Advertisement
ಎನ್‌ಟಿಪಿಸಿಯ ಅಪೂರ್ಣ ವಸತಿಗೃಹ ಕಟ್ಟಡಗಳಿರುವ ಪ್ರದೇಶದ ಸುಮಾರು 25 – 30ಎಕ್ರೆ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಉಡುಪಿಯ ಹಿಂದಿನ ಜಿಲ್ಲಾಧಿಕಾರಿಯ ಬೇಡಿಕೆ ಪತ್ರದ ಮೇರೆಗೆ ಗುರುತಿಸಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ರವಾನಿಸಿದ್ದಾರೆ. ವಾಯುಸೇನಾ ಅಧಿಕಾರಿಗಳು ಪ್ರದೇಶವನ್ನು ವೀಕ್ಷಿಸಲಿದ್ದು, ಮುಂದೆ ಹಸ್ತಾಂತರ ಪ್ರಕ್ರಿಯೆ ಆಗಬೇಕಿದೆ ಎಂದು ಕೆಐಎಡಿಬಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಕರಾವಳಿಗೆ ಉಗ್ರರ ನುಸುಳುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ರಾಡಾರ್ ಸ್ಥಾಪನೆ ಅತ್ಯಗತ್ಯ. ಕೇಂದ್ರ ಸ್ಥಾಪನೆಯಾದರೆ ಪಡುಬಿದ್ರಿ – ಪಾದೆಬೆಟ್ಟು ಗ್ರಾಮದ ಈ ಪ್ರದೇಶವು ಹೈ ಸೆಕ್ಯೂರಿಟಿ ಪ್ರದೇಶವಾಗಲಿದೆ. ನಂದಿಕೂರು ಭಾಗದಿಂದ ಈ ಪ್ರದೇಶಕ್ಕೆ ರಸ್ತೆ ಸಂಪರ್ಕವನ್ನೂ ಕಲ್ಪಿಸಬೇಕಾಗಿದೆ. ಇಲ್ಲಿ ಜನನಿಬಿಡ ಪ್ರದೇಶವಾಗಲೀ, ಹೆಚ್ಚು ಮನೆಗಳಾಗಲೀ ಇರದು ಎಂದೂ ಕೆಐಎಡಿಬಿ ಮೂಲಗಳು ತಿಳಿಸಿವೆ. ಸೂಕ್ತ ನಿವೇಶನ ಹಂಚಿಕೆಯಾಗಲಿ
ರಾಡಾರ್ ಸ್ಥಾಪನೆಗೆ ಆಕ್ಷೇಪ ಇಲ್ಲ. ಆದರೆ ಇಲ್ಲಿನ ಮೂಲ ನಿವಾಸಿಗಳಿಗೆ ಸೂಕ್ತ ನಿವೇಶನಗಳನ್ನು ಗುರುತಿಸಿ ಸ್ಥಳಾಂತರಿಸಿದ ಬಳಿಕವಷ್ಟೇ ಭೂಸ್ವಾಧೀನಕ್ಕೆ ಮುಂದಾಗ ಬೇಕೆಂದು ಪಡುಬಿದ್ರಿ ಗ್ರಾ.ಪಂ. ಸದಸ್ಯ ಶ್ರೀನಿವಾಸ ಶರ್ಮ ಒತ್ತಾಯಿಸಿದ್ದಾರೆ.