Advertisement

PM ಮೋದಿಗೆ ಉಡುಗೊರೆ ನೀಡಲು 3 ಕೆಜಿ ಬೆಳ್ಳಿಯ ಕಮಲ ತಯಾರಿ

02:08 AM Jun 10, 2024 | Team Udayavani |

ಶ್ರೀನಗರ: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇ ರಿದ ಮೋದಿ ಅವರಿಗೆ ಉಡುಗೊರೆ ನೀಡುವುದಕ್ಕಾಗಿ ಜಮ್ಮುವಿನ ಆಭರಣ ವ್ಯಾಪಾರಿಯೊಬ್ಬರು 3ಕೆಜಿ ತೂಕದ ಬೆಳ್ಳಿಯ ಕಮಲವನ್ನು ತಯಾರಿಸಿದ್ದಾರೆ.

Advertisement

ಮುಥಿ ಗ್ರಾಮದ ನಿವಾಸಿಯಾಗಿರುವ ರಿಂಕು ಚೌಹಾಣ್‌ 370ನೇ ವಿಧಿ ರದ್ದುಗೊಳಿಸಿದ್ದಕ್ಕಾಗಿ ಹಾಗೂ ರಾಮ ಮಂದಿರ ನಿರ್ಮಿ ಸಿದ್ದಕ್ಕಾಗಿ ಮೋದಿ ಅವರಿಗೆ ವಿಶೇಷವಾಗಿ ಏನಾದರು ಉಡುಗೊರೆ ನೀಡಲು ಬಯಸಿದ್ದರು. ಇದರ ಜತೆಗೆ ಮೂರನೇ ಬಾರಿಯೂ ಮೋದಿ ಅವರೇ ಪಿಎಂ ಆಗುವ ವಿಶ್ವಾಸವಿದ್ದ ಕಾರಣ ಪದಗ್ರಹಣದ ಬಳಿಕವೇ ಉಡುಗೊರೆ ನೀಡಬೇಕು ಎಂದುಕೊಂಡಿದ್ದರು.

ಅದರಂತೆ 3ಕೆ.ಜಿ ಸಂಪೂರ್ಣ ಬೆಳ್ಳಿ ಬಳಸಿ ಬಿಜೆಪಿ ಚಿಹ್ನೆಯಾದ ಕಮಲವನ್ನು ತಯಾರಿಸಿದ್ದಾರೆ. ಖುದ್ದು ಅವರೇ ಕುಸುರಿ ಕೆಲಸವನ್ನೂ ನಡೆಸಿದ್ದು ಇದಕ್ಕಾಗಿ 15 ರಿಂದ 20 ದಿನಗಳ ಸಮಯ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಕಳೆದ 20 ವರ್ಷದಿಂದಲೂ ಬಿಜೆಪಿ ಜತೆಗೆ ಒಡನಾಟ ಹೊಂದಿರುವ ರಿಂಕು ಪ್ರಸಕ್ತ ಬಿಜೆಪಿ ಯುವಮೋರ್ಚಾದ ವಕ್ತಾರರೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next