ಹುಬ್ಬಳ್ಳಿ: ಅಮ್ಮನ ಮಡಿಲಲ್ಲಿ ನಗುತಿರುವ ಮಗು, ಗಾಜಿನ ಮೇಲೆ ಮೂಡಿರುವ ಚೆಂದದ ಗಣೇಶ, ಧ್ಯಾನಸ್ಥ ಬುದ್ಧ, ಕಲ್ಲುಗಳ ಮೇಲೆ ಅರಳಿರುವ ಕಲಾಕೃತಿ, ಗ್ರೀಟಿಂಗ್ ಕಾರ್ಡುಗಳ ಮೇಲೆ ಅಚ್ಚೊತ್ತಿದ ಚೆಂದದ ಗೊಂಬೆಗಳು. ಇಲ್ಲಿನ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್ ಲೀಡರ್ ಎಕ್ಸಲ್‌ರೇಟಿಂಗ್ ಡೆವಲೆಪ್ ಮೆಂಟ್ ಪ್ರೋಗ್ರಾಂ ಆಯೋಜಿಸಿದ್ದ 7 ದಿನಗಳ ವಿಶೇಷ ನಾಯಕತ್ವ ಶಿಬಿರದಲ್ಲಿ ಚೆಂದದ ಕಲಾಕೃತಿಗಳು ಕಂಡು ಬಂದವು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಯಕತ್ವ, ಜೀವನ ಕೌಶಲ, ಸಮಯದ ನಿರ್ವಹಣೆ ಹಾಗೂ ಮಾರುಕಟ್ಟೆಯ ನಿರ್ವಹಣೆ ಕುರಿತು ತರಬೇತಿ ಪಡೆದ ವಿದ್ಯಾರ್ಥಿಗಳು ಕಡಿಮೆ ವೆಚ್ಚದ ಫೇಸ್ ಶೀಲ್ಡ್‌ಗಳ ತಯಾರಿಕೆಯ, ವಿವಿಧ ಸೃಜನಾತ್ಮಕ ಕಲಾಕೃತಿಗಳನ್ನು ತಯಾರಿಸಿದರು.
ತರಬೇತುದಾರ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ ಕವ್ವಾಳೆ ಹಾಗೂ ಕೃಷ್ಣಾಜಿ ಮೋರೆ ಮಾತನಾಡಿ, ಇಂದಿನ ಯುವ ಸಮೂಹ ತಂತ್ರಜ್ಞಾನ ಹಾಗೂ ಇತರೆ ಕ್ಷೇತ್ರಗಳಲ್ಲಿ ಮುನ್ನುಗ್ಗುವ ಎಲ್ಲ ಕೌಶಲಗಳು ವಿದ್ಯಾರ್ಥಿಗಳಲ್ಲಡಗಿವೆ ಹಾಗೂ ಅವುಗಳ ಪರಿಪೂರ್ಣ ಅನುಷ್ಠಾನಕ್ಕಾಗಿ ನಾಯಕತ್ವ ಕಲೆ, ಸಮಸ್ಯೆಯ ನಿರ್ವಹಣೆಯಂತಹ ಕೌಶಲ ಅತ್ಯಗತ್ಯ ಎಂದರು.
ಇದನ್ನೂ ಓದಿ:ಸಭಾಪತಿ ರಾಜೀನಾಮೆ ತೀರ್ಮಾನ ಸಾಧ್ಯತೆ ?
ದೇಶಪಾಂಡೆ ಸ್ಕಿಲ್ಲಿಂಗ್ ನಿರ್ದೇಶಕ ಗುರನಗೌಡ ಕುರಗುಂದ ಮಾತನಾಡಿದರು. ವಿದ್ಯಾರ್ಥಿಗಳಾದ ಆಸ್ಮಾ ಬಾಗೇವಾಡಿ, ಜ್ಞಾನವಿ ಅನಿಸಿಕೆ ಹಂಚಿಕೊಂಡರು. ಗುರುಸಿದ್ದಯ್ಯ ಕೊಣ್ಣುರಮಠ, ಪ್ರಮೋದ ಹುಕ್ಕೇರಿ, ಸಂತೋಷ ಬಿರಾದಾರ, ಸುನೀಲ ಬರಗುಂಡಿ, ರಾಕೇಶ ತೋಟಕರ, ಕಿರಣ ಮಗದುಮ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.