Advertisement

ಹನುಮಾಲೆ ವಿಸರ್ಜನೆಗೆ ನಿರ್ಬಂಧದ ಮಧ್ಯದಲ್ಲೂ ಅಂಜನಾದ್ರಿಯಲ್ಲಿ ಪೂರ್ವ ಸಿದ್ಧತೆ

03:51 PM Dec 15, 2021 | Team Udayavani |

ಗಂಗಾವತಿ: ಪ್ರತಿ ವರ್ಷದಂತೆ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಯಲ್ಲಿ ಡಿಸೆಂಬರ್ ಹದಿನಾರು ರಂದು ಹನುಮ ಮಾಲಾ ಧಾರಿಗಳು ಮಾಲೆ ವಿಸರ್ಜನೆಗೆ ಜಿಲ್ಲಾಡಳಿತದ ನಿರ್ಬಂಧದ ಮಧ್ಯದಲ್ಲೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಪೂರ್ವ ಸಿದ್ಧತೆ ಮಾಡಿದ್ದಾರೆ .

Advertisement

ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ವಾಹನ ಮತ್ತು ಪಾದಯಾತ್ರೆ ಮೂಲಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಲಿದ್ದಾರೆ . ಗಂಗಾವತಿ ನಗರದಲ್ಲಿ ಶೋಭಾಯಾತ್ರೆ ಮತ್ತು ಬಹಿರಂಗ ಧಾರ್ಮಿಕ ಸಭೆಗೆ ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಗಳು  ವ್ಯವಸ್ಥೆ ಮಾಡಿವೆ .

ಕಳೆದ 2 ವರ್ಷಗಳಿಂದ ಕೊರೋನಾ ರೋಗದ ಪರಿಣಾಮ ಹನುಮ ಮಾಲಾಧಾರಿಗಳು ತಮ್ಮತಮ್ಮ ಊರುಗಳಲ್ಲೇ ಮಾಲೆ ವಿಸರ್ಜನೆ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು ಆದರೂ ಕಳೆದ ವರ್ಷ ಬೆಳಗಿನ ಜಾವ 4 ಗಂಟೆ ಒಳಗೆ ಎಲ್ಲಾ ಹನುಮಾಲಾಧಾರಿಗಳು ಅಂಜನಾದ್ರಿ ಬೆಟ್ಟವನ್ನು ಹತ್ತಿ ಅಲ್ಲಿ ಮಾಲೆ ವಿಸರ್ಜನೆ ಮಾಡಿ ತಮ್ಮ ಊರುಗಳಿಗೆ ತೆರಳಿದ್ದರು .

ಈ ವರ್ಷವೂ ಸಹ ಅಂಜನಾದ್ರಿಗೆ ಆಗಮಿಸದಂತೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಈ ಮಧ್ಯೆ ತಾಲ್ಲೂಕು ಆಡಳಿತ ವತಿಯಿಂದ ವಾಹನಗಳ ಪಾರ್ಕಿಂಗ್ ಆಗಮಿಸುವ ಭಕ್ತರಿಗೆ ಊಟ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ .

Advertisement

ಅಂಜನಾದ್ರಿ ಬೆಟ್ಟದಮೇಲೆ ಹನುಮ ಮಾಲೆವಿಸರ್ಜನೆ ಪವಮಾನ ಹೋಮ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ .ಭಜರಂಗದಳ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ .ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದೆ .ಬಸ್ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸೋನಾಪುರ್ ಹಲ್ಲೆ ಮೂಲಕ ರಂಗಾಪುರ ಮಾರ್ಗದಲ್ಲಿ ಸಣ್ಣಪುಟ್ಟ ವಾಹನಗಳು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ .

ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧಗಳನ್ನು ಸಡಿಲ ಮಾಡುವಂತೆ ಮಾಜಿ ಎಂಎಲ್ಸಿ ಎಚ್. ಆರ್. ಶ್ರೀನಾಥ್ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ .

ಕರೋನಾ ಮಾರ್ಗಸೂಚಿ ಅನುಸರಿಸಿ ಧಾರ್ಮಿಕ ಕಾರ್ಯಕ್ರಮಗಳಾದ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಪರಣ್ಣ ಮನವಳ್ಳಿ ಉದಯವಾಣಿಗೆ ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next