Advertisement

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

12:20 PM Apr 23, 2019 | Team Udayavani |

ಮಹಾಲಿಂಗಪುರ: 2019ರ ಲೋಕಸಭೆ ಚುನಾವಣೆಯ ಮತದಾನವು ಏ.23ರಂದು ನಡೆಯಲಿದೆ. ತನ್ನಿಮಿತ್ತ ಪಟ್ಟಣದಲ್ಲಿ ಸುಮಾರು 33 ಮತಗಟ್ಟೆ ಸ್ಥಾಪಿಸಲಾಗಿದೆ. 33 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ವೆಂಕಟೇಶ ಬೆಳಗಲ್, ಎಚ್.ಎಸ್‌.ಬಳ್ಳುರ, ಕೆ.ಐ. ನಾಗನೂರ ತಿಳಿಸಿದರು.

Advertisement

ಪಟ್ಟಣದ ಕೆಂಗೇರಿಮಡ್ಡಿ ಸರಕಾರಿ ಶಾಲೆಯ ಮತಗಟ್ಟೆ 190ನ್ನು ಸಖೀ ಮತಗಟ್ಟೆಯಾಗಿದೆ. ಸಖೀ ಮತಗಟ್ಟೆಯನ್ನು ಮದು ವಣಗಿತ್ತಿಯಂತೆ ಸಿಂಗರಿಸಲಾಗಿದೆ. ಮತದಾನ ಕೋಣೆಯನ್ನು ಅಲಂಕಾರ ಮಾಡಿ, ಬಲೂನ್‌ ಕಟ್ಟಿ ಮನೆಯಲ್ಲಿನ ಹಬ್ಬದಂತೆ ವಿಶೇಷ ಅಲಂಕರಿಸಲಾಗಿದೆ. ಮತಗಟ್ಟೆಯ ಹೊರಗೆ ವಿಶ್ರಾಂತಿಗಾಗಿ ವಿಶಾಲ ಪೆಂಡಾಲ್ ವ್ಯವಸ್ಥೆ, ಸರತಿ ಸಾಲಿನಲ್ಲಿ ನಿಲ್ಲಲು ಅನುಕೂಲ ಮಾಡಲಾಗಿದೆ. ಜೊತೆಗೆ ಮತದಾನ ಚಲಾಯಿಸಿ ಹೊರಬಂದ ಸಖೀಯರಿಗಾಗಿ, ಪ್ರತ್ಯೇಕ ಸೆಲ್ಫಿ ಜೋನ್‌ ಸಹ ಅಳವಡಿಸಲಾಗಿದೆ. ಮತಗಟ್ಟೆ ಮುಂಭಾಗದಲ್ಲಿ ಸಖೀ ಮತದಾರರ ಭಾವಚಿತ್ರದ ಬ್ಯಾನರಗಳ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ತೇರದಾಳ ಮತಕ್ಷೇತ್ರದ ಎರಡು ಸಖೀ ಮತಗಟ್ಟೆಗಳಲ್ಲಿ ಮಹಾಲಿಂಗಪುರದ 190ರ ಮತಗಟ್ಟೆಯು ಒಂದಾಗಿದ್ದು ವಿಶೇಷ.

ಸಖೀ ಮತಗಟ್ಟೆಯ ನಿರ್ಮಾಣಕ್ಕಾಗಿ ಚುನಾವಣಾಧಿಕಾರಿಗಳು 10 ಸಾವಿರ ನೀಡಿದ್ದಾರೆ. ಆದರೆ ಪುರಸಭೆಯಿಂದ ಹೆಚ್ಚಿನ ವೆಚ್ಚ ಹಾಕಿ ಮತಗಟ್ಟೆಯನ್ನು ಮತ್ತಷ್ಟು ಆಕರ್ಷಣೀಯವಾಗಿಸಲಾಗಿದೆ. ಮಹಿಳಾ ಮತದಾರರೇ ಹೆಚ್ಚಾಗಿರುವ ಈ ಮತಗಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಖೀ ಮತಗಟ್ಟೆಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸಖೀ ಮತಗಟ್ಟೆಗೆ ಹೆಚ್ಚಿನ ಮೆರುಗು ನೀಡಬೇಕೆಂದು ಪುರಸಭೆ ಮುಖ್ಯಾಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಕೆ.ಐ. ನಾಗನೂರ ವಿನಂತಿಸಿದ್ದಾರೆ. ಸಖೀ ಮತಗಟ್ಟೆ ಅಧಿಕಾರಿ, ಪಿಆರ್‌ಒ, ಮಹಿಳಾ ಪೇದೆ, ಸಿಬ್ಬಂದಿ ಸೇರಿದಂತೆ ಸಖೀ ಮತಗಟ್ಟೆಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ನೇಮಕ ಗೊಳಿಸಲಾಗಿದೆ. ಚುನಾವಣೆಯ ಕರ್ತವ್ಯಕ್ಕಾಗಿ ಮಹಿಳಾ ಸಿಬ್ಬಂದಿ ಮಂಗಳವಾರ ಸಂಜೆ ಮತಗಟ್ಟೆಗೆ ಆಗಮಿಸಿ, ಮತದಾನ ಸಿದ್ಧತೆಗಳನ್ನು ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next