ಬೀದರ: ಜಿಲ್ಲೆಯ ಐದು ತಾಲೂಕುಗಳಿಗೆ ಡಿ.22ರಂದುಮತ್ತು ಮೂರು ತಾಲೂಕುಗಳಿಗೆ ಡಿ.27ರಂದು ಮತದಾನಮುಕ್ತಾಯವಾಗಿದೆ. ಡಿ.30ರಂದು ಮತ ಎಣಿಕೆ ನಡೆಯಲಿದ್ದು,ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಸಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.
ಬೀದರ ತಾಲೂಕಿನ ಮತ ಎಣಿಕೆಯು ಬೀದರನ ಬಿ.ವ್ಹಿ.ಬಿಕಾಲೇಜಿನಲ್ಲಿ, ಔರಾದ್ ಮತ್ತು ಕಮಲನಗರ ತಾಲೂಕುಗಳ ಮತೆ ಎಣಿಕೆ ಔರಾದನಅಮರೇಶ್ವರ ಪದವಿ ಕಾಲೇಜಿನಲ್ಲಿ, ಭಾಲ್ಕಿತಾಲೂಕಿನ ಮತ ಎಣಿಕೆಯು ಸರ್ಕಾರಿಪ್ರೌಢಶಾಲೆಯಲ್ಲಿ, ಬಸವಕಲ್ಯಾಣ ಮತ್ತು ಹುಲಸೂರ ತಾಲೂಕುಗಳ ಮತ ಎಣಿಕೆಯು ಬಸವ ಕಲ್ಯಾಣದ ಬಸವೇಶ್ವರ ಪ್ರೌಢಶಾಲೆಯಲ್ಲಿ, ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕುಗಳ ಮತ ಎಣಿಕೆಯು ಹುಮನಾಬಾದನ ರಾಮ ಮತ್ತು ರಾಜ್ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 8ರಿಂದ ಎಣಿಕೆ ಆರಂಭ: ಜಿಲ್ಲೆಯ ವಿವಿಧೆಡೆ ಇರುವ ಆಯಾ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆಯು ಏಕ ಕಾಲಕ್ಕೆ ಬೆಳಗ್ಗೆ ಸರಿಯಾಗಿ 8ರಿಂದ ಆರಂಭವಾಗಿ ಮತಗಳ ಎಣಿಕೆಮುಕ್ತಾಯವಾಗುವವರೆಗೆ ನಡೆಯಲಿದೆ. ಬೀದರ, ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕುಗಳ ಕೇಂದ್ರದಲ್ಲಿ ಮತ ಎಣಿಕೆಗಾಗಿ ತಲಾ 15ರಂತೆ ಟೇಬಲ್ ಅಳವಡಿಸಲಾಗಿದೆ. ಚಿಟಗುಪ್ಪಾಮತ್ತು ಕಮಲನಗರ ತಾಲೂಕುಗಳಲ್ಲಿ ತಲಾ 6ರಂತೆ ಟೇಬಲ್‌ಅಳವಡಿಸಲಾಗಿದೆ. ಹುಮನಾಬಾದ, ಔರಾದ ಮತ್ತು ಹುಲಸೂರತಾಲೂಕುಗಳ ಮತ ಎಣಿಕೆಗೆ ಅನುಕ್ರಮವಾಗಿ 9, 7 ಮತ್ತು 2ಟೇಬಲ್ ಅಳವಡಿಸಲಾಗಿದೆ. ಮತ ಎಣಿಕೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆಗಾಗಿ ತಲಾಒಂದು ಟೇಬಲ್‌ಗೆ ಒಬ್ಬ ಮೇಲ್ವಿಚಾರಕರು ಮತ್ತು ಸಿಬ್ಬಂದಿಯನ್ನುನಿಯೋಜಿಸಿದ್ದು, ಎಂಟೂ ತಾಲೂಕುಗಳಿಗೆ ಸಂಬಂ ಧಿಸಿದ ಮತ ಎಣಿಕೆಗಾಗಿ 75 ಮೇಲ್ವಿಚಾರಕರು ಮತ್ತು 75 ಸಹಾಯಕ ಸಿಬ್ಬಂದಿ ಸೇರಿ ಒಟ್ಟು 150 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 178 ಗ್ರಾಪಂಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 8675 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬೀದರನಲ್ಲಿ 579, ಔರಾದ 330, ಕಮಲನಗರ263, ಬಸವಕಲ್ಯಾಣ 544, ಹುಲಸೂರ 72, ಹುಮನಾಬಾದ 325 ಹಾಗೂ ಚಿಟಗುಪ್ಪಾ 244 ಮತ್ತು ಭಾಲ್ಕಿ 555 ಸೇರಿ ಒಟ್ಟು 2912ಅಭ್ಯರ್ಥಿಗಳ ಆಯ್ಕೆಗಾಗಿ ಡಿ.30ರಂದು ಮತ ಎಣಿಕೆ ನಡೆಯಲಿದೆ. ಅವಿರೋಧ ಆಯ್ಕೆ: ಈಗಾಗಲೇ ಬೀದರನಲ್ಲಿ 36, ಔರಾದನಲ್ಲಿ 55, ಕಮಲನಗರದಲ್ಲಿ 18, ಬಸವಕಲ್ಯಾಣದಲ್ಲಿ 33, ಹುಲಸೂರದಲ್ಲಿ 05,ಹುಮನಾಬಾದ್‌ನಲ್ಲಿ 18, ಚಿಟಗುಪ್ಪಾದಲ್ಲಿ 05 ಮತ್ತು ಭಾಲ್ಕಿನಲ್ಲಿ 56ಸೇರಿ ಒಟ್ಟು 226 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.