Advertisement
ಆ.7 ರಂದು ಗಜಪಯಣ ನಡೆಯಲಿದ್ದು, ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಮೈಸೂರಿಗ ಆಗಮಿಸಲಿವೆ. ಅಂಬಾರಿ ಆನೆ ಅಭಿಮನ್ಯು ಜತೆ ಅರ್ಜುನ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ ಹಾಗೂ ಹೆಣ್ಣಾನೆಗಳಾದ ಕಾವೇರಿ,ಚೈತ್ರಾ, ಲಕ್ಷ್ಮೀ, ವಿಜಯ ಮೈಸೂರಿನ ಕಡೆ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.
Related Articles
Advertisement
ಈ ಬಾರಿ 14 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳು ತ್ತಿದ್ದು, 28 ಮಂದಿ ಮಾವುತರು ಮತ್ತುಕವಾಡಿಗರು ಮತ್ತು ಅವರ ಕುಟುಂಬ ಹಾಗೂ6 ಮಂದಿ ಹೆಚ್ಚುವರಿ ಮಾವುತರು, ಅಡುಗೆತಯಾರಕರು ಸೇರಿ 150ಕ್ಕೂ ಹೆಚ್ಚು ಮಂದಿ ಆನೆಗಳೊಂದಿಗೆ ಆಗಮಿಸಲಿದ್ದಾರೆ.
ಈಗಾಗಲೇ ಅರಮನೆ ಮಂಡಳಿ ವತಿಯಿಂದ ಆನೆಗಳು ಮತ್ತು ಮಾವುತರು ಉಳಿದುಕೊಳ್ಳುವ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಶೆಡ್‌ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಆನೆಗಳಿಗೆವಿಶೇಷ ಆಹಾರ ತಯಾರು ಮಾಡುವ ಸ್ಥಳ ಮತ್ತು ಆಹಾರ ದಾಸ್ತನು ಕೊಠಡಿಗೆ ಸುಣ್ಣ ಬಳಿಯಲಾಗಿದೆ.
ಮೊದಲ ತಂಡದ ಆನೆಗಳಿವು :
ಮತ್ತಿಗೋಡು ಶಿಬಿರದಲ್ಲಿರುವ 57 ವರ್ಷದ ಅಂಬಾರಿ ಆನೆ ಅಭಿಮನ್ಯು, 39 ವರ್ಷದ ಗೋಪಾಲಸ್ವಾಮಿ, ಬಳ್ಳೆ ಆನೆ ಶಿಬಿರದ 62 ವರ್ಷದ ಅರ್ಜುನ, ದುಬಾರೆ ಆನೆ ಶಿಬಿರದಲ್ಲಿರುವ 59 ವರ್ಷದ ವಿಕ್ರಮ, 44ವರ್ಷದ ಧನಂಜಯ, 45 ವರ್ಷದ ಕಾವೇರಿ, ರಾಮಪುರ ಶಿಬಿರದಲ್ಲಿರುವ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ ಭಾಗವಹಿಸುವ ಸಾಧ್ಯತೆಗಳಿವೆ.
ಗಜಪಯಣಕ್ಕೆ ಮತ್ತು ಅರಮನೆಅಂಗಳದಲ್ಲಿ ಗಜಪಡೆಯ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿದಸರಾ ಮಹೋತ್ಸವದಲ್ಲಿ 14 ಆನೆಗಳುಭಾಗಿಯಾಗಲಿವೆ. ಈ ಪೈಕಿ ಮೊದಲತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ9 ಆನೆಗಳು ಆಗಮಿಸಲಿವೆ. ಸೆಪ್ಟೆಂಬರ್‌ಮೊದಲ ವಾರದಲ್ಲಿ ಎರಡನೇ ತಂಡದಲ್ಲಿ 5 ಆನೆಗಳನ್ನು ಕರೆ ತರಲಾಗುತ್ತದೆ. –ಡಾ.ವಿ.ಕರಿಕಾಳನ್, ಡಿಸಿಎಫ್
–ಸತೀಶ್ ದೇಪುರ