Advertisement
ಲಡಾಖ್, ಎಲ್ ಎಸಿ ಬಳಿ ಚೀನಾ, ಭಾರತ ಸೇನೆ ಜಮಾವಣೆ!ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶ ಎಲ್ ಎಸಿಯ ಎರಡೂ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಬೀಡು ಬಿಟ್ಟಿದ್ದಾರೆ. ಪ್ಯಾಂಗಾಂಗ್ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳ ವಿಚಾರದಲ್ಲಿ ಬಿಕ್ಕಟ್ಟು ತಲೆದೋರಿದೆ. ಅಲ್ಲದೇ ಚೀನಾ 5 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿದೆ ಎಂದು ವರದಿ ತಿಳಿಸಿದೆ.1962ರ ಬಳಿಕ ಚೀನಾ ಮತ್ತು ಭಾರತದ ನಡುವಿನ ನೂತನ ಗಡಿ ಸಂಘರ್ಷ ಇದಾಗಿದ್ದು, ಇದೊಂದು ಅತೀ ದೊಡ್ಡ ಸಂಘರ್ಷವಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸುತ್ತಿವೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರು ಚೀನಾ ಸೇನೆಗೆ ಯುದ್ಧಸನ್ನದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ. ನಾವು ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಎಲ್ಲಾ ರೀತಿಯಿಂದಲೂ ದೇಶವನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.ಭಾರತದ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕರೆ ನೀಡಿದ್ದಲ್ಲದೇ ಅಮೆರಿಕದ ಜತೆಗೂ ಈ ಸಂಘರ್ಷ ಮುಂದುವರಿದಿದೆ ಎಂದು ವರದಿ ತಿಳಿಸಿದೆ. ಪಟ್ಟು ಬಿಡದ ಭಾರತ:
ಭಾರತದ ಪ್ರದೇಶದಲ್ಲಿ ನಾವು ಯಾವುದೇ ಬದಲಾವಣೆಗೆ ಅವಕಾಶ ಕೊಡುವುದಿಲ್ಲ. ಈ ವಿಚಾರದಲ್ಲಿ ಚೀನಾದ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಕೂಡಾ ನಮ್ಮ ಸಾಮರ್ಥ್ಯದ ಮೂಲಕ ವಿರೋಧಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಸೇನೆಯ ಮೂರು ಮುಖ್ಯಸ್ಥರ ಜತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
Related Articles
Advertisement