ಹುಟ್ಟುಹಬ್ಬ ದಿನ ಅವರ ಸಹೋದರನ ಸಿನಿಮಾ ಲಾಂಚ್ ಆಗಿದೆ. ಜೊತೆಗೆ ಟೈಟಲ್ ಕೂಡಾ ಬಿಡುಗಡೆಯಾಗಿದೆ. ಹಾಗಾದರೆ, ಪ್ರೇಮ್ ಈ ಬಾರಿ ಯಾವ ಟೈಟಲ್‌ನಡಿ ಸಿನಿಮಾ ಮಾಡುತ್ತಾರೆಂಬ ಕುತೂಹಲಕ್ಕೆ ಉತ್ತರ “ಏಕಲವ್ಯ’. ಹೌದು, ರಾಣಾ ನಾಯಕರಾಗಿರುವ ಚಿತ್ರಕ್ಕೆ ಪ್ರೇಮ್ “ಏಕಲವ್ಯ’ ಎಂದು ಹೆಸರಿಟ್ಟಿದ್ದಾರೆ.
Advertisement
ಹಾಗಂತ ಕಥೆಗೂ, ಟೈಟಲ್‌ಗೂ ಏನು ಸಂಬಂಧ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರೇಮ್ ಯಾರಿಗೂ ಕಥೆ ಬಿಟ್ಟುಕೊಡೋದಿಲ್ಲ. ಅಂದಹಾಗೆ, ಟೈಟಲ್ ಡಿಸೈನ್ ನೋಡಿದಾಗ ನಿಮಗೆ “ಏಕ್ ಲವ್ ಯಾ’ ಎಂದು ಕಾಣುತ್ತದೆ. ಆದರೆ ಸಿನಿಮಾದ ಶೀರ್ಷಿಕೆ “ಏಕಲವ್ಯ’. ಲವ್ ಇಸ್ ಆಲ್ ಯು ನೀಡ್ ಎಂಬ ಟ್ಯಾಗ್‌ಲೈನ್ ಕೂಡಾ ಇದೆ.
ಸಿನಿಮಾಕ್ಕೆ ಬೇಕಾದ ಸಾಕಷ್ಟು ತಯಾರಿ ನಡೆಸಿದ್ದಾರೆ. ನಟನೆ, ಫೈಟ್, ಡ್ಯಾನ್ಸ್ … ಹೀಗೆ ಎಲ್ಲದರಲ್ಲೂ ಪಕ್ಕಾ ಆಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ “ದಿ ವಿಲನ್’ ಸಿನಿಮಾ ಸೆಟ್‌ನಲ್ಲಿ ರಾಣಾ ನಟನೆ ಕಲಿತಿದ್ದಾರಂತೆ. ಅದು ಹೇಗೆ ಎಂದು ನೀವು ಕೇಳಬಹುದು. “ದಿ ವಿಲನ್’ ಚಿತ್ರದಲ್ಲಿನ ಸುದೀಪ್ ಪಾತ್ರದ ನಟನೆಯನ್ನು ಸುದೀಪ್ ಮಾಡುವ ಮೊದಲು ರಾಣಾ ಮಾಡುತ್ತಿದ್ದರಂತೆ. ಸ್ವತಃ ಸುದೀಪ್ ಕೂಡಾ ರಾಣಾ ಬೆನ್ನುತಟ್ಟಿ, “ಮೊದಲು ನೀನು ಮಾಡಿ ತೋರಿಸು’ ಎನ್ನುತ್ತಿದ್ದರಂತೆ. ಹಾಗಾಗಿ, ಪ್ರೇಮ್ ಸೆಟ್‌ನಲ್ಲೇ ರಾಣಾ ನಟನೆಯನ್ನು ಕಲಿತಿದ್ದಾರೆನ್ನಬಹುದು.
Related Articles
ವಿಚಾರದಲ್ಲಿ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಈ ಬಾರಿ ಪಕ್ಕಾ ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿಸುತ್ತೇನೆ. ಹೊಸ ಮುಖಗಳಿಗೆ ಮೊದಲ ಆದ್ಯತೆ’ ಎನ್ನುವುದು ಪ್ರೇಮ್ ಮಾತು. ಈ ಸಿನಿಮಾವನ್ನು ಪ್ರೇಮ್ ಹಾಗೂ ರಕ್ಷಿತಾ ತಮ್ಮ ಹೋಂಬ್ಯಾನರ್‌ನಲ್ಲೇ ನಿರ್ಮಿಸುತ್ತಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.
Advertisement