Advertisement

PM ಮೋದಿ ಜತೆಗಿನ ಮೆಲೋನಿ ಸೆಲ್ಫಿ ವೀಡಿಯೋ ಭಾರೀ ವೈರಲ್‌

12:30 AM Jun 16, 2024 | Team Udayavani |

ಬರಿ(ಇಟಲಿ): ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸೆಲ್ಫಿ ವೀಡಿಯೋವೊಂದನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಎಕ್ಸ್‌ನಲ್ಲಿ ಹಂಚಿ ಕೊಂಡಿದ್ದು, ಭಾರೀ ವೈರಲ್‌ ಆಗಿದೆ. ಈ ವೀಡಿ ಯೋ ವನ್ನು ಪ್ರಧಾನಿ ಮೋದಿ ಅವರು ಮರು ಹಂಚಿಕೆ ಮಾಡಿಕೊಂಡಿದ್ದು, “ಇಂಡಿಯಾ-ಇಟಲಿ ಗೆಳೆತನ ಚಿರಾಯುವಾಗಲಿ’ ಎಂದು ಬರೆದುಕೊಂಡಿದ್ದಾರೆ.

Advertisement

ಪ್ರಧಾನಿ ಜತೆಗಿನ 5 ಸೆಕೆಂಡ್‌ನ‌ ಸೆಲ್ಫಿ ವೀಡಿಯೋ ವನ್ನು ಮೆಲೋನಿ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮೆಲೋನಿ ಹಿಂದೆ ಮೋದಿ ನಗುತ್ತಿರುವುದನ್ನು ಕಾಣಬಹುದು. ಇದಕ್ಕೂ ಮೊದಲು ಇಬ್ಬರು ನಾಯಕರ ಸೆಲ್ಫಿ ಪೋಟೋ ಕೂಡ ವೈರಲ್‌ ಆಗಿತ್ತು.

ಈ ಮಧ್ಯೆ, ಉಭಯ ನಾಯಕರು ಭಾರತ-ಮಧ್ಯ ಪ್ರಾಚ್ಯ ಪೂರ್ವ-ಯುರೋಪ್‌ ಎಕಾನಿಕ್‌ ಕಾರಿಡಾರ್‌ ಸೇರಿದಂತೆ ದ್ವಿಪಕ್ಷೀಯ ಸಹಕಾರ ಪ್ರಗತಿಯ ಕುರಿತು ಮಾತುಕತೆಗಳನ್ನು ನಡೆಸಿದರು.

ಜಿ7 ಶೃಂಗದಲ್ಲಿ ಗ್ಲೋಬಲ್‌ ಸೌತ್‌ ಪರ ಮೋದಿ ಧ್ವನಿ
ಪ್ರಪಂಚಾದ್ಯಂತ ಅನಿಶ್ಚಿತತೆಗಳು ಮತ್ತು ಒತ್ತಡಗಳ ಭಾರವನ್ನು ಗ್ಲೋಬಲ್‌ ಸೌತ್‌ ರಾಷ್ಟ್ರಗಳು ಹೊರುತ್ತಿವೆ. ಹಾಗಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ಲೋಬಲ್‌ ಸೌತ್‌ ರಾಷ್ಟ್ರಗಳ ಆತಂಕಗಳು ಮತ್ತು ಆದ್ಯತೆಗಳನ್ನು ಪ್ರಸ್ತುತಪಡಿಸುವುದು ಭಾರತವು ತನ್ನ ಜವಾಬ್ದಾರಿ ಎಂದು ಭಾವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Advertisement

ಇಟಲಿಯಲ್ಲಿ ಆಯೋಜಿಸಲಾಗಿರುವ ಜಿ-7 ಶೃಂಗಸಭೆಯಲ್ಲಿ ಮಾತನಾ ಡಿದ ಪ್ರಧಾನಿ ಮೋದಿ ಅವರು, ಈ ಪ್ರಯತ್ನಗಳಲ್ಲಿ ನಾವು ಆಫ್ರಿಕಾಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಗ್ರೂಪ್‌ಗೆ ಆಫ್ರಿಕಾ ಒಕ್ಕೂಟವನ್ನು ಶಾಶ್ವತ ಸದಸ್ಯವನ್ನಾಗಿಸಿದ್ದಕ್ಕೆ ಭಾರತವು ಹೆಮ್ಮೆ ಪಡುತ್ತದೆ ಎಂದರು.
ಕೃತಕ ಬುದ್ಧಿಮತ್ತೆ ಸಹಿತ ತಂತ್ರಜ್ಞಾನ ಕ್ಷೇತ್ರದಲ್ಲಿನ ಏಕಸ್ವಾಮ್ಯತೆ ತೊಡೆದು ಹಾಕಬೇಕು ಎಂದು ಹೇಳಿದ ಮೋದಿ ಅವರು, ತಂತ್ರಜ್ಞಾನವನ್ನು ವಿನಾಶದ ಬದಲಿಗೆ ಸೃಜನಾತ್ಮಕವಾಗಿ ರೂಪಿಸ ಬೇಕು. ತಂತ್ರಜ್ಞಾನ ಏಕಸ್ವಾಮ್ಯತೆ ತಡೆಯುವುದಕ್ಕಾಗಿಯೇ ಕೃತಕ ಬುದ್ಧಿಮತ್ತೆ ಕುರಿತು ಕಾರ್ಯತಂತ್ರ ರೂಪಿಸಲಾದ ಐದು ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next