Advertisement
ಸಮರ್ಥ ಭಾರತ ಟ್ರಸ್ಟ್ ಹಾಗೂ ಆರ್.ವಿ.ಟೀಚರ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ, ರಾಷ್ಟ್ರೀಯ ಯುವ ದಿನ ಹಾಗೂ ವಿವೇಕ್ ಬ್ಯಾಂಡ್-2018ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಸಮರ್ಥ ಭಾರತದ ಸಂಸ್ಥಾಪಕ ಟ್ರಸ್ಟಿ ರಾಜೇಶ್ ಪದ್ಮಾರ್ ಮಾತನಾಡಿ, ಹಿಂದೂ ಹಾಗೂ ಭಾರತೀಯ ಎಂಬ ಪದವನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ಪರಿಚಯಿಸಿದರು. ಈಗ ಹಿಂದೂ ಎಂಬ ಪದ ರಾಜಕೀಯ ಪರಿಭಾಷೆಗೆ ತುತ್ತಾಗಿದೆ.
ಭಾರತದ ಸಹಿಷ್ಣುತೆ, ಅಗಾಧತೆ ಹಾಗೂ ಮಾನವತೆಯ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸಿದ ಮಹನ್ ಸಂತ ಸ್ವಾಮಿ ವಿವೇಕಾನಂದ ಎಂದು ಹೇಳಿದರು. ಆರ್.ವಿ.ಟೀಚರ್ ಕಾಲೇಜಿನ ಪ್ರಾಂಶುಪಾಲ್ ಡಾ.ಕೃಷ್ಣಯ್ಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಎವಿಎಸ್ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಭಾರತವು ವಿಶ್ವದಲ್ಲೇ ಕ್ರಿಯಾತ್ಮಕ ಹಾಗೂ ಪುಟಿದೇಳುವ ಆರ್ಥಿಕ ವ್ಯವಸ್ಥೆ ಹೊಂದಿದೆ. ಬೇರೆ ಬೇರೆ ದೇಶಗಳು ಭಾರತವನ್ನು ಕುತೂಹಲದಿಂದ ನೋಡುತ್ತಿವೆ. ಭಾರತದ ಜಿಡಿಪಿ ಮುಂದಿನ 10-15 ವರ್ಷದಲ್ಲಿ ಶೇ.9ಕ್ಕೆ ಏರಿಕೆಯಾದರೆ ವಿಶ್ವದಲ್ಲೇ ಎರಡು ಅಥವಾ ಮೂರನೇ ಸ್ಥಾನ ಪಡೆಯಲಿದ್ದೇವೆ.-ಡಾ.ಕೆ.ರಾಧಾಕೃಷ್ಣನ್, ಇಸ್ರೋ ಮಾಜಿ ಅಧ್ಯಕ್ಷ