Advertisement
ಫೆ. 5, 6 ಮತ್ತು 7ರಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜಿಲ್ಲಾಡಳಿ ತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇಳನಲ್ಲಿ ಪ್ರಧಾನ ವೇದಿಕೆ ಸೇರಿ ಎರಡು ಸಮಾನಾಂತರ ವೇದಿಕೆಯಲ್ಲಿ ಮೂರು ದಿನಗಳಲ್ಲಿ 22 ಗೋಷ್ಠಿಗಳು ನಡೆಯಲಿವೆ.
Related Articles
Advertisement
ಪ್ರತಿದಿನ ಒಂದೂವರೆ ಲಕ್ಷ ಜನರು ಬರುವ ನಿರೀಕ್ಷೆ: ಸಮ್ಮೇಳನಕ್ಕೆ ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆ ಇದ್ದು, ಒಟ್ಟು 5 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಕೆಲವು ಖಾದ್ಯಗಳು ಇರಲಿವೆ. ಗೋಷ್ಠಿಯಲ್ಲಿ ಮಂಡನೆಯಾಗಲಿರುವ ಉಪನ್ಯಾಸವನ್ನು ಬರಹದ ಮೂಲಕ ನೀಡಬೇಕು ಎಂದು ವಿದ್ವಾಂಸರಿಗೆ ತಿಳಿಸಲಾಗಿದೆ. ಸಮ್ಮೇಳನ ಮುಗಿದ ನಂತರ ಸ್ಮರಣ ಸಂಪುಟಗಳನ್ನು ಹೊರತರಲಾಗುವುದು ಎಂದು ಬಳಿಗಾರ್ ತಿಳಿಸಿದರು.
ಫೆಬ್ರವರಿ 5ರಂದು ಚಾಲನೆ-ಫೆ.5ರಂದು ಬೆಳಗ್ಗೆ 8 ಗಂಟೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದರು. -ಫೆ.6ರಂದು ಬೆಳಗ್ಗೆ 11.30ಕ್ಕೆ ಪ್ರಧಾನ ವೇದಿಕೆಯಲ್ಲಿ ಸಂಶೋಧಕ ಡಾ.ಷ.ಶೆಟ್ಟರ್ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಸುಮಾರು 45 ನಿಮಿಷಗಳ ಉಪನ್ಯಾಸದಲ್ಲಿ ಅವರು ಕನ್ನಡ ಉಳಿಸಿ ಬೆಳೆಸುವ ಕುರಿತು ಮಾತನಾಡಲಿದ್ದಾರೆ. -ಫೆ.7ರಂದು ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಗೌರವ ಅತಿಥಿಯಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಹೋಟೆಲ್, ಕಲ್ಯಾಣ ಮಂಟಪ, ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. “ಎ’ ಶ್ರೇಣಿಯ 174 ಕೊಠಡಿ, “ಬಿ’ ಶ್ರೇಣಿಯ 184 ಕೊಠಡಿ ಸೇರಿದಂತೆ ಅಂದಾಜು 2,300 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
-ಡಾ. ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ