Advertisement

ಅಭಿವೃದ್ಧಿ ಯೋಜನೆ ಸಿದ್ಧಪಡಿಸಿ

10:10 AM Jul 07, 2019 | Suhan S |

ಗದಗ: ಅಧಿಕಾರ ವಿಕೇಂದ್ರೀಕರಣದಿಂದ ಗ್ರಾ.ಪಂ ವ್ಯವಸ್ಥೆ ಸಬಲಗೊಂಡಿದೆ. ಕೆಳಹಂತದಿಂದಲೇ ಯೋಜನೆಗಳು ರೂಪಿತವಾಗಬೇಕು. ಅದಕ್ಕನುಗುಣವಾಗಿ ಗ್ರಾ.ಪಂ ಅಭಿವೃದ್ಧಿ ಯೋಜನೆ ತಯಾರಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಎಸ್‌.ಪಿ. ಬಳಿಗಾರ ಹೇಳಿದರು.

Advertisement

ಇಲ್ಲಿನ ಜಿ.ಪಂ. ಸಭಾಂಣಗಣದಲ್ಲಿ ಶನಿವಾರ ನಡೆದ ಗದಗ ತಾಲೂಕಾ ಅಭಿವೃದ್ಧಿ ಯೋಜನಾ ತಯಾರಿಕಾ ಪ್ರಕ್ರಿಯೆ ಹಾಗೂ ಸಮಿತಿಯ ಜವಾಬ್ದಾರಿಯ ಕುರಿತು ಸುಸ್ಥಿತ ಅಭಿವೃದ್ಧಿ ಗುರಿಗಳ ಪರಿಕಲ್ಪನೆಯ ಪರಿಚಯದ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಗದಗ ತಾಲೂಕು ಅಭಿವೃದ್ಧಿ ಯೋಜನೆಯ ಸಿದ್ಧತೆಗೆ ಸಮಿತಿ ಸದಸ್ಯರಿಗೆ ಜನರ ಬದುಕಿನ ಬಗ್ಗೆ ಸಂಪೂರ್ಣ ಅರಿವು ಹಾಗೂ ದೂರದೃಷ್ಟಿ ಇರಬೇಕು. ಅದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಗ್ರಾಮಸಭೆಗಳಲ್ಲಿ ರೂಪಿತ ಯೋಜನೆಗಳು ತಾಲೂಕು ನಂತರ ಜಿಲ್ಲಾಮಟ್ಟದ ಯೋಜನೆ ತಯಾರಿಸಿ ನಂತರ ಸರ್ಕಾರದ ಬಜೆಟ್ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಜವಾಬ್ದಾರಿ ಮತ್ತು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿ.ಪಂ. ಉಪಕಾರ್ಯದರ್ಶಿ ಡಿ.ಪ್ರಾಣೇಶ ರಾವ್‌ ಮಾತನಾಡಿ, ಗ್ರಾಮೀಣಾಭಿವೃದ್ಧಿ ವಿಕೆಂದ್ರೀಕರಣಕ್ಕೆ ಒತ್ತು ಕೊಡುವ ಹಾಗೂ ರಾಷ್ಟ್ರಕ್ಕೆ ಸಹಾಯಕವಾಗುವಂತಹ ಅಭಿವೃದ್ಧಿ ಯೋಜನೆಗಳನ್ನು ಗ್ರಾಪಂ., ತಾಪಂ ಹಾಗೂ ಜಿ.ಪಂಗಳಲ್ಲಿ ಸಾಕಾರಗೊಳಿಸಲು ಗದಗ ಮತ್ತು ಮೈಸೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿತ್ತು. ಇದು ರಾಷ್ಟ್ರದಲ್ಲಿಯೇ ಮಾದರಿ ಯೋಜನೆಯಾಗಿದೆ. ಗ್ರಾಮ ಸಭೆಯಲ್ಲಿ ನಡೆದಿದ್ದನ್ನು ಚಿತ್ರೀಕರಣ ಮಾಡಿ, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದರು.

ಗ್ರಾಮ ಪಂಚಾಯತ್‌ ಮತ್ತು ನಗರಪ್ರದೇಶಗಳಲ್ಲಿನ ಯೋಜನೆಗಳನ್ನು ಒಗ್ಗೂಡಿ ಸಮನ್ವಯಗೊಳಿಸುವುದು ಇದರ ಉದ್ದೇಶವಾಗಿದೆ. ಅಭಿವೃದ್ಧಿ ಯೋಜನೆ ತಯಾರಿಕೆಗೆ ವಾರ್ಡವಾರು ಸಭೆ ಜರುಗಿಸಿ, ಗ್ರಾಮಸಭೆ ಮಾಡಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಬೇಕು. ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರ, ಸಂಪನ್ಮೂಲಗಳ ಬಳಕೆ ಕುರಿತು ಪಟ್ಟಿ ಮಾಡುವುದು ಇದರಲ್ಲಿ ಸೇರಿದೆ ಎಂದರು.

Advertisement

ಜಿ.ಪಂ. ಸದಸ್ಯ ವಾಸಣ್ಣ ಕುರಡಗಿ, ಗದಗ ತಾ.ಪಂ.ಅಧ್ಯಕ್ಷ ಮೋಹನ ದುರಗಣ್ಣವರ, ತಾ.ಪಂ. ಸದಸ್ಯ ವಿದ್ಯಾಧರ ದೊಡ್ಡಮನಿ, ಮಾಜಿ ಶಾಸಕ ಡಿ.ಆರ್‌.ಪಾಟೀಲ, ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ|ಎಚ್.ಎಸ್‌.ಜನಗಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next