ಕಲಬುರಗಿ: ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಪಕ್ಷದ ಬಲವರ್ದನೆಗೆ ಒತ್ತು ಕೊಡುವುದರ ಮುಖಾಂತರ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಹೊರವಲಯದ ಸ್ವಾಮಿ ನಾರಾಯಣ ಗುರುಕುಲ್ ಶಾಲೆಯಲ್ಲಿ ನಡೆದ ಬಿಜೆಪಿ ಮಹಾನಗರ ಪ್ರಶಿಕ್ಷಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆ ಅವಧಿಗೂ ಮುನ್ನಾ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದಿರಿ. ಕಳೆದ ಚುನಾವಣೆಯಲ್ಲಿ ಬಹುಮತ ಸಮೀಪ ಬಂದಿದ್ದವು. ಆದರೆ, ಈ ಸಲ ಬಂಪರ್ ಬಹುಮತ ಬರುವಲ್ಲಿ ಕಾರ್ಯಕರ್ತರ ಪಾತ್ರವೇ ಬಹುಮುಖ್ಯವಾಗಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಮಾತನಾಡಿ, ಅಭ್ಯಾಸ ವರ್ಗವೂ ಕೆಲವರಿಗೆ ಹೊಸದಿದೆ. ಇನ್ನೂ ಕೆಲವರಿಗೆ ಹಳೆದ್ದು, ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯಕಾರಿಣಿ ನಡೆಸಲಾಗುತ್ತದೆ ಎಂದರು.
ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸಂಘಟನೆಯಿಂದ ಸ್ವಲ್ಪ ಸಾಧನೆ ಮಾಡಿದಂತಾಗಿದೆ. ಬರುವ ಚುನಾವಣೆಯಲ್ಲಿ ಇನ್ನಷ್ಟು ಬಲಗೊಂಡಲ್ಲಿ ಜಯ ಗಳಿಸಬಹುದಾಗಿದೆ ಎಂದರು. ಬಿಜೆಪಿ ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಡೋಣಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಬೆಳಮಗಿ ಹಾಗೂ ಉಮೇಶ್ ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಪಾಲಿಕೆ ಸದಸ್ಯ ಶಂಭುಲಿಂಗ ಬಳಬಟ್ಟಿ, ರಾಮಚಂದ್ರ ಗುಮ್ಮಟ್ ಇದ್ದರು.