Advertisement
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೇಮಕುಮಾರಿ, ರಾಮದಾಸ್ ಮತ್ತು ನನ್ನ ವಿಚಾರದಲ್ಲಿ ರಾಜಕೀಯ ಒತ್ತಡಗಳಿಂದಾಗಿ ನನಗೆ ಅನ್ಯಾಯವಾಗಿದೆ. ರಾಮದಾಸ್ ಅವರಿಗೂ ನನ್ನನ್ನು ರಾಜಕೀಯವಾಗಿ ಬೆಳೆಸಬೇಕೆಂಬ ಆಸೆ ಇತ್ತು. ಆದರೆ, ಬೇರೆ ಬೇರೆಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ರಾಮದಾಸ್ ವಿರುದ್ಧ ನಾನು ಸ್ಪರ್ಧಿಸಿದರೆ ಗೆಲ್ಲುತ್ತೇನೆ ಎಂಬುದು ಗೊತ್ತಿದೆ. ಆದರೆ, ನನಗೆ ಮಕ್ಕಳ ಭವಿಷ್ಯ ಮುಖ್ಯ. ಹೀಗಾಗಿ ಅವರೇ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಿ, ಇಲ್ಲವಾದರೆ ನನಗೆ ಎಲ್ಲಿ
ಅನ್ಯಾಯವಾಯಿತೋ ಅಲ್ಲಿಯೇ ನ್ಯಾಯ ಕಂಡುಕೊಳ್ಳಲು ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಆದರೆ, ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಉಪೇಂದ್ರ ಅವರ ಕೆಪಿಜೆಪಿ, ಅನುಪಮಾ ಶೆಣೈ ಅವರ ಪಕ್ಷ ಆಗಬಹುದು, ಯಾವುದೂ ಇಲ್ಲ ಎಂದರೆ ಪಕ್ಷೇತರವಾಗಿಯಾದರೂ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ನಾನು ಯಾವಾಗ ಹೋರಾಟಕ್ಕೆ ಮುಂದಾದರೂ ಈಕೆ ಮುಂದೆ ಬಂದು ತೊಂದರೆ ಕೊಡುತ್ತಿರುವುದನ್ನು ನೋಡಿದರೆ, ಇದರ ಹಿಂದೆ ಯಾರದೋ ಕುಮ್ಮಕ್ಕಿದೆ ಅನಿಸುತ್ತೆ, ನನ್ನ ಕ್ಷೇತ್ರದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ, ಅವರೇ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.