Advertisement
ಬೆಂಗಳೂರಿನ ವಿಧಾನಸೌಧದಲ್ಲಿರುವ ತಮ್ಮಕಚೇರಿಯಲ್ಲಿ ಶುಕ್ರವಾರ ಗ್ರಂಥಾಲಯ, ಇನ್ನಿತರ ಮೂಲಸೌಕರ್ಯ ಸಂಬಂಧ ಅಧಿಕಾರಿಗಳ ಸಭೆನಡೆಸಿದ ಸಚಿವರು, 10 ಕೋಟಿ ರೂ.ವೆಚ್ಚದಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಪ್ರಕ್ರಿಯೆಯನ್ನು ತುರ್ತಾಗಿ ಕೈಗೊಳ್ಳುವಂತೆನಿರ್ದೇಶನ ನೀಡಿದರು. ನಗರದಲ್ಲಿ ಐಎಎಸ್, ಕೆಎಎಸ್ ಪರೀಕ್ಷೆಗೆ ಅಣಿಗೊಳ್ಳುವ ಅಭ್ಯರ್ಥಿಗಳುಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಒದಗಿಸಬೇಕಿದೆ. ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಅಧ್ಯಯನ ಕೇಂದ್ರಕ್ಕೆ ಪೂರಕವಾಗಿರುವ ವ್ಯವಸ್ಥೆಗಳು ಗ್ರಂಥಾಲಯ ಕಟ್ಟಡದಲ್ಲಿ ಇರಬೇಕು ಎಂದರು.
Related Articles
Advertisement
ಸಭೆಯಲ್ಲಿ ಶಾಸಕ ಸಿ.ಎಸ್. ನಿರಂಜನ್‌ಕುಮಾರ್, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್. ಹೊಸಮನಿ, ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್, ವರದರಾಜು, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಸುರೇಂದ್ರ, ಜಿಲ್ಲಾ ಮುಖ್ಯಗ್ರಂಥಾಲ ಯ ಅಧಿಕಾರಿ ಆರ್. ಶಿವಸ್ವಾಮಿ,ಗುಂಡ್ಲುಪೇಟೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಇತರರಿದ್ದರು.
28ರೊಳಗೆ ವಸತಿ ಪಟ್ಟಿ ಸಲ್ಲಿಸಿ: ಸಚಿವ : ವಸತಿ ಯೋಜನೆಯಡಿ ನೀಡಲಾದ ಗುರಿಗೆ ಅನುಗುಣವಾಗಿ ತುರ್ತಾಗಿ ಫಲಾನುಭವಿಗಳನ್ನುಆಯ್ಕೆ ಮಾಡಿ ಆಧಾರ್ ಪ್ರತಿಯೊಂದಿಗೆ ಫಲಾನುಭವಿಗಳ ಪಟ್ಟಿಯನ್ನು ಫೆ.28ರೊಳಗೆಇಲಾಖೆಗೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸಚಿವರು ಸೂಚಿಸಿದರು.