Advertisement

Udupi ಪರ್ಯಾಯೋತ್ಸವಕ್ಕೆ ಜಿಲ್ಲಾಡಳಿತದ ಸಿದ್ಧತೆ

11:30 PM Jan 16, 2024 | Team Udayavani |

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

ಸ್ವಚ್ಛತೆ, ಮೊಬೈಲ್‌ ಶೌಚಾಲಯ, ಕುಡಿಯುವ ನೀರು ಸಹಿತ ನಗರದ ಅಂದ, ಚಂದ ಹೆಚ್ಚಿಸುವುದು ಸೇರಿ ಅಗತ್ಯ ಮೂಲ ಸೌಕರ್ಯದ ವಿಭಾಗವನ್ನು ನಗರಸಭೆಯಿಂದ ನಿರ್ವಹಿಸಲಾಗುತ್ತಿದೆ. ಪಾರ್ಕಿಂಗ್‌, ಪರ್ಯಾಯ ಮೆರವಣಿಗೆ ಸೇರಿದಂತೆ ಶ್ರೀಕೃಷ್ಣ ಮಠದ ಸುತ್ತಲು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವುದೇ ಸಮಸ್ಯೆಯಲ್ಲಿ ನೆರವೇರಲು ಪೊಲೀಸ್‌ ಇಲಾಖೆಯಿಂದ ಕಣ್ಗಾವಲು ಮಾಡಲಾಗುತ್ತಿದೆ.

8 ಆ್ಯಂಬುಲೆನ್ಸ್‌
ಆರೋಗ್ಯ ಇಲಾಖೆಯಿಂದ ತುರ್ತು ಸೇವೆಗೆ ಅನುಕೂಲವಾಗುವಂತೆ 8 ಆ್ಯಂಬುಲೆನ್ಸ್‌ಗಳನ್ನು ಸಿದ್ಧಪಡಿಸಿಕೊಳ್ಳ ಲಾಗಿದೆ. ಅಗ್ನಿಶಾಮಕ ದಳದಿಂದ ಅಗತ್ಯ ಅಗ್ನಿಶಾಮಕ ವಾಹನವನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ತಂಡಗಳನ್ನು ಮೆರವಣಿಗೆ ಜೋಡಿಸುವುದು, ಪ್ರವಾಸೋದ್ಯಮ ಇಲಾಖೆಯಿಂದ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುವ ಕಾರ್ಯ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಪರ್ಯಾಯದ ಯಶಸ್ವಿಗಾಗಿ ಅಣಿಯಾಗುತ್ತಿವೆ.

ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಪರ್ಯಾಯ ಮಹೋತ್ಸವಕ್ಕೆ ಹಿಂದಿನಿಂದಲೂ ಯಾವ ರೀತಿಯಲ್ಲಿ ಸಹಕಾರ, ವ್ಯವಸ್ಥೆ ಮಾಡಿಕೊಡಲಾಗುತ್ತಿದೆಯೋ ಅದೇ ಮಾದರಿ ಈ ಪರ್ಯಾಯದಲ್ಲೂ ಮುಂದುವರಿಸಿದ್ದೇವೆ. ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯಸಾಧಿಸಲು ಅನುಕೂಲವಾಗುವಂತೆ ಈಗಾಗಲೇ ನಿರ್ದಿಷ್ಟ ಸೂಚನೆಯನ್ನು ನೀಡಲಾಗಿದೆ. ಸಚಿವರು ಸಹಿತವಾಗಿ ಸರಕಾರದ ವ್ಯವಸ್ಥೆಯೊಳಗಿನ ಗಣ್ಯರಿಗೆ ಉಡುಪಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next