Advertisement
ಅನುಭವ ಮಂಟಪದ ಆವರಣ ಪರಿಶೀಲಿಸಿ ನೂತನ ಅನುಭವಮಂಟಪದ ಶಿಲಾನ್ಯಾಸ ಸ್ಥಳ ಗುರುತಿಸಿದರು. ಈ ಕಾರ್ಯಕ್ರಮಕ್ಕಆಂಧ್ರ ಮತ್ತು ಮಹಾರಾಷ್ಟ್ರ ಸೇರಿದಂತೆ ಸುಮಾರು 25 ಸಾವಿರಕ್ಕೂ ಮೇಲ್ಪಟ್ಟುಬಸವಾಭಿಮಾನಿಗಳು ಬರುವ ನಿರೀಕ್ಷೆಇದ್ದು, ಸಂಪ್ರದಾಯದಂತೆ ಪೂಜೆಗಳು ನಡೆಯಬೇಕು ಮತ್ತು 25 ಸಾವಿರ ಜನ ಕುಳಿತುಕೊಳ್ಳುವಷ್ಟು ಪೆಂಡಾಲ್ ಹಾಕಬೇಕು ಹಾಗೂ ಸಂಚಾರಕ್ಕೆಯಾವುದೇ ಸಮಸ್ಯೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಬಸವಕಲ್ಯಾಣ: ನೂತನಅನುಭವ ಮಂಟಪ ಶಿಲಾನ್ಯಾಸಕಾರ್ಯಕ್ರಮಕ್ಕೆ ಹೆಚ್ಚಿನಸಂಖ್ಯೆಯಲ್ಲಿ ಬಸವಾಭಿಮಾನಿಗಳು ಮತ್ತು ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಯಶಸ್ವಿಗೊಳಿಸಬೇಕೆಂದು ಪಶುಸಂಗೋಪನಾ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.
ಅನುಭವ ಮಂಟಪದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಜ.6ರಂದು ಸಿಎಯಡಿಯೂರಪ್ಪ ಐತಿಹಾಸಿಕ್ಕೆಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನೂತನ ಅನುಭವ ಮಂಟಪನಿರ್ಮಾಣಕ್ಕಾಗಿ ಈಗಾಗಲೇ 600ಕೋಟಿ ಅನುದಾನ ಮಂಜೂರುಮಾಡಿ, ಅದರಲ್ಲಿ 100 ಕೋಟಿರೂ. ಬಿಡುಗಡೆ ಮಾಡಲಾಗಿದೆಅನುಭವ ಮಂಟಪ 72 ಎಕರಭೂಮಿಯಲ್ಲಿ 182 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಬರುವ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶ್ರೀ ಚನ್ನಬಸವ ಪಟ್ಟದ್ದೇವರ ಸಂಕಲ್ಪದಂತೆ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರುತ್ತಿದೆ. ಇಂಥಹ ಐತಿಹಾಸಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಸಾಕ್ಷಿಯಾಗಬೇಕು ಎಂದರು.
ಅನುಭವ ಮಂಟಪ ಅಧ್ಯಕ್ಷ ಶ್ರೀ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ,ದೆಹಲಿಯಲ್ಲಿ ನೂತನ ಸಂಸತ್ ಹಾಗೂ ಬಸವಕಲ್ಯಾಣದಲ್ಲಿ 12ನೇ ಶತಮಾನದ ಸಂಸತ್ ನಿರ್ಮಾಣಕ್ಕಾಗಿ ಶಿಲಾನ್ಯಾಸನೆರವೇರಿಸುತ್ತಿರುವುದು ಸಂತೋಷದಸಂಗತಿ. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ಅರ್ಧಕ್ಕೆ ನಿಲ್ಲಬಾರದು. ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಕಾರ್ಯಕರ್ತರಮತ್ತು ಎಲ್ಲ ಸಮುದಾಯದ ಜನರು ಆಗಮಿಸುವಂತೆ ಮನವಿ ಮಾಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದಶ್ರೀ ಗುರುಬಸವ ಪಟ್ಟದ್ದೇವರು,ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಎಸ್‌ಪಿ ಡಿ.ಎಲ್.ನಾಗೇಶ, ಮಾಜಿಶಾಸಕ ಮಲ್ಲಿಕಾರ್ಜುನ ಖೂಬಾ,ಸಹಾಯಕ ಆಯುಕ್ತ ಭುವನೇಶಪಾಟೀಲ, ತಹಶೀಲ್ದಾರ್ ಸಾವಿತ್ರಿಸಲಗರ, ಬಸವರಾಜ ಧನ್ನೂರ,ಬಿಜೆಪಿ ಅಧ್ಯಕ್ಷ ಅಶೋಕ ವಕಾರೆ,ಕೃಷ್ಣ ಗೋಣೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ದೀಕಪ ಗಾಯಕವಾಡ,ಬಿಜೆಪಿ ಮುಖಂಡ ಶರಣು ಸಲಗರ,ಬೀದರ ನಗರಾಭಿವೃದ್ಧಿ ಅಧ್ಯಕ್ಷ ಬಾಬು ವಾಲಿ ಇದ್ದರು.