Advertisement
ಪುತ್ತೂರಿನ ವಿಮೆ ಏಜೆನ್ಸಿ ಸಂಸ್ಥೆಯ ಏಜೆಂಟ್ ಜಯಾನಂದ ಅವರು ನೀಡಿದ ದೂರಿನಂತೆ ಆಟೋ ಆರ್‌ಸಿ ಮಾಲಕ ಅಬ್ದುಲ್ ಖಾದರ್ ಅವರ ವಿರುದ್ಧ ದೂರು ದಾಖಲಾಗಿದೆ. ಇಲ್ಲಿ ಖಾದರ್ ಅವರು ತಪ್ಪುದಾರನಲ್ಲದಿದ್ದರೂ ವಿಮೆ ಹೊಂದಿರುವ ಕಾರಣ ಅವರ ಮೇಲೆ ಪ್ರಕರಣ ದಾಖಲು ಆಗಿದೆ. ವಿಚಾರಣೆ ಸಂದರ್ಭದಲ್ಲಿ ತನಗೆ ನಕಲಿ ವಿಮೆ ನೀಡಿ ವಂಚಿಸಿದ ಆರೋಪಿ ಬಗ್ಗೆ ಅವರು ಮಾಹಿತಿ ನೀಡಿದ ಅನಂತರ ನಕಲಿ ವಿಮೆ ನೀಡಿದ ಆರ್‌ಟಿಒ ದಲ್ಲಾಳಿ ಅಶ³ಕ್ ವಿರುದ್ಧ ಪ್ರಕರಣ ದಾಖಲಾಗಲಿದೆ.
ಅಬ್ದುಲ್ ಖಾದರ್ ಎನ್ನುವ ವ್ಯಕ್ತಿ ಜಲೀಲ್ ಅವರಿಗೆ ಆಟೋ ರಿಕ್ಷಾ ವಾಹನ ಮಾರಾಟ ಮಾಡಿದ್ದು, ಜಲೀಲ್ ವಿಮೆಯನ್ನು ತನ್ನ ಹೆಸರಿಗೆ ಬದಲಾಯಿಸಲು ಮುಂದಾದ ಸಂದರ್ಭ ನಕಲಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಅಶ³ಕ್ ಎಂಬಾತ ಖಾದರ್ ಅವರಿಗೆ ಆರ್‌ಸಿ ಬದಲಾವಣೆ ಮಾಡುವ ಸಂದರ್ಭ ಅಧಿಕೃತ ಸಂಸ್ಥೆಯ ಏಜೆನ್ಸಿ ಕೋಡ್ ಬಳಸಿ ಖಾದರ್ ಹೆಸರಿನಲ್ಲಿ ವಿಮೆ ನೀಡಿದ್ದಾನೆ. ಖಾದರ್ ಅವರು ಅಸಲಿ ವಿಮೆ ಯೆಂದೇ ಭಾವಿಸಿ ಜಲೀಲ್‌ಗೆ ಆಟೋ ಮಾರಾಟ ಮಾಡಿದ್ದಾರೆ. ಹೀಗಾಗಿ ಖಾದರ್ ಅವರು ನೀಡುವ ದೂರಿನ ಆಧಾರದಲ್ಲಿ ನಕಲಿ ವಿಮೆ ತಯಾರಿಸಿದ ಅಶ³ಕ್‌ನ ವಿಚಾರಣೆ ನಡೆಯಲಿದೆ. ಎಡಿಟ್ ಕೇಂದ್ರಗಳ ಮೇಲೆ ಪೊಲೀಸ್ ಕಣ್ಣು..!
ಅಧಿಕೃತ ಏಜೆನ್ಸಿಯ ಅಸಲಿ ವಿಮೆಯೊಂದನ್ನು ಪಡೆದು ಅದರಲ್ಲಿ ಕೋಡ್ ಬಳಸಿ ನಕಲಿ ವಿಮೆ ಮಾಡಲಾಗುತ್ತಿದೆ. ಇದನ್ನು ಫೋಟೋಶಾಫ್ ಮೂಲಕ ತಿದ್ದುಪಡಿ ಮಾಡಿ ನೀಡಲಾಗುತ್ತಿದ್ದು, ಗ್ರಾಹಕರಿಗೆ ವಂಚನೆಯ ಸುಳಿವು ಸಿಗುತ್ತಿರಲಿಲ್ಲ. ಹೀಗಾಗಿ ಕಾನೂನು ಬಾಹಿರವಾಗಿ ವಿಮೆ ಎಡಿಟ್ ಮಾಡುವ ಕೇಂದ್ರಗಳ ಪತ್ತೆಗೂ ಪೊಲೀಸರು ದೃಷ್ಟಿ ನೆಟ್ಟಿದ್ದಾರೆ. ನಕಲಿ ವಿಮೆಯ ಸೂತ್ರಧಾರನನ್ನು ವಿಚಾರಿಸಿದರೆ ಈ ಎಡಿಟ್ ಮೂಲ ಬಹಿರಂಗಗೊಂಡು ವಂಚನೆಯ ಪೂರ್ಣ ಸತ್ಯ ಹೊರಬರಲಿದೆ.