Advertisement
ಪಿಯುಸಿ ಫಲಿತಾಂಶ ಈಗಾಗಲೇ ಬಂದಿದ್ದು, ಮುಂದೇನು? ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳಿರುವಾಗಲೇ ಇನ್ನೇನು ಕೆಲವು ದಿನದಲ್ಲಿಯೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಆರಂಭವಾಗುತ್ತಿದ್ದು, ಪಿಯುಸಿ ಫಲಿತಾಂಶದ ಖುಷಿಯಲ್ಲಿರುವಾಗಲೇ ವಿದ್ಯಾರ್ಥಿಗಳು ಮತ್ತೂಂದು ಪರೀಕ್ಷೆಗೆ ತಯಾರಾಗಬೇಕಿದೆ. ವೃತ್ತಿಪರ ಶಿಕ್ಷಣಕ್ಕಾಗಿ ನಡೆಯುವ ಸಿಇಟಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ. ಎರಡೂ ವರ್ಷಗಳ ಅಧ್ಯಯನದಿಂದಗಳಿಸಿದ ಅಂಕಗಳಿಗೆ ಹೆಚ್ಚು ಮೌಲ್ಯ ಬರಬರಬೇಕಾದರೆ, ಸಿಇಟಿಯಲ್ಲಿ ಹೆಚ್ಚಿನ ಅಂಕಗಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಿಕೆಯಲ್ಲಿಯೂ ವಿಶೇಷ ತಯಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಪಿಯುಸಿ ಪರೀಕ್ಷೆಗೆ ಯಾವ ರೀತಿ ಕಷ್ಟ ಪಟ್ಟು ಕಲಿಯುತ್ತೀರೋ ಅಷ್ಟೇ ತಯಾರಿ ಸಿಇಟಿ ಪರೀಕ್ಷೆಗೂ ಬೇಕು. ಸಿಇಟಿ ಪರೀಕ್ಷೆಯಲ್ಲಿ ಅರ್ಥ ಮಾಡಿಕೊಂಡು ಓದಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯ ಪರೀಕ್ಷೆಯಲ್ಲಿ ಕಂಠಪಾಠ ಮಾಡಿಯಾದರೂ ಉತ್ತಮ ಅಂಕಗಳಿಸಬಹುದು. ಆದರೆ, ಸಿಇಟಿಯಲ್ಲಿ ಆಳವಾದ ಅಧ್ಯಯನದ ಅಗತ್ಯವಿದೆ. ಪ್ರಶ್ನೆಗಳು ಕೂಡ ಅಷ್ಟೆ ಕ್ಲಿಷ್ಟವಾಗಿರುತ್ತವೆ ಹಾಗೂ ಯೋಚನೆ ಶಕ್ತಿಗೆ ಸವಾಲು ಒಡ್ಡುವುದರಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆಗೆಗಾಗಿ ಹೆಚ್ಚು ಒತ್ತು ನೀಡಬೇಕಾಗಿದೆ.
Related Articles
Advertisement
ಸಿಇಟಿ ಕೋಚಿಂಗ್ ಇದೆಸಿಇಟಿ ಪರೀಕ್ಷೆಗೆ ವಿವಿಧ ಕಾಲೇಜುಗಳಲ್ಲಿ ಸಹಿತ ಕೆಲವೊಂದು ಖಾಸಗಿ ಸಂಸ್ಥೆಗಳು ಕೋಚಿಂಗ್ ನೀಡುತ್ತವೆ. ಕೋಚಿಂಗ್ ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿದ ಉದಾಹರಣೆಗಳು ಸಾಕಷ್ಟಿದೆ. ಇನ್ನು, ಆನ್‌ಲೈನ್ ಮುಖೇನವೂ ಸಿಇಟಿ ಕೋಚಿಂಗ್ ಪಡೆಯಲು ಸಾಧ್ಯ. ಸಿಇಟಿ ಪರೀಕ್ಷೆಯ ಬಗೆಗಿನ ಮಾಹಿತಿಯನ್ನು ಈಗಾಗಲೇ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದ ಸ್ನೇಹಿತರಲ್ಲಿಯೂ ಪಡೆದು ಕೊಳ್ಳಬಹುದಾಗಿದೆ. ಪರೀಕ್ಷೆ ಟಿಪ್ಸ್
· ಪರೀಕ್ಷೆಯಲ್ಲಿ ಬರೆಯುವಾಗ ಗೊಂದಲ ಬೇಡ
· ನಿರಂತರ ಓದಿನ ನಡು ವೆ ವಿಶ್ರಾಂತಿ ಇರಲಿ.
· ಓದಿದ ವಿಷಯಗಳನ್ನು ಬರೆದಿಟ್ಟುಕೊಳ್ಳಿ, ಫಾರ್ಮುಲಗಳನ್ನು ಬರೆದು ಅಭ್ಯಸಿಸಿ.
· ಎಲ್ಲ ವಿಷಯಗಳಿಗೂ ಸಮಾನ ಆದ್ಯತೆ ಕೊಡಿ
· ಓದಿದ ವಿಷಯಗಳನ್ನು ಪುನರ್‌ಮನನ ಮಾಡಿ
· ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಅವಲೋಕಿಸಿ
· ಪರೀಕ್ಷೆಯ ಜತೆ ಆರೋಗ್ಯ ಮತ್ತು ಆಹಾರದ ಬಗ್ಗೆಯೂ ಗಮನ ನೀಡಿ. ಗೊಂದಲ ಬೇಡ
ಸಿಇಟಿ ಸಹಿತ ಯಾವುದೇ ಪರೀಕ್ಷೆ ಸಮೀಪಿಸುತ್ತಿದೆ ಎಂದಾದಾಗ ಪರೀಕ್ಷೆಯ ಹಿಂದಿನ ದಿನ ನಿದ್ದೆಬಿಟ್ಟು ಓದಲು ಆರಂಭಿಸುತ್ತಾರೆ. ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ. ಇದರಿಂದ ಮೆದುಳು ಚುರುಕುಗೊಳ್ಳುತ್ತದೆ. ಅಲ್ಲದೆ, ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಗೊಂದಲವಿಲ್ಲದೆ ಉತ್ತರ ಬರೆಯಲು ಸಹಕಾರಿಯಾಗುತ್ತದೆ. ಎ. 29, 30 ಸಿಇಟಿ ಪರೀಕ್ಷೆ
ಈ ಬಾರಿಯ ಸಿಇಟಿ ಪರೀಕ್ಷೆಯು ಎ. 29 ಮತ್ತು 30ರಂದು ನಡೆಯಲಿದೆ. ಸಿಇಟಿ ಪರೀಕ್ಷೆಗೆ ಈಗಾಗಲೇ 1.90 ಲಕ್ಷ ಮಂದಿ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. 1 ಗಂಟೆ 20 ನಿಮಿಷಗಳ ಕಾಲ ಇರುತ್ತದೆ. ಗಣಿತ 60 ಪ್ರಶ್ನೆ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ 120 ಪ್ರಶ್ನೆ ಒಳಗೊಂಡಿರುತ್ತದೆ. ಸಿಇಟಿ ತಯಾರಿಗೆ ಪೂರಕ ಕೆರಿಯರ್ ಲಿಫ್ಟ್ ಕೊಲಾಜ್
ಕೆರಿಯರ್ ಲಿಫ್ಟ್ ಕೊಲಾಜ್ ಆ್ಯಪ್ ವಿದ್ಯಾರ್ಥಿಗಳ ಕೆರಿಯರ್‌ಗೆ ಸಹಾಯಕಾರಿ ಆ್ಯಪ್. ನೀಟ್, ಐಐಟಿ-ಜೆಇಇ, ಗೇಟ್ ಮುಂತಾದ ಪರೀಕ್ಷೆಗಳ ತಯಾರಿಗೆ ಸಹಾಯಕವಾಗಿದೆ. ಇದು ಪ್ರಚಲಿತ ವಿಷಯಗಳ ಜತೆಗೆ ಎಲ್ಲ ಮಾಹಿತಿಯನ್ನು ನೀಡುತ್ತದೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಕುರಿತು ಮಾಹಿತಿಯಿಲ್ಲದವರಿಗೆ ಈ ಆ್ಯಪ್ ಆರಂಭದಿಂದ ಕೊನೆಯವರೆಗೂ ಮಾಹಿತಿ ನೀಡುತ್ತದೆ. ಕೆರಿಯರ್‌ಗೆ ಸಂಬಂಧಪಟ್ಟಂತೆ 150ಕ್ಕೂ ಹೆಚ್ಚು ಮಾಹಿತಿಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನೀಡಿದೆ. ಅದರಲ್ಲಿ ಪರೀಕ್ಷೆಯ ಕುರಿತು, ಪರೀಕ್ಷಾ ಕೇಂದ್ರಗಳ ಕುರಿತು ಎಲ್ಲ ಮಾಹಿತಿ ನೀಡಿದೆ. ಪರೀಕ್ಷೆ ತಯಾರಿಗೆ ಸಹಾಯಕವಾಗುವ ಇದು, ಪ್ರಚಲಿತ ವಿಷಯ, ಜಿಕೆ, ಶಬ್ದಕೋಶ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡುತ್ತದೆ. 10 ಎಂ.ಬಿ. ಇರುವ ಈ ಆ್ಯಪ್ ಅನ್ನು 5 ಸಾವಿರಕ್ಕೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ನವೀನ್ ಭಟ್, ಇಳಂತಿಲ