗಳನ್ನು ನಡೆಸಲು ಉಗ್ರರು ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆ. 15ರಂದು ಪಾಕಿಸ್ಥಾನ ಕರಾಳ ದಿನವನ್ನಾಗಿ ಆಚರಿಸುತ್ತಿದೆ. ಈ ಸಂದರ್ಭ ಗಡಿ ಮೂಲಕ ಉಗ್ರರು ಭಾರತ ಪ್ರವೇಶಿಸಿಬಹುದು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಈಗಾಗಲೇ ಸರಕಾರಕ್ಕೆ ನೀಡಿದೆ.

Advertisement

ಮಾಧ್ಯಮಗಳು ಈಗಾಗಲೇ ವರದಿ ಮಾಡಿರುವಂತೆ ಕಾಶ್ಮೀರದ ಅಲ್ಲಲ್ಲಿ 370 ವಿಧಿಯನ್ನು ರದ್ದು ಮಾಡಿದ್ದಕ್ಕೆ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ ಎಂದಿತ್ತು. ಆದರೆ ಮಾಧ್ಯಮಗಳ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ಅಲ್ಲಗೆಳೆದಿದ್ದು, ಭಾರೀ ಪ್ರತಿಭಟನೆ ಏನೂ ಅಗಿಲ್ಲ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಸದ್ಯದ ಭದ್ರತಾ ಕ್ರಮದಲ್ಲಿ ಅಸಾಧ್ಯವಾದುದು. 20 ಮಂದಿಗಿಂತ ಹೆಚ್ಚಿನ ಜನರು ಒಟ್ಟಿಗೆ ಎಲ್ಲೂ ತೆರಳಿಲ್ಲ ಎಂದು ಹೇಳಿದೆ.

ಶನಿವಾರದ ವರೆಗೆ ಕಾಶ್ಮೀರದಲ್ಲಿ ಈ ಬಾರಿ ಬಕ್ರೀದ್ ಆಚರಣೆ ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಕೆಲವು ಪ್ರದೇಶದಲ್ಲಿ ಜನರು ಬಕ್ರೀದ್ ಗೆ ಸಿದ್ದಗೊಂಡಿದ್ದಾರೆ. ಅಂಗಡಿಗಳಿಗೆ ಆಗಮಿಸಿ ಹೊಸ ಬಟ್ಟೆ ಬರೆಯನ್ನು ಕೊಂಡುಕೊಂಡಿದ್ದು ಸೋಮವಾರ ಬಕ್ರೀದ್ ಗೆ ಸಾಕ್ಷಿಯಾಗಲಿದ್ದಾರೆ. ಇವರಿಗೆ ಭದ್ರತೆಗಾಗಿ ಪೋಲೀಸರನ್ನು ನೇಮಿಸಲಾಗಿದೆ. 6 ದಿನಗಳಿಂದ ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next