Advertisement

ನೈರುತ್ಯ ರೈಲ್ವೆಯಿಂದ 2252 ಪಿಪಿಇ ಕಿಟ್‌ ತಯಾರು

08:51 AM Jun 09, 2020 | Team Udayavani |

ಹುಬ್ಬಳ್ಳಿ: ಕೋವಿಡ್‌-19 ಸೋಂಕಿತ ರೋಗಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿಗೆ ನೈಋತ್ಯ ರೈಲ್ವೆ ವಲಯ ಇದುವರೆಗೆ 2252 ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಗಳನ್ನು ತಯಾರಿಸಿದೆ.

Advertisement

ಭಾರತೀಯ ರೈಲ್ವೆ ಉತ್ಪಾದನಾ ಘಟಕಗಳು, ಕಾರ್ಯಾಗಾರಗಳು, ಕ್ಷೇತ್ರ ಘಟಕಗಳು ಕೋವಿಡ್‌-19 ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯಕೀಯ ಮತ್ತು ಆರೋಗ್ಯ ಸಿಬ್ಬಂದಿಗೆ ಪಿಪಿಇ ಕವರಲ್‌ಗ‌ಳನ್ನು ತಯಾರಿಸುತ್ತಿದೆ. ಏಪ್ರಿಲ್‌ 21ರಿಂದ ಅತ್ಯುತ್ತಮ ಗುಣಮಟ್ಟದ ಪಿಪಿಇಗಳನ್ನು ತಯಾರಿಸಲು ಮುಂದಾಗಿರುವ ನೈಋತ್ಯ ರೈಲ್ವೆಯು ಇದುವರೆಗೆ 2,252 ತಯಾರಿಸಿದೆ. ಅದರಲ್ಲಿ ಹುಬ್ಬಳ್ಳಿ ಕಾರ್ಯಾಗಾರ ಒಟ್ಟಾರೆ 1,612 ತಯಾರಿಸಿದ್ದು, ಏಪ್ರಿಲ್‌ನಲ್ಲಿ 650, ಮೇನಲ್ಲಿ 662 ಹಾಗೂ ಈ ತಿಂಗಳಲ್ಲಿ 300 ಸಿದ್ಧಪಡಿಸಿದೆ. ಮೈಸೂರು ಕಾರ್ಯಾಗಾರವು ಒಟ್ಟಾರೆ 640 ತಯಾರಿಸಿದ್ದು, ಏಪ್ರಿಲ್‌ನಲ್ಲಿ 340, ಮೇನಲ್ಲಿ 300 ಸಿದ್ಧಪಡಿಸಿದೆ.

ಹುಬ್ಬಳ್ಳಿ ಮತ್ತು ಮೈಸೂರಿನ ಕಾರ್ಯಾಗಾರಗಳಲ್ಲಿ ಮಾನದಂಡಗಳ ಪ್ರಕಾರ ಕಟ್ಟುನಿಟ್ಟಾಗಿ ಗುಣಮಟ್ಟದ ಪಿಪಿಇ ಸೂಟ್ಸ್‌ ಗಳನ್ನು ತಯಾರಿಸಲಾಗುತ್ತಿದೆ. ಪಿಪಿಇಗಳ ಉತ್ಪಾದನೆ ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸಿದ್ದು, ಮುಂದಿನ ಎರಡು ತಿಂಗಳಲ್ಲಿ ಪ್ರತಿ ಕಾರ್ಯಾಗಾರಗಳಲ್ಲಿ 8400 ಕವರ್‌ ಗಳನ್ನು ತಯಾರಿಸುವ ಗುರಿ ಹೊಂದಿದೆ. ಈ ಕವರಲ್‌ಗ‌ಳು 50 ಹಾಸಿಗೆಗಳು ಮತ್ತು 6 ಐಸಿಯು ಹಾಸಿಗೆಗಳನ್ನು ಹೊಂದಿರುವ ಬೆಂಗಳೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ ಕೋವಿಡ್‌-19 ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಸಜ್ಜುಗೊಳಿಸಲು ಅನುವು ಆಗಲಿವೆ. ಈಗ ಈ ಆಸ್ಪತ್ರೆಯನ್ನು ವಿಶೇಷ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ.

ಮೈಸೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ 74 ಹಾಸಿಗೆಗಳೊಂದಿಗೆ ಕೋವಿಡ್‌-19 ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಕವರಲ್‌ಗ‌ಳನ್ನು ನೀಡಲಾಗುವುದು. ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿನ 30 ಹಾಸಿಗೆಗಳನ್ನು ಪ್ರತ್ಯೇಕ ಬ್ಲಾಕ್‌ಗಳಾಗಿ ಪರಿವರ್ತಿಸಿ ಕೋವಿಡ್‌ -19 ಸಂತ್ರಸ್ತರಿಗೆ ಮೀಸಲಿಡಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next