Advertisement
ಚಿತ್ರದುರ್ಗ: ಜಿಲ್ಲೆಯಲ್ಲಿ ಜ. 16 ರಂದು ಮೊದಲ ಹಂತದ ಕೋವಿಡ್ ಲಸಿಕೆ ವಿತರಣೆಯಾಗಲಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಫ್ರಂಟ್ ಲೈನ್ ವರ್ಕರ್ಗೆ ಲಸಿಕೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Related Articles
Advertisement
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ ಮಾತನಾಡಿ, ಲಸಿಕೆ ನೀಡಲು 197 ಸ್ಟೇಷನ್ ಗಳನ್ನು ಮಾಡಲಾಗಿದ್ದು, ಇದಕ್ಕಾಗಿ 187 ಲಸಿಕಾಕಾರಿಗಳು ಇದ್ದಾರೆ. ಜಿಲ್ಲೆಯ 106 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಲಸಿಕೆ ಪಡೆದವರಿಗೆ ವೇಟಿಂಗ್ ಹಾಲ್, ಲಸಿಕಾ ಕೊಠಡಿ, ನಿಗಾವಣೆ ಕೊಠಡಿ ಸೇರಿದಂತೆ ಲಸಿಕೆಗಾಗಿ ಮೂರು ಕೊಠಡಿಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಕಿರಿಯ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು. ಕೋವಿಡ್ ಲಸಿಕೆ ದಾಸ್ತಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರಾದೇಶಿಕ ಕೇಂದ್ರ ಪ್ರಾರಂಭಿಸಲಾಗಿದೆ. ಇಲ್ಲಿನ ದಾಸ್ತಾನು ಕೇಂದ್ರದಲ್ಲಿ ಸುಮಾರು 30 ಲಕ್ಷ ಡೋಸ್ ಸಂಗ್ರಹಿಸಿಡಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆರ್‌ಸಿಎಚ್ ಅ ಧಿಕಾರಿ ಡಾ| ಕುಮಾರಸ್ವಾಮಿ, ಜಿಪಂ ಸಿಇಒ ಡಾ| ಕೆ.ನಂದಿನಿದೇವಿ, ರಾಜ್ಯ ಸರ್ವೇಕ್ಷಣಾ ಧಿಕಾರಿ ಡಾ| ಶ್ರೀಧರ್, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ತುಳಸಿರಂಗನಾಥ್, ಡಿಡಿಪಿಐ ರವಿಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ| ಪಾಲಾಕ್ಷಯ್ಯ ಮತ್ತಿತರರ ಭಾಗವಹಿಸಿದ್ದರು.