Advertisement

ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ: ಡಿಸಿ

08:50 AM Jul 22, 2017 | |

ಮಡಿಕೇರಿ: ಅತಿವೃಷ್ಟಿ ಎದುರಿ ಸಲು ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ ಅವರು ತಿಳಿಸಿದ್ದಾರೆ.   

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಅಗತ್ಯವಿರುವೆಡೆ ಗಂಜಿ ಕೇಂದ್ರ ತೆರೆಯಲಾಗುವುದು. ಪ್ರವಾಹ ಪೀಡಿತ ಪ್ರದೇಶ ದಲ್ಲಿನ ಜನರನ್ನು ಸ್ಥಳಾಂತರ ಮಾಡಲು ಸಹ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಅವರು ಹೇಳಿದರು. 

ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕುಟ್ಟ- ಪೆರಂಬಾಡಿ ರಸ್ತೆ ಮಾರ್ಗ ಸಂಪರ್ಕ ಕಡಿದು ಕೊಂಡಿದ್ದು, ಈ ಸಂಬಂಧ ಬದಲಿ ವ್ಯವಸ್ಥೆ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. 

ಭಾಗಮಂಡಲದಲ್ಲಿ ಪ್ರವಾಹ ಎದುರಿ ಸಲು 10 ಮಂದಿ ಗೃಹ ರಕ್ಷಕ ದಳದ ಸಿಬಂದಿ ಯನ್ನು ನಿಯೋಜಿಸಲಾಗಿದೆ. ರಿವರ್‌ ರ್ಯಾಫ್ಟ್ ಮತ್ತು ಒಂದು ಬೋಟ್‌ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಬೋಟ್‌ ತರಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.  

ದ. ಕೊಡಗಿನ ಹಲವು ಪ್ರದೇಶ ಜಲಾವೃತ
ದಕ್ಷಿಣ ಕೊಡಗಿನ ಹಲವು ಭಾಗಗಳು ಜಲಾವೃತವಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅರಣ್ಯ, ಲೋಕೋ ಪಯೋಗಿ, ವಿದ್ಯುತ್‌, ಸ್ಥಳೀಯ ಪಂಚಾ ಯತ್‌ಗಳು  ಸದಾ ಪ್ರವಾಹ ಮುನ್ನೆಚ್ಚರಿಕೆ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿ ಕಾರಿ ಸೂಚನೆ ನೀಡಿದರು. 

Advertisement

ಎಲ್ಲ ಹಂತದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಗಳು ಉಂಟಾಗದಂತೆ ಗಮನಹರಿಸುವಂತೆ ಅವರು ಸೂಚನೆ ನೀಡಿದರು.

ಭಾಗಮಂಡಲಕ್ಕೆ ಬೋಪಯ್ಯ ಭೇಟಿ
ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಜಿ.ಪಂ.ಅಧ್ಯಕ್ಷರಾದ ಬಿ.ಎ. ಹರೀಶ್‌ ಅವರು ಗುರುವಾರ ಭಾಗಮಂಡಲಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.

ಮಳೆಯಿಂದ ಹಾನಿಯಾಗುತ್ತಿರುವ ಭಗಂಡೇಶ್ವರ ದೇವಸ್ಥಾನ ಛಾವಣಿ ಪರಿಶೀ ಲನೆ ಮಾಡಿದರು. ಪ್ರಮುಖರಾದ ಕುದು ಕುಳಿ ಭರತ್‌, ಕಡ್ಲೆàರ ಕೀರ್ತನ್‌ ಜಿ.ಪಂ. ಸದಸ್ಯರಾದ ಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next