Advertisement
ಚೆಕ್‌ಪೋಸ್ಟ್‌ಗಳ ಸಂಖ್ಯೆ ಹೆಚ್ಚಿಸಿದ್ದು, ಈ ಹಿಂದೆ ಮನುಗನಹಳ್ಳಿ, ವೀರನಹೊಸಹಳ್ಳಿ (ಉಮ್ಮತ್ತೂರು), ಚಿಲ್ಕುಂದ, ಗಾವಡಗೆರೆ (ಚಿಕ್ಕಾಡಗನಹಳ್ಳಿ), ಮುತ್ತುರಾಯನ ಹೊಸಹಳ್ಳಿ, ದೊಡ್ಡೆಕೊಪ್ಪಲು ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿತ್ತು. ಈಗ ಅವುಗಳ ಜತೆಗೆ ಅಸ್ವಾಳು, ಶಾಂತಿಪುರ ಮತ್ತು ಶಿರೇನಹಳ್ಳಿಗಳಲ್ಲೂ ಚೆಕ್‌ಪೋಸ್ಟ್ ತೆರೆಯಲಾಗಿದೆ.
Related Articles
Advertisement
ಮತದಾರರ ಸೇರ್ಪಡೆ: ನೀತಿ ಸಂಹಿತೆ ಜಾರಿಗೆ ಬರುವ ದಿನದವರೆಗೆ ಮತದಾರರ ಪಟ್ಟಿಗೆ ಹೆಚ್ಚುವರಿಯಾಗಿ 434 ಪುರುಷ, 618 ಮಹಿಳೆಯರು, ಇಬ್ಬರು ಇತರೆ ಸೇರಿದಂತೆ 1054 ಜನರನ್ನು ಸೇರ್ಪಡೆಮಾಡಲಾಗಿದ್ದು, ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 227974 ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, ಈ ಹಿಂದೆ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದವರ ಮೇಲೆ ನಿಗಾ ಇಡಲಾಗಿದ್ದು, ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದ 186 ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿ, ಅವರ ಮೇಲೆ ನಿಗಾ ಇರಿಸಲಾಗಿದೆ. 24 ಮತ್ತು 25ರಂದು ಸಿಐಎಸ್‌ಎಫ್ನ ನಾಲ್ಕು ಕಂಪನಿಗಳು ಆಗಮಿಸಲಿದ್ದು, ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜನೆ, ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ಮಾಡಿಸಲಾಗುವುದು ಎಂದರು.
ಚುನಾವಣಾ ವೀಕ್ಷಕ ಅಮರ್ ಖುಷ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳವರೊಂದಿಗೆ ಸಭೆ ನಡೆಸಿದ್ದು, ಸೂಕ್ಷ್ಮ ಪ್ರದೇಶಗಳ ಮತಗಟ್ಟೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಚುನಾವಣಾ ಅಕ್ರಮಗಳ ಬಗ್ಗೆ ನಮಗೆ ಬರುತ್ತಿರುವ ದೂರುಗಳ ಸಂಖ್ಯೆ ಕಡಿಮೆ ಇದೆ. ಸಾರ್ವಜನಿಕರು ಚುನಾವಣಾ ಅಕ್ರಮಗಳು ಕಂಡುಬಂದರೆ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಚುನಾವಣಾ ಆಯೋಗದ ಸಿ ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅಲ್ಲಿಗೆ ಅಪ್‌ಲೋಡ್ ಮಾಡಬಹುದಾಗಿದೆ. ಜೊತೆಗೆ ನಮ್ಮನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.
ರಜೆ ಘೋಷಣೆ: ಮತದಾನ ದಿನವಾದ ಡಿ.5ರಂದು ಹುಣಸೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮತದಾರರಿಗೆ ಮತದಾನ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.
ದೂರು ನೀಡಲು ಸಂಪರ್ಕಿಸಿ: ಸಾಮಾನ್ಯ ವೀಕ್ಷಕ ಅಮರ್ ಖುಷ, ಮೊ. 7259813556 ಹಾಗೂ ವೆಚ್ಚ ವೀಕ್ಷಕ ಉಪಿಂದರ್‌ಬಿರ್ ಸಿಂಗ್,ಮೊ. 7899831135.